ಮೈಸೂರು: ಕಾಂಗ್ರೆಸ್‍ನಿಂದಲೇ ಎಲ್ಲರೂ ಸ್ವಾತಂತ್ರ್ಯ ಗಾಳಿ ಸೇವಿಸುತ್ತಿರುವುದು. ಮೋದಿ ಪಿಎಂ ಆಗಿದ್ದು ಕೂಡ ಕಾಂಗ್ರೆಸ್ ಕೊಟ್ಟ ಸಂವಿಧಾನದಿಂದ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ವರುಣಾ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಸ್ವಾತಂತ್ರ್ಯ ಹೋರಾಟಕ್ಕೆ ಆರ್ ಎಸ್ ಎಸ್ ಕೊಡುಗೆ ಏನು..?, ಬ್ರಿಟಿಷರಿಗೆ ಕ್ಷಮದಾನ ಪತ್ರ ಬರೆದ ಸವಾರ್ಕರ್ ಈಗ ಆರ್ ಎಸ್ ಎಸ್ ಬಿಜೆಪಿ ಪಾಲಿಗೆ ವೀರ ಸಾವರ್ಕರ್. ತ್ರಿವರ್ಣ ಧ್ವಜಕ್ಕೆ ವಿರೋಧ ಮಾಡಿದ್ದು ಆರ್‍ಎಸ್‍ಎಸ್. ಈಗ ಬಿಜೆಪಿ ಯವರು ಹರ್ ಘರ್ ತಿರಂಗಾ ಅಂತಾ ನಾಟಕ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಆರ್ ಎಸ್ ಎಸ್ ನವರಿಗೆ ರಾಷ್ಟ್ರ ಧ್ಚಜದ ಮೇಲೆ ಗೌರವವಿದೆಯಾ?. ನಾಚಿಕೆ ಆಗಲ್ವಾ ಮೋದಿ? ಹರ್ ಘರ್ ತಿರಂಗಾ ಅನ್ನೋಕೆ. ಬಿಜೆಪಿ ಗೆ ಕನಸು ಮನಸ್ಸಿನಲ್ಲೂ ಮತ ಹಾಕಬೇಕಾ?. ಬಿಜೆಪಿ, ಸಂಘ ಪರಿವಾರದವರು ಈ ದೇಶದ ಪರವಾಗಿ ಇರಲ್ಲ. ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರ ಗೀತೆ ಕಾಂಗ್ರೆಸ್ ಕೊಟ್ಟ ಕೊಡುಗೆ ಎಂದು ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಆರೋಗ್ಯ ಸೇತು ಕಾರ್ಯ ನಿರ್ವಹಿಸುತ್ತಿಲ್ಲ – ವೈಯಕ್ತಿಕ ಮಾಹಿತಿಗಳ ಕತೆಯೇನು?
Advertisement
ಜೆಡಿಎಸ್ ನವರ ಬಗ್ಗೆ ಮಾತಾಡಲ್ಲ. ಅವರು ಒಂಥಾರ ಗಿರಾಕಿಗಳು. ಬಿಜೆಪಿಯಿಂದ ಸಬ್ ಕಾ ವಿಕಾಸ್ ನಹೀ ಹೇ ಸಬ್ ಕಾ ಸರ್ವನಾಶ್. ನಾನು ಸ್ವಾತಂತ್ರ್ಯ ಬರುವುದಕ್ಕಿಂತಾ 12 ದಿನ ಮುಂಚೆ ಹುಟ್ಟಿದ್ದೇನೆ. ಹಾಗಂತಾ ಮೇಷ್ಟ್ರು ಬರೆದು ಕೊಂಡವ್ವನೇ ಮೋದಿಯೂ ಕೂಡ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ ಎಂದು ತಿಳಿಸಿದರು.
Advertisement
ರಾಜ್ಯದಲ್ಲಿ 20 ಅಣೆಕಟ್ಟು ಕಟ್ಟಿದ್ದು ಕಾಂಗ್ರೆಸ್. ಒಂದು ಅಣೆಕಟ್ಟು ಕಟ್ಟಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್. ಐದು ಅಣೆಕಟ್ಟು ಕಟ್ಟಿದ್ದು ಬ್ರಿಟಿಷರು. ಬಿಜೆಪಿ ಕೊಡುಗೆ ಏನು ಹಾಗಾದರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದನ್ನೂ ಓದಿ: ಈದ್ಗಾ ಯಾರ ಪಿತ್ರಾರ್ಜಿತ ಆಸ್ತಿಯೂ ಅಲ್ಲ: ಮುತಾಲಿಕ್