ಹಾಸನ: ನಾನು ರಂಭಾಪುರಿ ಶ್ರೀಗಳ ಬಳಿ ಯಾವುದೇ ನೋವು ತೋಡಿಕೊಂಡಿಲ್ಲ, ಪಶ್ಚಾತ್ತಾಪ ಪಟ್ಟಿಲ್ಲ, ಏನಾಯ್ತು ಅಂತ ವಿವರಿಸಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ರಂಭಾಪುರಿ ಶ್ರೀ ಭೇಟಿಯಾಗಿದ್ದ ಸಿದ್ದರಾಮಯ್ಯ ಅವರು, ಧರ್ಮ ಒಡೆಯುವುದು ಉದ್ದೇಶವಾಗಿರಲಿಲ್ಲ. ನನ್ನನ್ನು ಕೆಲವರು ದಾರಿ ತಪ್ಪಿಸಿದ್ದಾರೆ. ಮುಂದೆ ಧರ್ಮ ಒಡೆಯುವ ಕೆಲಸ ಮಾಡಲ್ಲ ಎಂದು ಪಶ್ಚಾತಾಪ ಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ನಾನು ಯಾವುದೇ ಪಶ್ಚಾತಾಪದ ಮಾತುಗಳನ್ನು ಆಡಿಲ್ಲ. ನಾವು ಲಿಂಗಾಯಿತ ಧರ್ಮ ಮಾಡುವಾಗ ಏನೇನು ಮಾಡಿದ್ದೇನೆ ಅಂತ ಹೇಳಿದ್ದೀನಿ ಅಷ್ಟೇ. ಇದು ಅಪಪ್ರಚಾರ ಆಗಿದೆ. ಧರ್ಮದ ಬಗ್ಗೆ ನಾನೇನು ತಲೆ ಕೆಡಿಸಿಕೊಳ್ಳಲು ಹೋಗಿರಲಿಲ್ಲ. ಶ್ಯಾಮನೂರು ಶಿವಶಂಕರಪ್ಪ ಅವರು ವೀರಶೈವ ಧರ್ಮ ಮಾಡಿ ಅಂತ ಅರ್ಜಿ ಕೊಟ್ಟರು ಆಗಿನಿಂದ ಇದು ಶುರುವಾಯ್ತು ಅಷ್ಟೇ ಎಂದು ಹೇಳಿದರು.
Advertisement
Advertisement
ಬಿಜೆಪಿಯವರು ಹಿಂದುತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಕೋಮುವಾದ ಅಜೆಂಡಾ ಇಟ್ಟುಕೊಂಡು ಎಲ್ಲವನ್ನೂ ಮಾಡ್ತಾ ಇದ್ದಾರೆ. ಹಿಂದೂ ರಾಷ್ಟ್ರ ಮಾಡಬೇಕೆಂಬುದು ಅವರ ಅಜೆಂಡಾ, ಅದನ್ನು ಮಾಡಲು ಹೋಗ್ತಾ ಇದ್ದಾರೆ. ಆದರೆ ಸಂವಿಧಾನದಲ್ಲಿ ಎಲ್ಲ ಧರ್ಮವನ್ನು ಸಮಾನಾಗಿ ಕಾಣಬೇಕು, ಸಮಾನಾಗಿ ಗೌರವಿಸಬೇಕು. ಎಲ್ಲರಿಗೂ ಕೂಡ ಕಾನೂನು ರಕ್ಷಣೆ ಕೊಡಬೇಕು. ತಾರತಮ್ಯ ಮಾಡಬಾರದು ಅಂಥ ಹೇಳ್ತಾರೆ. ಆದರೆ ಬಿಜೆಪಿಯವರು ತಾರತಮ್ಯ ಮಾಡ್ತಾ ಇದ್ದಾರೆ ಎಂದು ಕಿಡಿಕಾರಿದರು.
Advertisement
Advertisement
ಮುಖ್ಯಮಂತ್ರಿಯವರು ಮಂಗಳೂರಿಗೆ ಪ್ರವೀಣ್ ನೆಟ್ಟಾರು ಮನೆಗೆ ಹೋಗಿದ್ದರು. ಹೋಗಬೇಕು ಪರಿಹಾರವನ್ನು ಕೊಡಬೇಕು. ಆದರೆ ಇನ್ನಿಬ್ಬರು ಮುಸಲ್ಮಾನರು ಸತ್ತಿದ್ದಾರಲ್ಲ ಅವರ ಮನೆಗು ಹೋಗಬೇಕು, ಪರಿಹಾರವನ್ನು ಕೊಡಬೇಕಲ್ವಾ. ತೆರಿಗೆ ಹಣದಲ್ಲಿ ಸರ್ಕಾರದಿಂದ ಪರಿಹಾರ ಕೊಡ್ತಾ ಇದ್ದಾರೆ, ಎಲ್ಲರಿಗೂ ಕೊಡಬೇಕು. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಇನ್ಯಾರೆ ಇರಲಿ ಎಲ್ಲರಿಗೂ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಧರ್ಮ ಒಡೆಯುವುದು ನನ್ನ ಉದ್ದೇಶವಲ್ಲ, ಕೆಲವರು ನನ್ನನ್ನ ದಾರಿ ತಪ್ಪಿಸಿದ್ರು: ಸಿದ್ದರಾಮಯ್ಯ
ನಾನು ಹೋದಲೆಲ್ಲ ಕುಪ್ಪು ಬಾವುಟ ಪ್ರದರ್ಶನ ಮಾಡುತ್ತಿದ್ದಾರೆ. ಇಟ್ ಈಸ್ ಎ ಸ್ಟೇಟ್ ಸ್ಪಾನ್ಸ್‍ರ್ಡ್ ಪ್ರೊಟೆಸ್ಟ್. ಹಿಂದೂ ಮಹಾಸಭಾದ ಸಾವರ್ಕರ್ ಅಂತ ಇದ್ದಾರಲ್ಲ ಅವರ ಬಗ್ಗೆ ಮಾತಾಡಿದೆ ಅಂತ ಕಪ್ಪು ಬಾವುಟ ತೋರಿಸುತ್ತಿದ್ದಾರೆ. ದೇರ್ ಈಸ್ ನೋ ಇಂಟಲಿಜೆನ್ಸ್, ದೇರ್ ಈಸ್ ನೋ ಗವರ್ನಮೆಂಟ್, ದೇರ್ ಈಸ್ ಗೌರ್ನೆನ್ಸ್ ಅಟ್ ಆಲ್. ಇದನ್ನು ನಾನು ಹೇಳಿಲ್ಲ ಮಾಧುಸ್ವಾಮಿ ಹೇಳಿದ್ದಾರೆ. ನಾವು ಸರ್ಕಾರ ನಡೆಸುತ್ತಿಲ್ಲ ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಂತ ಇದರ ಅರ್ಥ ಏನು ಎಂದು ಪಶ್ನಿಸಿದರು.
ಬಿಜೆಪಿಯವರು ಯಾವ ನೀಚ ಕೆಲಸ ಮಾಡಲು ತಯಾರಾಗಿದ್ದಾರೆ, ಅವರು ನೀಚರು. ನಮ್ಮದು ದಾವಣಗೆರೆ ಸಮಾವೇಶ ಆಯ್ತಲ್ಲಾ ಆದಾದ ಮೇಲೆ ಭಯಗೊಂಡಿದ್ದಾರೆ. ಸೋಲುವ ಭಯ ಕಾಡಿದೆ. ಅವರಿಗೆ ಅದಕ್ಕೆ ಇವೆಲ್ಲಾ ಮಾಡ್ತಾ ಇದ್ದಾರೆ. ನಾನು ಆ.26 ರಂದು ಕೊಡಗಿಗೆ ಹೋಗಿ ಎಸ್ಪಿ ವಿರುದ್ಧವಾಗಿ ದೊಡ್ಡ ಪ್ರತಿಭಟನೆ ಮಾಡ್ತಾ ಇದ್ದೀನಿ. ತಿತಿಮತಿಯಲ್ಲಿ 10-15 ಹುಡುಗರು ಸೇರ್ಕಂಡು ಗೋ ಬ್ಯಾಕ್ ಸಿದ್ದರಾಮಯ್ಯ ಅಂಥ ಘೋಷಣೆ ಕೂಗುತ್ತಿದ್ದರು. ಅದಾದ ಮೇಲೆ ಮಡಿಕೇರಿಯಲ್ಲಿ ಇದ್ದರು. ಪೊಲೀಸರು ರೌಂಡ್ ಅಪ್ ಮಾಡಿ ಕರ್ಕಂಡು ಹೋಗಲು ಆಗ್ತಿರ್ಲಿಲ್ವಾ, ಆದೇನ್ ದೊಡ್ಡ ಕೆಲಸನಾ. ಅವರೇ ಬಿಟ್ಟು ಸುಮ್ಮನೆ ನಿಂತಿದ್ದಾರೆ ಎಂದು ಕಿಡಿಕಾರಿದರು.