BagalkotDistrictsKarnatakaLatestMain Post

ಚಿನ್ನದ ಫ್ರೇಮ್ ಇರುವ ಸಿದ್ದರಾಮಯ್ಯ ಭಾವಚಿತ್ರ ನೀಡಿ ಸನ್ಮಾನ

ಬಾಗಲಕೋಟೆ: ಚಿನ್ನದ ಫ್ರೇಮ್ ಇರುವ ಸಿದ್ದರಾಮಯ್ಯ ಅವರ ಫೋಟೋ ನೀಡಿ ಮಾಜಿ ಮುಖ್ಯಮಂತ್ರಿಗಳನ್ನು ಇಂದು ಬಾಗಲಕೋಟೆಯಲ್ಲಿ ಸನ್ಮಾನಿಸಲಾಗಿದೆ.

ಈ ಫೋಟೋವನ್ನು ಬ್ಯಾಂಕಾಕ್‍ನಲ್ಲಿ ತಯಾರು ಮಾಡಿಸಲಾಗಿದೆ. 40 ಗ್ರಾಂ ಚಿನ್ನ ಸಹಾಯದಿಂದ ಫ್ರೇಮ್ ತಯಾರಿಸಲಾಗಿದೆ. ಬಾದಾಮಿ ಕಾಂಗ್ರೆಸ್ ಮುಖಂಡ ಮಹೇಶ್ ಹೊಸಗೌಡ ಅವರು ಈ ಸಿದ್ದರಾಮಯ್ಯ ಅವರಿಗೆ ಫೋಟೋ ಫ್ರೇಮ್ ನೀಡಿ ಸನ್ಮಾನ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಇಂದು ಬಾಗಲಕೋಟೆಯ ಬಾದಾಮಿಗೆ ಆಗಮಿಸಿದ್ದ ವೇಳೆ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ ಸಿದ್ದರಾಮಯ್ಯ ಅವರನ್ನು ಭರ್ಜರಿಯಾಗಿ ಸ್ವಾಗತ ಕೋರಲಾಗಿದೆ. ಸಾಮೂಹಿಕ ವಿವಾಹ, ಕಲ್ಯಾಣ ಮಂಟಪ ಉದ್ಘಾಟನೆಗೆ ಬದಾಮಿಗೆ ಆಗಮಿಸಿರೋ ಮಾಜಿ ಸಿಎಂ ಅವರನ್ನು ನೋಡಲು ನೂಕು ನುಗ್ಗಲು ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಇದನ್ನೂ ಓದಿ: ಭಗವಂತನ ಮೇಲೆ ಕೋಪ ಬರುತ್ತಿದೆ: ಸಾಯಿ ಕುಮಾರ್

ಕಲ್ಯಾಣ ಮಂಟಪದ ಕಿಟಕಿಯಿಂದ ಅಭಿಮಾನಿಗಳು ಒಳನುಗ್ಗಿ ಸಿದ್ದರಾಮಯ್ಯ ಅವರನ್ನು ನೋಡಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಅವರನ್ನು ನೋಡುತ್ತಿದ್ದಂತೆಯೇ ಅಭಿಮಾನಿಗಳ ಕೂಗಾಟ, ನೂಕಾಟ ಉಂಟಾಯಿತು. ಇದನ್ನೂ ಓದಿ: ಅಪ್ಪು ಭಾವಚಿತ್ರಕ್ಕೆ ಮುತ್ತಿಟ್ಟು ಅಜ್ಜಿ ಭಾವುಕ – ವೀಡಿಯೋ ವೈರಲ್

Leave a Reply

Your email address will not be published. Required fields are marked *

Back to top button