ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ- ಬಿಜೆಪಿ (BJP) ಸರ್ಕಾರದ ಅಕ್ರಮದ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಿ ಅಂತ ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸವಾಲು ಹಾಕಿದ್ದಾರೆ.
Advertisement
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂಬ ಸಿಎಂ ಬೊಮ್ಮಾಯಿ (Basavaraj Bommai) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಅಲ್ಲ ಭ್ರಷ್ಟಾಚಾರ ಗಂಗೋತ್ರಿ. ಬಿಜೆಪಿ ಅಂತ ಕಿಡಿಕಾರಿದರು. 40% ಕಮೀಷನ್ ಆರೋಪ ನಮ್ಮ ಸರ್ಕಾರದ ಮೇಲೆ ಮಾಡಿದ್ರಾ? ಗುತ್ತಿಗೆದಾರರು ನಮ್ಮ ಸರ್ಕಾರದ ಮೇಲೆ ಪತ್ರ ಬರೆದಿದ್ದಾರಾ? ಯಾವ ಆಧಾರದಲ್ಲಿ ಇವರು ಹೀಗೆ ಹೇಳ್ತಿದ್ದಾರೆ ಗೊತ್ತಿಲ್ಲ ಅಂತ ವಾಗ್ದಾಳಿ ನಡೆಸಿದರು.
Advertisement
Advertisement
ಸಚಿವ ಸುಧಾಕರ್ (Sudhakar) ಹಗರಣ ಅಂತ ಹೇಳಿದ್ದಾರೆ. ಅದು ಹಗರಣ ಅಲ್ಲ. ಸಿಎಜಿ ರಿಪೋರ್ಟ್ ನಲ್ಲಿ ವ್ಯತ್ಯಾಸ ಇದೆ ಅಂತ ಹೇಳಿದ್ರು ಅಷ್ಟೆ. ಯಾವ ಯಾವ ಇಲಾಖೆಯಲ್ಲಿ ವ್ಯತ್ಯಾಸ ಇದೆ ಅಂತ ನನಗೆ ಗೊತ್ತಿಲ್ಲ. ಸುಧಾಕರ್ ನಮ್ಮ ಜೊತೆ ಇದ್ದವನು. ಆಗ ಯಾಕೆ ಏನೂ ಹೇಳಲಿಲ್ಲ. ಈಗ ಹೇಳಿದ್ರೆ ಹೇಗೆ. ಅದಕ್ಕೆ ಕಿಮ್ಮತ್ತು ಇದೆಯಾ ಅಂತ ಪ್ರಶ್ನೆ ಮಾಡಿದ್ರು.
Advertisement
ಆಯ್ತು ನಾವು ಭ್ರಷ್ಟಾಚಾರ (Corruption) ಮಾಡಿದ್ರೆ ವಿಪಕ್ಷದಲ್ಲಿ ಬಿಜೆಪಿ ಇತ್ತು ಯಾಕೆ ರೈಸ್ ಮಾಡಿಲ್ಲ. ನಾವು 40%, ಕೋವಿಡ್ ಹಗರಣ ಅಂತ ಹೆಳಿದಾಗ ಅದನ್ನ ಮುಚ್ಚಿಕೊಳ್ಳಲು ಹೀಗೆ ಮಾಡ್ತಿದ್ದಾರೆ. ಬೊಮ್ಮಾಯಿ ವಿಪಕ್ಷದಲ್ಲಿ ಇದ್ದಾಗ ಯಾಕೆ ಮಾತಾಡಲಿಲ್ಲ ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಮಾಜಿ ಸಚಿವರ ಫಾರ್ಮ್ ಹೌಸ್ನಲ್ಲಿ ಪತ್ತೆಯಾಗಿದ್ದ 30 ವನ್ಯಜೀವಿಗಳ ಪೈಕಿ 2 ಪ್ರಾಣಿ ಸಾವು
ಬಿಜೆಪಿ ನಮ್ಮ ಯಾತ್ರೆಯಿಂದ ಪ್ಯಾನಿಕ್ ಆಗ್ತಿದ್ದಾರೆ. ಸೋಲುವ ಭಯದಲ್ಲಿ ಬಾಯಿಗೆ ಬಂದ ಹಾಗೆ ಮಾತಾಡ್ತಿದ್ದಾರೆ. ನೀವು ವಿಪಕ್ಷ ಇದ್ದಾಗ ಬಾಯಿಗೆ ಕಡುಬು ಇಟ್ಟು ಕೊಂಡಿದ್ರಾ? ಆಯ್ತು ಅಕ್ರಮ ಆಗಿದೆ. ಒಂದು ಕೆಲಸ ಮಾಡಿ ನಮ್ಮದು ನಿಮ್ಮದು ಸೇರಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ. ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಆಗಲಿ. ಸುಪ್ರೀಂಕೋರ್ಟ್ (Supreme Court) ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ ಅಂತ ಸಿದ್ದರಾಮಯ್ಯ ಸವಾಲ್ ಹಾಕಿದ್ರು.
ಬಿಜೆಪಿ ರಾಜ್ಯಗಳಲ್ಲಿ ಎಸಿಬಿ ಇದೆ. ಬಿಜೆಪಿ ಎಸಿಬಿ ರದ್ದು ಮಾಡಿಲ್ಲ. ಕೋರ್ಟ್ ರದ್ದು ಮಾಡಿದ್ದು. ಬಿಜೆಪಿ ಅವರು ಮೂರೂವರೆ ವರ್ಷ ಯಾಕೆ ಎಸಿಬಿ (ACB) ರದ್ದು ಮಾಡದೇ ಸುಮ್ಮನೆ ಇದ್ದರು. ನಾವು ಲೋಕಾಯುಕ್ತ ರದ್ದು ಮಾಡಿರಲಿಲ್ಲ. ಎಸಿಬಿ ರಚನೆ ಮಾಡಿದ್ವಿ ಅಷ್ಟೆ. ಸುಧಕಾರ್ ಎಂಬಿಬಿಎಸ್ (MBBS) ಏನು ಓದಿದ್ದಾನೋ ಗೊತ್ತಿಲ್ಲ. ಸುಧಾಕರ್ ರಾಜಕೀಯ ಪುನರ್ ಜನ್ಮ ಕೊಟ್ಟಿದ್ದು ಕಾಂಗ್ರೆಸ್. ಅಧಿಕಾರ ದುಡ್ಡಿಗಾಗಿ ಹೋಗಿ ಈಗ ಮಾತಾಡಿದ್ರೆ ಜನ ಕ್ಷಮಿಸೋದಿಲ್ಲ ಅಂತ ಕಿಡಿಕಾರಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k