ಬೆಂಗಳೂರು: ಮೇಲ್ಮನೆ ಪ್ರತಿಪಕ್ಷ ನಾಯಕನ ಸ್ಥಾನ ಸಿಗದಿರೋದ್ರಿಂದ ಬೇಸರಗೊಂಡು ಕಾಂಗ್ರೆಸ್ಸಿಗೆ ಗುಡ್‍ಬೈ ಹೇಳಲು ಮುಂದಾಗಿರುವ ಸಿ.ಎಂ. ಇಬ್ರಾಹಿಂಗೆ ಜೆಡಿಎಸ್ ಸೇರುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಹ್ವಾನ ನೀಡಿದ್ದಾರೆ.
Advertisement
ಇಬ್ರಾಹಿಂ ಮನೆಗೆ ಖುದ್ದು ಭೇಟಿಕೊಟ್ಟ ಕುಮಾರಸ್ವಾಮಿಗೆ ಜೆಡಿಎಸ್ ಸೇರೋದಾಗಿ ಇಬ್ರಾಹಿಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು, ಕೋಪಗೊಂಡಿರೋ ಸಿಎಂ ಇಬ್ರಾಹಿ ಜೊತೆ ಮಾತಾಡ್ತೀನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನೂ ಓದಿ: ರಾಮನಗರದಲ್ಲಿ 3 ವರ್ಷದಿಂದ ಮಲಗಿದ್ದವರು ಈಗ ಎದ್ದು ರಾಜಕೀಯ ಮಾಡ್ತಿದ್ದಾರೆ: ಹೆಚ್‌ಡಿಕೆ
Advertisement
Advertisement
ಬೆಂಗಳೂರಲ್ಲಿ ಮಾತಾಡಿದ ಅವರು, ಇಬ್ರಾಹಿಂ ನನ್ನ ಒಳ್ಳೆ ಸ್ನೇಹಿತ. ಏನೋ ಕೋಪದಲ್ಲಿ ಮಾತನಾಡಿದ್ದಾರೆ ಅಷ್ಟೆ. ಗೆಳೆಯ ಏನೇ ಹೇಳಿದ್ರೂ ಹಾರೈಸಿದಂತೆ ಅಂದ್ರು. ಇಬ್ರಾಹಿಂ ಪಕ್ಷ ಬಿಟ್ಟು ಹೋಗಲ್ಲ. ನಾನು ಅವರ ಜೊತೆ ಮಾತನಾಡುತ್ತೇನೆ ಅಂದ್ರು. ಇನ್ನು, ನನ್ನನ್ನು ಜೆಡಿಎಸ್‍ನಿಂದ ಉಚ್ಛಾಟನೆ ಮಾಡಿದಾಗ ಇಬ್ರಾಹಿಂ ನನ್ನ ಜೊತೆ ಬಂದಿದ್ದು ಹೌದು. ಆದರೆ ನನಗಾಗಿ ಇಬ್ರಾಹಿಂ ಕಾಂಗ್ರೆಸ್‍ಗೆ ಬರಲಿಲ್ಲ ಎಂದರು. ಇದನ್ನೂ ಓದಿ: ಸಿ.ಎಂ ಇಬ್ರಾಹಿಂ ಕಾಂಗ್ರೆಸ್ ಬಿಟ್ಟು ಎಲ್ಲಿಗೂ ಹೋಗಲ್ಲ: ಸಿದ್ದರಾಮಯ್ಯ
Advertisement
ಗೌಡ್ರು ರಾಜ್ಯಸಭೆ ಸದಸ್ಯರನ್ನಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ರು ಎಂದು ವಿವರಣೆ ನೀಡಿದ್ರು. ಇದಕ್ಕೆ ಸಚಿವ ಅಶೋಕ್ ಟಾಂಗ್ ನೀಡಿದ್ರು. ಸಿದ್ದರಾಮಯ್ಯನವರು 20 ಜನ ನನ್ನ ಸಂಪರ್ಕದಲ್ಲಿ ಇದ್ದಾರೆ ಅಂದಿದ್ರು. ಆದ್ರೇ ಈಗ ಅವ್ರ ಪಕ್ಷದ ದಿಡ್ಡಿ ಬಾಗಿಲು ಕಿತ್ಕೊಂಡು ಹೋಗಿದೆ ಅಂತಾ ಲೇವಡಿ ಮಾಡಿದ್ರು.