ಬೆಂಗಳೂರು: ಒಂದು ಬಾರಿ ಅವಕಾಶ ಕೊಡಿ. ಐದು ವರ್ಷಗಳ ಸಂಪೂರ್ಣ ಅವಧಿಗೆ ನಮ್ಮನ್ನು ಆಯ್ಕೆ ಮಾಡಿ, ನೀರಾವರಿ ಯೋಜನೆಗಳನ್ನು ಸಂಪೂರ್ಣಗೊಳಿಸುತ್ತೇನೆ. ಒಂದು ವೇಳೆ ಮಾತು ತಪ್ಪಿದರೆ ಜನತಾದಳ ವಿಸರ್ಜನೆ ಮಾಡುತ್ತೇನೆ ಅಂತಾ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಯೋಜಿಸಿದ್ದ ರೈತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆಗಳನ್ನು ಐದು ವರ್ಷದಲ್ಲಿ ನಿಮಗೆ ನೀಡದೇ ಇದ್ದರೆ, ಈ ಪಕ್ಷವನ್ನೇ ನಾವು ವಿಸರ್ಜನೆ ಮಾಡ್ತೀವಿ. ಹನುಮ ಜಯಂತಿಯಂದು ಜಲಧಾರೆ ಕಾರ್ಯಕ್ರಮ ಆರಂಭ ಮಾಡುವುದಾಗಿ ಘೋಷಣೆ ಮಾಡಿದ್ರು. ಇದನ್ನೂ ಓದಿ: ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಲಿಂಗ ಪಕ್ಷಪಾತ ಇದೆಯೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆ ತಂದಾಗ ಕುಮಾರಣ್ಣ ಸೈಲೆಂಟ್ ಆದ್ರು ಅಂದ್ರು. 79ಎ, 79ಬಿ ನಲ್ಲಿ ಮೌನಕ್ಕೆ ಶರಣಾದೆ ನಾನು, ನಾನು ನನ್ನ ವಿದ್ಯಾಭ್ಯಾಸ ಮುಗಿದ ನಂತರ 17 ಲಕ್ಷ ಸಾಲ ತೆಗೆದುಕೊಂಡು ಥಿಯೇಟರ್ ಕಟ್ಟಿದ್ವಿ. ಆಗ ನನ್ನ ತಂದೆ ಥಿಯೇಟರ್ ಓಪನ್ ದಿನ ಒಂದು ಮಾತು ಹೇಳಿದ್ರು. ಥಿಯೇಟರ್ ನಿಮ್ಮ ಜೀವನ ಕಾಪಾಡಲ್ಲ ಈ ಭೂಮಿ ನಿಮ್ಮ ಜೀವನ ಕಾಪಾಡುತ್ತೆ ಅಂದ್ರು. ನಾನು ಈಗ ಕೇತಗಾನಳ್ಳಿಯಲ್ಲಿ ಭೂಮಿ ತೆಗೆದುಕೊಂಡು ಅಲ್ಲೇ ಇದ್ದೀನಿ. ಆ ಭೂಮಿಯನ್ನು ನಾವು ಅನಧಿಕೃತ ವಾಗಿ ಪಡೆದಿದ್ದು ಅಂತ ಹಿಂಸೆ ಕೊಟ್ರು. 79ಎ, 79ಬಿ ಯಿಂದಾಗಿ ನಾನು ಕೂಡ ಅನೇಕ ಕಷ್ಟ ಎದುರಿಸಿದೆ. ಇದರಿಂದ ಅಧಿಕಾರಿಗಳಿಗೆ ದುಡ್ಡು ಮಾಡಲು ಸರಿಯಾಯ್ತು ಅಷ್ಟೆ. ಹೀಗಾಗಿ ನಾನು ಆ ವಿಚಾರದಲ್ಲಿ ಸೈಲೆಂಟ್ ಆದೆ ಅಂತಾ ಸಮರ್ಥನೆ ಮಾಡಿಕೊಂಡರು.
ಇದೇ ವೇಳೆ ಹಿಜಬ್ ವಿಚಾರ ಏನೋ ಪ್ರಾರಂಭ ಮಾಡಿದರಲ್ಲ ಅಂತ ಕಿಡಿಕಾರಿದ ಹೆಚ್‍ಡಿಕೆ, ಅದ್ಯಾರೋ ಸ್ವಾಮೀಜಿ ನನಗೆ ಸವಾಲು ಹಾಕಿದ್ರು. ದಲಿತರನ್ನು ಸಿಎಂ ಮಾಡ್ತೀರಾ ಅಂತಾರೆ, ಅಂತಹ ಸನ್ನಿವೇಶ ಬಂದರೆ ದಲಿತರನ್ನೇ ಸಿಎಂ ಮಾಡೋಣ. ನಾನು ಆಗಲೇ ಎರಡು ಬಾರಿ ಸಿಎಂ ಆಗಿದ್ದೇನೆ ಅಂತಾ ಟಾಂಗ್ ಕೊಟ್ಟರು. ಇದನ್ನೂ ಓದಿ: ಹಿಂದೂಗಳನ್ನು ಗುತ್ತಿಗೆ ಪಡೆಯಲು ಬಿಜೆಪಿಗೆ ಸಾಧ್ಯವಿಲ್ಲ: ಕೆ.ಎಂ.ಗಣೇಶ್