ದಾವಣಗೆರೆ: ಕೇಂದ್ರದ ಬಜೆಟ್ (Union Budget 2023) ರಾಜ್ಯದಲ್ಲಿ ಮುಂದೆ ಬರುವ ಸರ್ಕಾರದ ತೀರ್ಮಾನ ಮಾಡುತ್ತದೆ. ಜನರನ್ನು ಮರಳು ಮಾಡಲು ಕೇಂದ್ರ ಸರ್ಕಾರ ಬಜೆಟ್ ಘೋಷಣೆ ಮಾಡಿದೆ. ಈಗ ಬಜೆಟ್ ಘೋಷಣೆ ಆದ್ರೂ ಹಣಕಾಸು ಬಿಡುಗಡೆ ಏಪ್ರಿಲ್ ಮೇಲೆ ಪ್ರಾರಂಭವಾಗುತ್ತದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಕರ್ನಾಟಕ ಕೇಂದ್ರಿತ ಚುನಾವಣಾ ಬಜೆಟ್. ರಾಜ್ಯದಲ್ಲಿ ಚುನಾವಣೆ ಕೆಲವೇ ತಿಂಗಳು ಇದೆ. ಬಜೆಟ್ ನಲ್ಲಿ ಘೋಷಣೆ ಮಾಡಿದ ಎಲ್ಲ ಯೋಜನೆಗಳು ಜಾರಿ ಆಗಬೇಕಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕರ್ನಾಟಕಕ್ಕೆ ಗಿಫ್ಟ್ : ಭದ್ರಾ ಮೇಲ್ದಂಡೆ ಇನ್ನು ಮುಂದೆ ರಾಷ್ಟ್ರೀಯ ಯೋಜನೆ – 5,300 ಕೋಟಿ ರೂ. ಅನುದಾನ
ಭದ್ರಾ (Upper Bhadra Project), ಮಹಾದಾಯಿ (Mahadayi), ಕೃಷ್ಣ ಏನೇ ಘೋಷಣೆ ಮಾಡಿದ್ರೂ ಮೊದಲೇ ಮಾಡಬೇಕಿತ್ತು. ಇಂದಿನ ಕಾರ್ಯಕ್ರಮ ಜಾರಿಗೆ ತರಲು ಮುಂದಿನ ಸರ್ಕಾರ ಬರಬೇಕು. ಕೇಂದ್ರದ ಘೋಷಣೆ, ಘೋಷಣೆ ಆಗಿಯೇ ಉಳಿಯತ್ತೆ. ಕೇಂದ್ರದ ಹಣ ಬಿಡುಗಡೆ ಆಗುವುದರ ಒಳಗೆ ಚುನಾವಣಾ ನೀತಿ ಸಂಹಿತೆ ಬರತ್ತೆ. ಜನರನ್ನು ತಾತ್ಕಾಲಿಕವಾಗಿ ಮೆಚ್ಚಿಸಲು ಘೋಷಣೆ ಇಡಬಹುದು ಎಂದು ತಿಳಿಸಿದರು.
ಮನೆ ಬಿದ್ದಾಗ 5 ಲಕ್ಷ, ಕೋವಿಡ್ (Corona Virus) ನಲ್ಲಿ ಸಾವನ್ನಪ್ಪಿದಾಗ 1 ಲಕ್ಷ, ಕೋವಿಡ್ ವಾರಿಯರ್ಸ್ ಗೆ 30 ಲಕ್ಷ ಕೊಡ್ತಿವಿ ಅಂದಿದ್ರು, ಎಲ್ಲಿ ಕೊಟ್ಟರು. ಕೇಂದ್ರ ಘೋಷಣೆ ಮಾಡಿದ ಎಲ್ಲ ಯೋಜನೆಗಳು ಕೇವಲ ಕಾಗದದಲ್ಲಿ ಮಾತ್ರ ಇರತ್ತೆ. ರೈಲ್ವೆ ಯೋಜನೆ 20-30 ವರ್ಷಗಳ ಹಿಂದೆ ಘೋಷಣೆ ಆಗಿರುವುದು ಇನ್ನೂ ಆಮೆ ಗತಿಯಲ್ಲಿ ನಡೆಯುತ್ತಿದೆ. ಕೇಂದ್ರ ಕಾರ್ಯಕ್ರಮ ಘೋಷಣೆ ಆಗಿದೆ ಉಳಿದಿದೆ. ತಕ್ಷಣ ಬೆಳಗ್ಗೆ ಜನರಿಗೆ ಅನುಕೂಲ ಆಗಲ್ಲ ಎಂದು ಹೇಳಿದರು.
ಬಿಜೆಪಿ (BJP) ತಿರಸ್ಕಾರ ಮಾಡಿದ್ರೆ ಕರ್ನಾಟಕಕ್ಕೆ ಏನ್ ಕೊಡ್ತಾರೆ ಅನ್ನೋದು ಗೊತ್ತಿಲ್ಲ. ಚುನಾವಣೆ ಆದ್ಮೇಲೆ ಜನ ಮರೆತು ಹೋಗುತ್ತಾರೆ. ಕೇಂದ್ರದ ಬಜೆಟ್ ಮೇಲೆ ನನಗೆ ನಂಬಿಕೆ ಇಲ್ಲ, ಹೆಚ್ಚಿನ ಮಹತ್ವ ಕೊಡಲ್ಲ. ರಾಷ್ಟ್ರೀಯ ಯೋಜನೆಗೆ ನಾವು ಅರ್ಜಿ ಕೊಟ್ಟಿದ್ದೆವು. ಕೇಂದ್ರದಿಂದ ಮೂಗಿಗೆ ತುಪ್ಪ ಸವರುವ ಕೆಲಸ ಆಗಿದೆ ಎಂದು ನುಡಿದರು.
ಕರ್ನಾಟಕ ಬರಪೀಡಿತ ಎಂದು ಘೋಷಣೆಗೆ ಪ್ರತಿಕ್ರಿಯೆ ನೀಡಿದ ಹೆಚ್‍ಡಿಕೆ, ಈಗಲಾದರೂ ಕರ್ನಾಟಕ ಬರಪೀಡಿತ ಅನ್ನೋದು ಗೊತ್ತಾಗಿರೋದು ಖುಷಿ ವಿಚಾರ. ಕರ್ನಾಟಕ ಬರಪೀಡಿತ ಅಂತ ಘೋಷಣೆ ಮಾಡಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k