200 ಯೂನಿಟ್ ಅಂತ ಹೇಳಿ ಕಾಂಗ್ರೆಸ್‍ನವರು ಯಾಮಾರಿಸಿದ್ದಾರೆ: ಬೊಮ್ಮಾಯಿ

Public TV
2 Min Read
BASAVBARAJ BOMMAI

ಬೆಂಗಳೂರು: 200 ಯೂನಿಟ್ (200 Unit Electricity) ಅಂತ ಹೇಳಿ ಕಾಂಗ್ರೆಸ್‍ನವರು ಯಾಮಾರಿಸಿದ್ದಾರೆ. 200 ಯೂನಿಟ್ ಅನ್ನೋಕ್ಕೂ; 10% ಅನ್ನೋಕ್ಕೂ ವ್ಯತ್ಯಾಸವಿದೆ. ಇದು ಫ್ರೀ ಹೇಗಾಯ್ತು ಅಂತ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಜಾರಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 200 ಯೂನಿಟ್ ಫ್ರೀಂ ಸ್ಕೀಂನಲ್ಲಿ ದೋಖಾ ಆಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಅನ್ನಭಾಗ್ಯದಲ್ಲೂ ಗೊಂದಲವಿದೆ. 10 ಕೆಜಿಯಲ್ಲಿ ರಾಗಿ, ಜೋಳ ಸೇರಿದ್ಯಾ?, 10 ಕೆಜಿ ಉಚಿತ ಅಕ್ಕಿ ಮಾತ್ರ ಕೊಡ್ತಾರಾ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳು ಸಚಿವ ಸಂಪುಟ ಮುಗಿಸಿ ಸಚಿವ ಸಂಪುಟ (Congress Cabinet) ದಲ್ಲಿ ನಿರ್ಣಯ ಆದ ಅಂಶಗಳನ್ನ ಪತ್ರಿಕಾ ಗೋಷ್ಠಿ ನಡೆಸಿದ್ದನ್ನ ನಾನು ನೋಡಿದ್ದೇನೆ. ಚುನಾವಣೆಯ ಪೂರ್ವದ ಮಾತುಗಳಿಗೂ ಚುನಾವಣೆಯ ನಂತರದ ಮಾತುಗಳಿಗೂ ವ್ಯತ್ಯಾಸ ಇದೆ. ಎಲ್ಲರಿಗೂ 200 ಯೂನಿಟ್ ಫ್ರೀ ಅಂತಾ ಘಂಟಾ ಘೋಷವಾಗಿ ಹೇಳಿದ್ರು. 200 ಯೂನಿಟ್ ಉಚಿತ ವಿದ್ಯುತ್ ಅಂತ ಕಾರ್ಡ್ ಅಲ್ಲೂ ಬರೆದಿದ್ದಾರೆ ಎಂದರು. ಇದನ್ನೂ ಓದಿ: 200 ಯೂನಿಟ್‌ ವಿದ್ಯುತ್‌ ಫ್ರೀ – ಷರತ್ತುಗಳು ಅನ್ವಯ

ಆದರೆ ಈಗ ಇವರು ಹೇಳಿದ ಪ್ರಕಾರ, ತಮ್ಮ ವಿದ್ಯುತ್ ಶಕ್ತಿ ಬಳಕೆ 70 ಇರೋದು 80 ಮಾಡಬಹುದು ಅಂದಿದ್ದಾರೆ. 200 ಯೂನಿಟ್ ಫ್ರೀ ಅಂದಿದ್ದಾರೆ. 200 ಯೂನಿಟ್ ಫ್ರೀ ಅನ್ನೋದಕ್ಕೂ ವಾರ್ಷಿಕ ಸರಾಸರಿ 10% ಹಾಕಿ ಕೊಡುತ್ತೇವೆ ಅನ್ನೋದಕ್ಕೂ ವ್ಯತ್ಯಾಸ ಇದೆ. ಇದು 200 ಯೂನಿಟ್ ಫ್ರೀ ಇಲ್ಲ ಯಾಮಾರಿಸಿದ್ದಾರೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಅವರ ನಿಜ ಬಣ್ಣ ಬಯಲಾಗಿದೆ. 200 ಯೂನಿಟ್ ಫ್ರೀ ಗೂ 10% ಹಾಕಿಕೊಂಡದಕ್ಕೂ ವ್ಯತ್ಯಾಸ ಇದೆ ಇದು ಫ್ರೀ ಹೇಗಾಯ್ತು. ಅವರು ಸ್ಪಷ್ಟವಾಗಿ ಹೇಳಬೇಕಾಗಿತ್ತು 200 ಯೂನಿಟ್ ಕೊಡಲ್ಲ ಅಂತಾ ಸುಮ್ನೆ ಯಾಮಾರಿಸಿದ್ದಾರೆ. ಸರಾಸರಿ ಮೇಲೆ 10% ಕೊಡ್ತೆವೆ ಅಂದಿದ್ದಾರೆ ಅದಕ್ಕೆ ಸ್ಪಷ್ಟತೆ ಇಲ್ಲ. ಪತ್ರ ಕರ್ತರು ಪ್ರಶ್ನೆ ಕೇಳಿದ್ರು ಸರಾಸರಿ ಅಂತಾರೆ. ಹಾಗಾಗಿ ಇದು ದೋಖಾ ಎಂದು ಬೊಮ್ಮಾಯಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಘೋಷಿಸಿದ್ದು ಸಂತೋಷ, ಇದರಿಂದ ಕರ್ನಾಟಕ ದಿವಾಳಿಯಾಗದಿರಲಿ – ಸಿ.ಟಿ ರವಿ

Share This Article