Latest

ಬೆಂಗಳೂರಿನಲ್ಲಿ ಛತ್ತೀಸ್‍ಗಢದ ಬಿಜೆಪಿ ಮಾಜಿ MLA ನಿಧನ

Published

on

Yudveer Singh
Share this

ರಾಯ್‍ಪುರ್: ಛತ್ತೀಸ್‍ಗಢದ ಬಿಜೆಪಿ ಮಾಜಿ ಶಾಸಕ ಯುಧ್ವೀರ್ ಸಿಂಗ್ ಜುದೇವ್ ಸೋಮವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಯುಧ್ವೀರ್ ಸಿಂಗ್ ಜುದೇವ್(39) ಲಿವರ್ ಸಮಸ್ಯೆಯಿಂದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಯುಧ್ವೀರ್ ಸಿಂಗ್ ಜುದೇವ್ ಛತ್ತೀಸ್‍ಗಢದ ಜಶ್‍ಪುರದ ಹಿಂದಿನ ರಾಜಮನೆಯನಕ್ಕೆ ಸೇರಿದವರಾಗಿದ್ದು, 2013ರಲ್ಲಿ ನಿಧನರಾದ ಬಿಜೆಪಿಯ ಪ್ರಭಾವಿ ನಾಯಕ ದಿಲೀಪ್ ಸಿಂಗ್ ಜುದೇವ್ ಅವರ ಕಿರಿಯ ಪುತ್ರರಾಗಿದ್ದಾರೆ.  ಇದನ್ನೂ ಓದಿ: ಕುಮಾರಸ್ವಾಮಿ ಎಲ್ಲಾ ಕ್ಷೇತ್ರದಲ್ಲೂ ಇಬ್ಬಿಬ್ಬರನ್ನು ಇಟ್ಟಿರ್ತಾರೆ: ಎಸ್.ಆರ್ ಶ್ರೀನಿವಾಸ್

Yudveer Singh

ಯುಧ್ವೀರ್ ಸಿಂಗ್‍ರವರು ಬಹಳ ದಿನಗಳಿಂದ ಲಿವರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೇ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಅಲ್ಲಿಂದ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಸೋಮವಾರ ಮುಂಜಾನೆ 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಸೋದರ ಸಂಬಂಧಿ ಮತ್ತು ಮಾಜಿ ಬಿಜೆಪಿ ರಾಜ್ಯಸಭಾ ಸದಸ್ಯ ರಣವಿಜಯ್ ಸಿಂಗ್ ಹೇಳಿದ್ದಾರೆ.  ಇದನ್ನೂ ಓದಿ: ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ: ರಾಜೂ ಗೌಡ

ಪಾರ್ಥೀವ ಶರೀರವನ್ನು ಮಂಗಳವಾರ ಜಶಪುರಕ್ಕೆ ತರಲಾಗಿದ್ದು, ಅಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ. ಯುಧ್ವೀರ್ ಜುದೇವ್ ತಾಯಿ ಮಾಧ್ವಿ, ಪತ್ನಿ ಸಂಯೋಗಿತಾ ಮತ್ತು ಒಬ್ಬ ಮಗಳನ್ನು ಅಗಲಿದ್ದಾರೆ. 2008ರಲ್ಲಿ ಚಂದ್ರಪುರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಹಾಗೂ 2013ರಲ್ಲಿ ಸತತ ಎರಡನೇ ಬಾರಿಗೆ ಶಾಸಕರಾಗಿ ಯುಧ್ವೀರ್ ಜುದೇವ್ ಆಯ್ಕೆಯಾಗಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement