ಲಕ್ನೋ: ಬಿಜೆಪಿಗೆ ರಾಜೀನಾಮೆ ನೀಡಿದ್ದ ಉತ್ತರ ಪ್ರದೇಶದ ಮಾಜಿ ಸಚಿವ ದಾರಾ ಸಿಂಗ್ ಚೌಹಾಣ್ ಇಂದು ಸಮಾಜವಾದಿ ಪಕ್ಷಕ್ಕೆ (ಎಸ್‍ಪಿ) ಸೇರ್ಪಡೆಯಾಗಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ದಾರಾ ಸಿಂಗ್ ಚೌಹಾಣ್ ಅವರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಉತ್ತರ ಪ್ರದೇಶದ ಮೂರನೇ ಮಾಜಿ ಸಚಿವ ದಾರಾ ಸಿಂಗ್ ಚೌಹಾಣ್ ಆಗಿದ್ದು, ಈ ಮುನ್ನ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ಧರಂ ಸಿಂಗ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ: ಬಿಜೆಪಿಯ ದ್ವೇಷದ ರಾಜಕಾರಣ ಭಾರತಕ್ಕೆ ಹಾನಿಕಾರಕ: ರಾಹುಲ್ ಗಾಂಧಿ
Advertisement
Advertisement
2017ರಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಸಬ್‍ಕಾ ಸಾಥ್, ಸಬ್‍ಕಾ ವಿಕಾಸ್ ಎಂಬ ಘೋಷಣೆ ನೀಡಲಾಗಿತ್ತು. ಆದರೆ ಅಭಿವೃದ್ಧಿಯಾಗುತ್ತಿರುವುದು ಕೇವಲ ಕೆಲವರು ಮಾತ್ರ. ಉಳಿದವರು ಇದ್ದ ಹಾಗೆಯೇ ಉಳಿದುಕೊಂಡಿದ್ದಾರೆ. ಈಗ ಪಡಿತರ ನೀಡಿ ಗುಲಾಮರನ್ನಾಗಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ದಾರಾ ಸಿಂಗ್ ಚೌಹಾಣ್ ಕಿಡಿಕಾರಿದರು.
Advertisement
Advertisement
ಬಿಜೆಪಿಯನ್ನು ಬೆಂಬಲಿಸಿದ ನಂತರವೂ ಹಿಂದುಳಿದ ವರ್ಗದವರಿಗೆ ಬಿಜೆಪಿಯಲ್ಲಿ ಸರಿಯಾದ ಸ್ಥಾನ ಸಿಕ್ಕಿಲ್ಲ. ಐದು ವರ್ಷಗಳಿಂದ ನೀವು ಏನು ಮಾಡಿದ್ದೀರಾ ಎಂದು ಜನರು ಕೇಳುತ್ತಿದ್ದಾರೆ. ನಾವು ಸಮಯಕ್ಕಾಗಿ ಕಾಯುತ್ತಿದ್ದೇವು, ಹಿಂದುಳಿದ ಸಮುದಾಯದವರು ತಾಳ್ಮೆಯಿಂದ ಇದ್ದರು. ಆದರೆ ಹಿಂದುಳಿದ ಸಮಾಜದವರ ಹಿತಾಸಕ್ತಿಗಳನ್ನು ನಿರ್ಲಕ್ಷಿಸುತ್ತಿರುವುದನ್ನು ಕಂಡು ನಾವು ಇದೀಗ ಸಮಾಜವಾದಿ ಪಕ್ಷಕ್ಕೆ ಸೇರಲು ನಿರ್ಧರಿಸಿದೇವು ಎಂದು ಹೇಳಿದರು. ಇದನ್ನೂ ಓದಿ: ಉನ್ನತ ಶಿಕ್ಷಣ ಸಚಿವರು ನಮಗೆ ಕೊಟ್ಟಿದ್ದು ಸಿಹಿಯಲ್ಲ, ಕಹಿ: ಅತಿಥಿ ಉಪನ್ಯಾಸಕರ ಆಕ್ರೋಶ
Former UP minister Dara Singh Chauhan, who had quit from his post in the state cabinet and BJP earlier this week, joins Samajwadi Party in the presence of SP chief Akhilesh Yadav, in Lucknow pic.twitter.com/XA7eopfgGi
— ANI UP/Uttarakhand (@ANINewsUP) January 16, 2022
ಉತ್ತರಪ್ರದೇಶದಲ್ಲಿ 15-18 ವಯಸ್ಸಿನ 51,37,909 ಮಕ್ಕಳಿಗೆ ಕೋವಿಡ್ ಲಸಿಕೆ ಡೋಸ್‍ಗಳನ್ನು ನೀಡಲಾಗಿದೆ. ಆದರೆ, ಹಿಂದುಳಿದ ಸಮುದಾಯಗಳ ಮಕ್ಕಳಿಗೆ ನೀಡಲಾಗಿಲ್ಲ. ಆದರೆ ಸಮಾಜವಾದಿ ಪಕ್ಷ ಆಡಳಿತಕ್ಕೆ ಬಂದರೆ ಪ್ರಾತಿನಿಧ್ಯದ ವಿಷಯದಲ್ಲಿ ರಾಜ್ಯದ ಜನರಿಗೆ ಸಮಾನ ಪಾಲು ನೀಡುತ್ತದೆ ಎಂದರು. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಕ್ಯಾಬಿನೆಟ್‍ನಲ್ಲಿ ದಾರಾ ಸಿಂಗ್ ಚೌಹಾಣ್ ಅರಣ್ಯ, ಪರಿಸರ ಮತ್ತು ಪ್ರಾಣಿ ಉದ್ಯಾನ ಸಚಿವರಾಗಿದ್ದರು.