ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂದು ತೀರ್ಮಾನಿಸಿರುವ ಕಾಂಗ್ರೆಸ್ ಪಕ್ಷ ಮಹಾಘಟಬಂಧನ್ ಮೈತ್ರಿಕೂಟ ರಚನೆ ಮಾಡುತ್ತಿರುವ ಸಂದರ್ಭದಲ್ಲೇ ಎನ್ಡಿಎಗೆ ಭಾಗವಾಗಿದ್ದ ಮಿತ್ರ ಪಕ್ಷವೊಂದು ಮಹಾಘಟ ಬಂಧನ್ಗೆ ಸೇರ್ಪಡೆಯಾಗಿದೆ.
ಎನ್ಡಿಎ ಮಿತ್ರಕೂಟದಲ್ಲಿದ್ದ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ (ಆರ್.ಎಲ್.ಎಸ್.ಪಿ) ಮುಖ್ಯಸ್ಥ ಉಪೇಂದ್ರ ಖುಷ್ವಾಲಾ ಮಹಾಘಟಬಂಧನ್ ಜೊತೆ ಸೇರ್ಪಡೆ ಆಗಿದ್ದಾರೆ. ಡಿಸೆಂಬರ್ 10 ರಂದು ಎನ್ಡಿಎ ಒಕ್ಕೂಟದಿಂದ ಹೊರ ಬಂದಿದ್ದ ಉಪೇಂದ್ರ ಖುಷ್ವಾಲಾ ಕಾಂಗ್ರೆಸ್ ಪಕ್ಷದೊಂದಿಗೆ ನಡೆಯಲು ಸಿದ್ಧತೆ ನಡೆಸಿದ್ದಾರೆ. ಇದರ ಭಾಗವಾಗಿ ಕಾಂಗ್ರೆಸ್ ಹೈಕಮಾಂಡನ್ನು ಭೇಟಿ ಮಾಡಿದ್ದಾರೆ.
Advertisement
Upendra Kushwaha, RLSP Chief on joining Bihar #Mahagathbandhan: We had said that we have many options and UPA was one of them. The wholeheartedness shown by Rahul Gandhi and Lalu Yadav is one of the reasons I joined but the biggest reason I'm here is the people of Bihar. pic.twitter.com/tcfGPN4to2
— ANI (@ANI) December 20, 2018
Advertisement
ಕೇಂದ್ರ ಮಾನವ ಸಂಪನ್ಮೂಲ ರಾಜ್ಯ ಸಚಿವರಾಗಿದ್ದ ಉಪೇಂದ್ರ ಖುಷ್ವಾಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ರು. ಬಳಿಕ ಕಾಂಗ್ರೆಸ್ ಪಕ್ಷದ ವಕ್ತಾರ ಶಕ್ತಿಸಿನ್ಹ್ ಗೋಹಿಲ್ ಅವರು ಮಹಾಘಟ ಬಂಧನ್ ಸೇರ್ಪಡೆ ಆದರೆ ಸ್ವಾಗತ ಕೋರುವುದಾಗಿ ತಿಳಿಸಿದ್ದರು. ಬಳಿಕ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಿದ ಉಪೇಂದ್ರ ಖುಷ್ವಾಲಾ ಮಹಾಘಟಬಂದನ್ ಸೇರ್ಪಡೆ ಆಗಿದ್ದಾರೆ.
Advertisement
ಈ ಹಿಂದೆ ಮೈತ್ರಿಕೂಟ ತೊರೆಯುವ ಕುರಿತು ಪ್ರತಿಕ್ರಿಯೆ ನೀಡಿದ್ದ ಉಪೇಂದ್ರ ಖುಷ್ವಾಲಾ, ಬಿಜೆಪಿ ಪಕ್ಷ ದೇಶದ ನೈಜ ಸಮಸ್ಯೆಗಳನ್ನು ಬಿಟ್ಟು ಬೇರೆಡೆ ಗಮನ ಅರಿಸಿದೆ. ಇದರ ಭಾಗವಾಗಿರುವುದಕ್ಕೆ ನನಗೆ ಅವಮಾನವಾಗುತ್ತಿದೆ ಎಂದು ಆರೋಪಿಸಿದ್ದರು.
Advertisement
RLSP leader Upendra Kushwaha arrives at AICC office in Delhi. pic.twitter.com/DyOYiN0ozC
— ANI (@ANI) December 20, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv