ಪಾಟ್ನಾ: ಬಿಹಾರದ ಮಾಜಿ ಸಚಿವ ಸುಭಾಷ್ ಸಿಂಗ್(59) ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಈ ಹಿಂದೆ ಸುಭಾಷ್ ಸಿಂಗ್ ಅವರಿಗೆ ಕಿಡ್ನಿ ಕಸಿ ಮಾಡಲಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದನ್ನೂ ಓದಿ: 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ತೆರೆ- ಅಪ್ಪು ಜಾತ್ರೆ ವೀಕ್ಷಣೆಗೆ ಹರಿದು ಬಂತು ಜನಸಾಗರ
Advertisement
Advertisement
ನಿತೀಶ್ ಕುಮಾರ್ ನೇತೃತ್ವದ ಹಿಂದಿನ ಎನ್‍ಡಿಎ ಸರ್ಕಾರದಲ್ಲಿ ಸುಭಾಷ್ ಸಿಂಗ್ ಅವರು ಸಹಕಾರಿ ಸಚಿವರಾಗಿದ್ದರು. ಗೋಪಾಲ್‍ಗಂಜ್‍ನಿಂದ ನಾಲ್ಕು ಬಾರಿ ಬಿಜೆಪಿ ಶಾಸಕರಾಗಿರುವ ಸುಭಾಷ್ ಸಿಂಗ್ ಇದೀಗ ಪತ್ನಿ, ಇಬ್ಬರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ಪೊಲೀಸರಿಗೂ ಚಾಕು ಇರಿಯಲು ಮುಂದಾದ ಕಿಡಿಗೇಡಿ
Advertisement
Advertisement
ಆಗಸ್ಟ್ 16ರ ಮಂಗಳವಾರ ಬೆಳಗ್ಗೆ 11:30ಕ್ಕೆ ನಿತೀಶ್-ತೇಜಸ್ವಿ ಸರ್ಕಾರದ ಸಂಪುಟ ವಿಸ್ತರಣೆ ನಡೆಯುವ ಮುನ್ನವೇ ಸುಭಾಷ್ ಸಿಂಗ್ ಕೊನೆಯುಸಿರೆಳೆದಿರುವ ಸುದ್ದಿ ತಿಳಿದು ಬಂದಿದೆ.