ಬೆಂಗಳೂರು: ಪೊಲೀಸರ ಕೈಗೆ ಸಿಗದೇ ನಿಗೂಢ ಸ್ಥಳದಿಂದ ಸಿಡಿ ರಿಲೀಸ್ ಮಾಡ್ತಿದ್ದ ರೌಡಿ ನಾಗನನ್ನು ಬೆಂಗಳೂರು ಪೊಲೀಸರ ವಿಶೇಷ ತಂಡ ಕೊನೆಗೂ ತಮಿಳುನಾಡಿನಲ್ಲಿ ಬಂಧಿಸಿದೆ.
ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿಯೊಂದಿಗೆ ಇದ್ದ ನಾಗನನ್ನು ಪೊಲೀಸರು ಸಿನಿಮೀಯ ಮಾದರಿಯಲ್ಲಿ ಬೆನ್ನತ್ತಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಪ್ರತಿ ದಿನ ಬಿಳಿ ಬಣ್ಣದ ಮಾರುತಿ ಓಮ್ನಿ ಕಾರಿನಲ್ಲಿ ಸುತ್ತಾಡುತ್ತಿದ್ದ ನಾಗ ದೇವಸ್ಥಾನ, ಹಾಗೂ ಮದುವೆ ಮಂಟಪಗಳ ಬಳಿ ಉಳಿದುಕೊಳ್ಳುತ್ತಿದ್ದ. ಇಂದು ಒಮ್ನಿ ಕಾರಿನಲ್ಲಿ ಹೋಗುತ್ತಿದ್ದಾಗ ಅರ್ಕಾಟ್ ಬಳಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ನಾಗನ ಮಗ ಗಾಂಧಿ ವಾಹನ ಚಲಾಯಿಸುತ್ತಿದ್ದ. ಪೊಲೀಸರು ಕೊನೆಗೆ ಒಂದೂವರೆ ಕಿ.ಮೀ ಬೆನ್ನೆಟ್ಟಿ ನಾಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ವಾಹನ ಸುತ್ತುವರೆಯುತ್ತಿದ್ದಂತೆ ನಾಗ ಕೂಗಡಿದ್ದ ಎನ್ನುವ ಮಾಹಿತಿ ಸಿಕ್ಕಿದೆ.
Advertisement
ಎಸಿಪಿ ರವಿಕುಮಾರ್ ಸೂಚನೆಯಂತೆ ಶರಣಾಗುವಂತೆ ವಕೀಲ ಶ್ರೀರಾಮ ರೆಡ್ಡಿ ನಾಗನಿಗೆ ಸೂಚಿಸಿದ್ದರು. ಎರಡೂ ದಿನದ ಹಿಂದೆ ಶ್ರೀರಾಮ ರೆಡ್ಡಿ ಸೂಚಿಸಿದ್ದರೂ ನಾಗ ವಕೀಲರ ಮಾತನ್ನು ತಿರಸ್ಕರಿಸಿದ್ದ.
Advertisement
ನಾಗ ತಮಿಳುನಾಡಿನಲ್ಲಿ ಇದ್ದಾನೆ ಎನ್ನುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆದರೆ ಎಲ್ಲಿ ಉಳಿದುಕೊಂಡಿದ್ದಾನೆ ಎನ್ನುವ ಮಾಹಿತಿ ಸಿಕ್ಕಿರಲಿಲ್ಲ. ಯಾಕೆಂದರೆ ಪ್ರತಿದಿನ ಬೇರೆ ಬೇರೆ ಸ್ಥಳಗಳನ್ನು ಬದಲಾಯಿಸುತ್ತಿದ್ದ. ಏಪ್ರಿಲ್ 14ರಂದು ಪೊಲೀಸರು ನಾಗನ ಮನೆ ಮೇಲೆ ದಾಳಿ ನಡೆಸಿದ್ದರು. ಅಂದಿನಿಂದ ನಾಪತ್ತೆಯಾಗಿದ್ದ ನಾಗನ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಅಂತಿಮವಾಗಿ ಪೊಲೀಸರು 27 ದಿನಗಳ ಬಳಿಕ ನಾಗನನ್ನು ಬಂಧಿಸಿದ್ದಾರೆ.
Advertisement
ಬಾಂಬ್ ನಾಗನ ಮನೆಯ ಮೇಲೆ ನಡೆದ ದಾಳಿಯ ಸಂದರ್ಭದ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.