LatestMain PostNational

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೊನಿಜೇಟಿ ರೋಸಯ್ಯ ಇನ್ನಿಲ್ಲ

ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೊನಿಜೇಟಿ ರೋಸಯ್ಯ(88) ಅವರು ಶನಿವಾರ ನಿಧನರಾಗಿದ್ದಾರೆ.

ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ರೋಸಯ್ಯ ಅವರು ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದ್​ನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಕೊನಿಜೇಟಿ ರೋಸಯ್ಯ ಅವರ ಅಗಲಿಕೆಗೆ ದೇಶದ ರಾಜಕೀಯ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: 76ರ ಹರೆಯದಲ್ಲಿ ಪೈಲಟ್ ಆಗುವ ಕನಸು ನನಸು

ಕೊನಿಜೇಟಿ ರೋಸಯ್ಯ ಅವರು 2009 ರಿಂದ 2010 ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕದಲ್ಲಿ ಎರಡು ತಿಂಗಳ ಕಾಲ ರಾಜ್ಯಪಾಲರಾಗಿ ಮತ್ತು 2011 ರಿಂದ 2016 ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ದಶಕಗಳ ಕಾಲ ತಮ್ಮ ವೃತ್ತಿಜೀವನದಲ್ಲಿ ಹಲವಾರು ಬಾರಿ ಕಾಂಗ್ರೆಸ್ ಎಂಎಲ್‍ಸಿ, ಎಂಎಲ್‍ಎ ಮತ್ತು ಎಂಪಿ ಆಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವಾರು ಸಚಿವ ಸ್ಥಾನಗಳನ್ನು ನಿಭಾಯಿಸಿದ್ದಾರೆ. ಜೊತೆಗೆ ಸದಾ ಚಿಕ್ಕ ಸ್ಥಾನಗಳನ್ನು ನಿರ್ವಹಿಸುತ್ತಿದ್ದರು ಮತ್ತು ವಿವಾದಗಳಿಂದ ದೂರವಿರಲು ಪ್ರಯತ್ನಿಸುತ್ತಿದ್ದರು. ವಿಧಾನಸಭೆಯಲ್ಲಿ 15 ಬಜೆಟ್ ಮಂಡಿಸಿ ದಾಖಲೆಯನ್ನೂ ಸಹ ನಿರ್ಮಿಸಿದ್ದರು. ಇದನ್ನೂ ಓದಿ:  ಕೆಲವೊಮ್ಮೆ ಬಾಯಿ ತಪ್ಪಿ ಸತ್ಯ ಹೇಳುವ ಈಶ್ವರಪ್ಪಗೆ ಸಿಎಂ ಮೇಲೆ ನಂಬಿಕೆ ಇಲ್ಲ: ಸಿದ್ದರಾಮಯ್ಯ

ಜುಲೈ 1933 ರಲ್ಲಿ ಗುಂಟೂರು ಜಿಲ್ಲೆಯ ವೇಮೂರಿನಲ್ಲಿ ಜನಿಸಿದ ಅವರು, ವಾಣಿಜ್ಯ ಪದವೀಧರರಾಗಿದ್ದು, ತಮ್ಮ ಕಾಲೇಜು ದಿನಗಳಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 1968, 1974 ಮತ್ತು 1980 ರಲ್ಲಿ ಎಪಿ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು ಮತ್ತು 1979 ರಲ್ಲಿ ಮರಿ ಚನ್ನಾ ರೆಡ್ಡಿ ಅವರ ಅಡಿಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾಗಿದ್ದರು.

ಕೊನಿಜೇಟಿ ರೋಸಯ್ಯ ಅವರು ಟಿ ಅಂಜಯ್ಯ, ಕೋಟ್ಲಾ ವಿಜಯ ಭಾಸ್ಕರ ರೆಡ್ಡಿ, ಎನ್ ಜನಾರ್ಧನ ರೆಡ್ಡಿ ಅವರ ಸಂಪುಟಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಮೇ 2004 ರಿಂದ ವೈಎಸ್ ರಾಜಶೇಖರ ರೆಡ್ಡಿ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿಯವರೆಗೂ ಗೃಹ, ಆರೋಗ್ಯ, ಶಿಕ್ಷಣ, ಸಾರಿಗೆ ಸೇರಿದಂತೆ ಮುಂತಾದ ಖಾತೆಗಳನ್ನು ನಿರ್ವಹಿಸಿದ್ದಾರೆ. 1995 ಮತ್ತು 1997ರ ನಡುವೆ ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಮತ್ತು 1998 ರಲ್ಲಿ ನರಸರಾವ್‍ಪೇಟೆಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಪತ್ನಿಯ ಕತ್ತು ಸೀಳಿ ಕೊಂದ ಪತಿ

ಆಂಧ್ರ ವಿಶ್ವವಿದ್ಯಾನಿಲಯವು 2007ರಲ್ಲಿ ಕೊನಿಜೇಟಿ ರೋಸಯ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದೆ. ಇದೀಗ ಅವರು ಮೂವರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published.

Back to top button