ಬೆಂಗಳೂರು: ಹಿರಿಯ ನಟ ಕಮ್ ಶಾಸಕ ರೆಬೆಲ್ ಸ್ಟಾರ್ ಅಂಬರೀಶ್ರವರಿಗಿಂದು ಹುಟ್ಟುಹಬ್ಬದ ಸಂಭ್ರಮ. 65 ನೇ ವರ್ಷಕ್ಕೆ ಕಾಲಿಟ್ಟಿರೋ ಅಂಬರೀಶ್ ಇತ್ತೀಚೆಗೆ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲವಾದ್ರೂ ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
Advertisement
ಸಿನಿಮಾ ಮತ್ತು ರಾಜಕೀಯದಲ್ಲಿ ಅಪಾರ ಅಭಿಮಾನಿಗಳನ್ನ ಪಡೆದಿರುವ ಅಂಬರೀಶ್ ಇಂದು ಜೆ.ಪಿ.ನಗರದ ತಮ್ಮ ಸ್ವಗೃಹದಲ್ಲಿ ನೂರಾರು ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.
Advertisement
Advertisement
ನಾನು ಅಭಿಮಾನಿಗಳಿಗೊಸ್ಕರ ಏನು ಮಾಡಿಲ್ಲ. ಇವತ್ತು ನಾನು ನನ್ನ ಕುಟುಂಬ ಚನ್ನಾಗಿದ್ದೀವಿ ಅಂದ್ರೆ ಅದಕ್ಕೆ ನಿಮ್ಮ ಪ್ರೀತಿ ಕಾರಣ ಅಂತಾ ಬಂದಿದ್ದ ನೂರಾರು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ರು. ತಮ್ಮ ನೇರ ನುಡಿ ಮತ್ತು ವ್ಯಕ್ತಿತ್ವದಿಂದ ರೆಬೆಲ್ ಸ್ಟಾರ್ ಎಂದು ಕರೆಸಿಕೊಳ್ಳುವ ಅಂಬರೀಶ್ ಅವರಿಗೆ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಶುಭಾಶಯ ತಿಳಿಸಿದ್ದಾರೆ. ಇತ್ತ ತವರು ಜಿಲ್ಲೆ ಮಂಡ್ಯದಲ್ಲೂ ಅಭಿಮಾನಿಗಳು ಕೇಕ್ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.