ನವದೆಹಲಿ: ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಮೂಲಕ ಎಲ್‍ಪಿಜಿ ಸಿಲಿಂಡರ್‍ಗಳನ್ನ ಬುಕ್ ಮಾಡುವ ವ್ಯವಸ್ಥೆಯನ್ನ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ಪರಿಚಯಿಸಿದೆ.
ಈವರೆಗೆ ಗ್ರಾಹಕರು ಫೋನ್ ಅಥವಾ ಮೆಸೇಜ್ ಮೂಲಕ ಗ್ಯಾಸ್ ಸಿಲಿಂಡರ್‍ಗಳನ್ನ ಬುಕ್ ಮಾಡಬಹುದಿತ್ತು. ಇನ್ಮುಂದೆ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದಾಗಿದೆ.
ಪ್ರಧಾನಿ ಮೋದಿ ಡಿಜಿಟಲೈಸೇಷನ್‍ಗೆ ಒತ್ತು ನೀಡುತ್ತಿರೋ ಸಮಯದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೊಸ ಡಿಜಿಟಲ್ ಬುಕಿಂಗ್ ಸೇವೆಯನ್ನ ಆರಂಭಿಸಿದೆ. ಈ ಮೂಲಕ ಇಂಡಿಯನ್ ಆಯಿಲ್ ಕಾರ್ಪೊರೇಷನ್, ತೈಲೋತ್ಪನ್ನ ಕಂಪನಿಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ರೀಫಿಲ್ಲಿಂಗ್ ಸೇವೆ ಒದಗಿಸುತ್ತಿರೋ ಮೊದಲ ಸಂಸ್ಥೆ ಎನಿಸಿಕೊಂಡಿದೆ.
ಫೇಸ್‍ಬುಕ್ ಮೂಲಕ ಇಂಡೇನ್ ಗ್ಯಾಸ್ ಬುಕ್ ಮಾಡಲು ಹೀಗೆ ಮಾಡಿ
* ಫೇಸ್‍ಬುಕ್‍ಗೆ ಲಾಗಿನ್ ಆಗಬೇಕು.
* ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‍ನ ಅಧಿಕೃತ ಫೇಸ್‍ಬುಕ್ ಪೇಜ್ IndianOilCorpLimited ಗೆ ಭೇಟಿ ನೀಡಿ.
* ಬುಕ್ ನೌ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಟ್ವಿಟ್ಟರ್‍ನಲ್ಲಿ ಇಂಡೇನ್ ಗ್ಯಾಸ್ ಬುಕ್ ಮಾಡಲು ಹೀಗೆ ಮಾಡಿ
* ರೀಫಿಲ್ @indianoilcorplimited ಎಂದು ಟ್ವೀಟ್ ಮಾಡಿ
* ಮೊದಲ ಬಾರಿಯ ರಿಜಿಸ್ಟ್ರೇಷನ್‍ಗಾಗಿ ರಿಜಿಸ್ಟರ್ ಎಲ್‍ಪಿಜಿಐಡಿ ಎಂದು ಟ್ವೀಟ್ ಮಾಡಿ.