ಶಿವಮೊಗ್ಗ: ನಮ್ಮ ಹಿಂದೂ ಹುಡುಗರು ಕೊಡುವ ದಾಖಲಾತಿ ಪೋರ್ಜರಿ ಮಾಡಿ ಅವರ ಹೆಸರಿನಲ್ಲಿ ಇನ್ನೊಂದು ಸಿಮ್ (Sim) ಖರೀದಿ ಮಾಡಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ (BY Raghavendra) ತಿಳಿಸಿದ್ದಾರೆ.
ಬಿಜೆಪಿ ಸಂಸ್ಥಾಪನಾ ದಿನ ಹಿನ್ನೆಲೆ ಶಿವಮೊಗ್ಗ ನಗರದ ಹಲವು ಬಿಜೆಪಿ ಬೂತ್‌ಗಳಿಗೆ ಭೇಟಿ ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗೆ ಜನರ ಮಧ್ಯೆ ಇದ್ದು ಗೊತ್ತಿಲ್ಲ- ಯದುವೀರ್ ಬಗ್ಗೆ ಯತೀಂದ್ರ ವ್ಯಂಗ್ಯ
Advertisement
ರಾಮೇಶ್ವರಂ ಕೆಫೆ ಸ್ಫೋಟ (Rameshwaram Cafe Blast) ಪ್ರಕರಣದಲ್ಲಿ ಎನ್‌ಐಎ (NIA) ತೀರ್ಥಹಳ್ಳಿಯ (Thirthahalli) ಬಿಜೆಪಿ ಕಾರ್ಯಕರ್ತನನ್ನು ವಿಚಾರಣೆಗೆ ಒಳಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ತೀರ್ಥಹಳ್ಳಿ ಬಿಜೆಪಿ (BJP) ಕಾರ್ಯಕರ್ತನನ್ನು ಎನ್‌ಐಎ ತಂಡ ತನಿಖೆ ವಿಚಾರಣೆಗೆ ಕರೆದೊಯ್ದು 24 ಗಂಟೆಯಲ್ಲಿ ವಾಪಸ್ ಕಳುಹಿಸಿಕೊಟ್ಟಿದ್ದಾರೆ. ಕಾರ್ಯಕರ್ತ ವಾಪಸ್ ಬಂದ ನಂತರ ಆತಂಕದ ವಿಚಾರ ಗೊತ್ತಾಯಿತು. ಹಿಂದೂ ಹುಡುಗರು ಕೊಡುವ ದಾಖಲಾತಿಯನ್ನು ಪೋರ್ಜರಿ ಮಾಡಿ ಸಿಮ್ ಖರೀದಿಸಿ ಇಂತಹ ದುಷ್ಕೃತ್ಯ ಮಾಡುವ ಮನಸ್ಥಿತಿ ಇರುವ ವ್ಯಕ್ತಿಗಳಿಗೆ ಸಿಮ್ ಕೊಡುತ್ತಿದ್ದರು ಎಂದು ಅವರು ತಿಳಿಸಿದರು. ಇದನ್ನೂ ಓದಿ: ಕರಾವಳಿಯಲ್ಲಿ ನಕ್ಸಲರ ಚಲನವಲನ – ಕಡಬದ ಮನೆಗೆ ಬಂದು ಊಟ ಮಾಡಿದ ಶಂಕಿತರು
Advertisement
Advertisement
ಸರ್ವ ಜನಾಂಗದ ಶಾಂತಿಯ ತೋಟ ಎಂಬಂತಹ ಕುವೆಂಪು ಅವರ ಜನ್ಮ ಸ್ಥಳದಲ್ಲಿ ಇಂತಹ ಘಟನೆ ನಡೆಯುತ್ತಿರೋದು ಆತಂಕದ ವಿಚಾರ. ಕೇಂದ್ರ ಸರ್ಕಾರದಿಂದ ಗಟ್ಟಿಯಾದ ನಿಲುವು ತನಿಖೆ ಆಗುತ್ತಿದೆ. ಈ ಆತಂಕದಿಂದ ಮುಕ್ತ ಆಗಬೇಕು ಎಂದರೆ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಎಂದರು. ಇದನ್ನೂ ಓದಿ: ಪ್ರಚಾರಕ್ಕೆ ಮೋದಿ ಫೋಟೋ ಬಳಸಲು ಈಶ್ವರಪ್ಪರಿಂದ ಕೋರ್ಟ್‍ಗೆ ಕೆವಿಯಟ್ ಸಲ್ಲಿಕೆ
Advertisement
ಇಂದು ಬಿಜೆಪಿಯ ಸಂಸ್ಥಾಪನಾ ದಿನ. ಎಲ್ಲಾ ಬೂತ್‌ನಲ್ಲೂ ಸಂಸ್ಥಾಪನಾ ದಿನ ಆಚರಣೆ ಮಾಡುತ್ತಿದ್ದೇವೆ. 1,700ಕ್ಕಿಂತ ಹೆಚ್ಚಿನ ಬೂತ್‌ಗಳಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಬೂತ್‌ನಲ್ಲೇ ಇರಬೇಕು. ಕಾರ್ಯಕ್ರಮ ಮಾಡಬೇಕು. ನಾನು ಸಹ 8-10 ಬೂತ್‌ಗಳಿಗೆ ಪ್ರವಾಸ ಮಾಡುತ್ತೇನೆ. ಶಿವಮೊಗ್ಗದಲ್ಲಿ ನಡೆಯುವ ಮಹಿಳಾ ಸಮಾವೇಶದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಸೇತುವೆ ಮೇಲೆ ಉಕ್ಕಿ ಹರಿಯುತ್ತಿರುವ ಘಟಪ್ರಭಾ – ಮೂರು ದಿನ ಸಂಚಾರ ನಿಷೇಧ
ಈಶ್ವರಪ್ಪ (KS Eshwarappa) ಕೆವಿಯೆಟ್ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೋದಿ ಬೇಕು. ಮೋದಿಗಿಂತ ಇನ್ನೊಂದು ಹಿಂದುತ್ವದ ಮುಖ ಬೇರೊಂದಿಲ್ಲ. ಮೋದಿ ಪಕ್ಷದ ಅಧಿಕೃತ ಅಭ್ಯರ್ಥಿ ನಾನಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೋದಿ ಪೋಟೋ ಹಾಕಿಕೊಂಡು ಅವರೊಂದು ಪ್ರಯತ್ನ ಮಾಡುತ್ತಿದ್ದಾರೆ. ಜನ ಪ್ರಜ್ಞಾವಂತರಿದ್ದಾರೆ. ಇದರಲ್ಲಿ ಸ್ವಾರ್ಥ ಇದೆಯಾ? ನಿಜವಾದ ಹಿಂದುತ್ವಕ್ಕಾಗಿ ಬಿಜೆಪಿ ಪಕ್ಷ. ಹಿಂದುತ್ವ ಕಟ್ಟಿ ಬೆಳೆಸುವ ಕಾರ್ಯ ನಡೆದಿದೆ. ಮನಸ್ಸಿಗೆ ನೋವಾಗಿ ಸ್ವಂತಕೋಸ್ಕರ ಹಿಂದುತ್ವ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ಜನ ಕೊಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಟ್ವಿಸ್ಟ್ – ಈಗಾಗಲೇ A1 ಆರೋಪಿ ಅರೆಸ್ಟ್!