ಕಾರವಾರ: 40 ವರ್ಷದಿಂದ ವಾಸವಾಗಿದ್ದ ಸ್ಥಳದಲ್ಲಿ ಕುಟುಂಬಸ್ಥರು ಹೊಸದಾಗಿ ಕಟ್ಟಿದ್ದ ಮನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಒಡೆದು ಹಾಕಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಭಟ್ಕಳ ತಾಲೂಕಿನ ಸರ್ಸನಕಟ್ಟೆ ಗ್ರಾಮದ ಸೋಡಿಗದ್ದೆ ಕ್ರಾಸ್ ಬಳಿ ಗಿರಿಜಮ್ಮ ಎಂಬ ವೃದ್ಧೆ ಯ ಕುಟುಂಬವೊಂದು 40 ವರ್ಷಗಳಿಂದ ಅರಣ್ಯ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ತಮ್ಮ ಆದಾಯದಲ್ಲಿ ಉಳಿಸಿದ ಹಣದಲ್ಲಿ ಅದೇ ಜಾಗದಲ್ಲಿ ಚಿಕ್ಕ ಮನೆ ನಿರ್ಮಿಸಿಕೊಳ್ಳುವ ತಯಾರಿ ನಡೆಸಿದ್ರು. ಅರಣ್ಯ ಇಲಾಖೆ 40 ವರ್ಷಗಳಿಂದ ಇವರ ಗುಡಿಸಲನ್ನು ಗಮನಿಸಿಯೂ ಸುಮ್ಮನಿದ್ದು ಈಗ ಮನೆ ಕಟ್ಟಿಕೊಳ್ಳುತ್ತಿರುವಾಗ ಏಕಾಏಕಿ ಸ್ಥಳಕ್ಕೆ ಬಂದು ತಮ್ಮ ಸಿಬ್ಬಂದಿ ಮೂಲಕ ಅರ್ಧ ಕಟ್ಟಿದ್ದ ಮನೆಯನ್ನು ಕೆಡವಿ, ಇವರನ್ನು ವಸತಿ ಹೀನರನ್ನಾಗಿಸಿದೆ.
Advertisement
Advertisement
ಸರ್ಕಾರವೇ ಹಕ್ಕುಪತ್ರ ನೀಡುತ್ತಿರುವಾಗ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳು ಲಂಚದ ಆಸೆಗೆ ಈ ರೀತಿ ಮಾಡುತ್ತಿದ್ದಾರೆ. ಹಣ ಕೊಟ್ಟವರಿಗೆ ಯಾವುದೇ ತೊಂದರೆ ನೀಡದೇ ಹಣ ನೀಡದವರಿಗೆ ಮಾತ್ರ ಅವರ ಮನೆಯನ್ನು ಕೆಡವುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಅರಣ್ಯ ಒತ್ತುವರಿದಾರರಿದ್ದಾರೆ. ಇದರಲ್ಲಿ ಕೇವಲ 1,365 ಜನರಿಗೆ ಮಾತ್ರ ಹಕ್ಕುಪತ್ರ ನೀಡಿದೆ. ತಿರಸ್ಕøತಗೊಂಡ ಅರ್ಜಿಗಳನ್ನು ಪರಿಗಣಿಸಬೇಕು ಎಂದು ಹೋರಾಟ ಸಹ ನಡೆಯುತ್ತಿದೆ. ಆದರೇ ಸರ್ಕಾರ ದಿನಕ್ಕೊಂದು ಸುತ್ತೋಲೆಗಳಿಂದ ಈ ರೀತಿಯ ಘಟನೆಗಳು ನಡೆಯುತ್ತಿದೆ.
Advertisement
https://youtu.be/VQSAMnpVRRc