ಉಡುಪಿ: ಜಿಲ್ಲೆಯ ಕೋಟ ಪಡುಕೆರೆಯಲ್ಲಿ ಕಡಲ ಆಮೆಯನ್ನು ರಕ್ಷಣೆ ಮಾಡಲಾಗಿದೆ.
ಕೋಟದ ಕಡಲ ಕಿನಾರೆಯಲ್ಲಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಕಡಲಾಮೆಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಸ್ಥಳೀಯ ಮೀನುಗಾರ ಪ್ರದೀಪ್ ಅವರು, ಕಡಲಂಚಿನಲ್ಲಿ ಬಲೆಹಾಕಿ ಮೀನು ಹಿಡಿಯುವ ಸಂದರ್ಭದಲ್ಲಿ ಗಾಯಗೊಂಡಿರುವ ಕಡಲ ಆಮೆ ಒದ್ದಾಡುತ್ತಿರುವುದನ್ನು ನೋಡಿದ್ದಾರೆ. ಬಳಿಕ ಸಮುದ್ರ ತೀರದಲ್ಲಿದ್ದ ಆಮೆಯನ್ನು ರಕ್ಷಣೆ ಮಾಡಿದ್ದಾರೆ.
Advertisement
Advertisement
ರಕ್ಷಣೆ ಮಾಡಿದ ಆಮೆಯ ಬಗ್ಗೆ ಕೋಟದ ಸಾಮಾಜಿಕ ಸೇವಾ ಸಂಸ್ಥೆಯಾದ, ಗೀತಾನಂದ ಫೌಂಡೇಶನ್ ಗಮನಕ್ಕೆ ತಂದಿದ್ದಾರೆ. ಸಂಸ್ಥೆಯ ರವಿಕಿರಣ್ ಮತ್ತು ಸಾಮಾಜಿಕ ಕಾರ್ಯಕರ್ತ ವಿನಯಚಂದ್ರ ಅರಣ್ಯ ಇಲಾಖೆಯನ್ನು ಸಂಪರ್ಕ ಮಾಡಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ, ಅರಣ್ಯ ರಕ್ಷಕರಾದ ಶಿವಪ್ಪ ನಾಯ್ಕ, ಅರಣ್ಯ ವೀಕ್ಷಕರು ಪರಶುರಾಮ್ ಮೇಟಿ ಮತ್ತು ವಾಹನ ಚಾಲಕ ಜೋಯ್ ಕಡಲಾಮೆ ರಕ್ಷಣಾ ಕಾರ್ಯಚರಣೆಯನ್ನು ನೆಡೆಸಿದ್ದಾರೆ.
Advertisement
ಬಳಿಕ ಆಮೆಯನ್ನು ಕಡಲಲ್ಲಿ ಅಲೆಗಳ ಅಬ್ಬರ ಹೆಚ್ಚಾದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ಹಾರಾಡಿಯ ಸುವರ್ಣ ನದಿ ಮಡಿಲಿಗೆ ಬಿಡಲಾಗಿದೆ. ಮೀನುಗಾರರ ಬಲೆಗೆ ಸಿಲುಕಿ ಅಥವಾ ದೊಡ್ಡ ಮೀನುಗಳ ದಾಳಿಗೆ ತುತ್ತಾಗಿ ಆಮೆ ಒಂದು ಕಾಲನ್ನು ಕಳೆದುಕೊಂಡಿದೆ.
Advertisement