ದಾವಣಗೆರೆ: ಗಾಯಗೊಂಡ ಕಾಡೆಮ್ಮೆಗೆ ಅರವಳಿಕೆ ಮದ್ದು ಕೊಟ್ಟು ಚಿಕಿತ್ಸೆ ನೀಡುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಉಬ್ರಾಣಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕಳೆದ ಹಲವು ದಿನಗಳಿಂದ ಉಬ್ರಾಣಿ ಫಾರೆಸ್ಟ್ ನಲ್ಲಿ ಅರಣ್ಯ ಇಲಾಖೆಯಿಂದ ಪುಂಡಾನೆಗಳ ಸೆರೆ ಕಾರ್ಯಚರಣೆ ನಡೆಯುತ್ತಿದೆ. ಕಾಡಿನೊಳಗೆ ನುಗ್ಗಿ ಆನೆಯನ್ನು ಸೆರೆ ಹಿಡಿಯುವ ಸಂದರ್ಬದಲ್ಲಿ ಕಾಲಿಗೆ ಗಂಭೀರ ಗಾಯಗೊಂಡ ಕಾಡೆಮ್ಮೆಯೊಂದು ಅರಣ್ಯ ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ.
Advertisement
Advertisement
ಕಾಡೆಮ್ಮೆಯ ನರಳಾಟ ನೋಡಲಾಗದೆ ಸಕ್ರೇಬೈಲ್ ಆನೆ ಬಿಡಾರದ ವೈದ್ಯ ವಿನಯ್ ಕಾಡೆಮ್ಮೆಗೆ ಅರಳವಳಿಕೆ ಮದ್ದು ನೀಡಿ ಚಿಕಿತ್ಸೆ ನೀಡಿ ಪೋಷಿಸುತ್ತಿದ್ದಾರೆ. ಎಡಗಾಲು ಗಾಯವಾಗಿದ್ದು, ಸಂಪೂರ್ಣ ಹುಳದಿಂದ ಆವರಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ವಿನಯ್ ಅದಕ್ಕೆ ಔಷದೋಪಚರಿಸಿ, ಗಾಯವನ್ನು ಕ್ಲೀನ್ ಮಾಡಿದ್ದಾರೆ ಅಲ್ಲದೇ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
Advertisement
ಚಿಕಿತ್ಸೆ ನಂತರ ಕಾಡೆಮ್ಮೆ ಬಡ ಜೀವ ಎನ್ನುವಂತೆ ಕಾಡಿನೊಳಗೆ ಸೇರಿ ಮರೆಯಾಯಿತು. ಆನೆ ಹಿಡಿಯುವ ಒತ್ತಡದ ಕೆಲಸದಲ್ಲಿ ಕಾಡೆಮ್ಮೆಗೆ ಚಿಕಿತ್ಸೆ ನೀಡಿದ ವೈದ್ಯ ವಿನಯ್ ಯವರಿಗೆ ಅರಣ್ಯ ಅಧಿಕಾರಿಗಳಿಂದ ಮೆಚ್ಚಿಗೆ ವ್ಯಕ್ತಪಡಿಸಿದ್ರು.