ಚಾಮರಾಜನಗರ: ʻರಾಣಾʼ ಅರಣ್ಯ ಇಲಾಖೆಯಲ್ಲಿ ಹಂಟಿಂಗ್ ಸ್ಪೆಷಲಿಷ್ಟ್ ಎಂಬ ಬಿರುದು ಪಡೆದುಕೊಂಡಿತ್ತು. ಕಾಡುಗಳ್ಳರ ಪಾಲಿಗಂತೂ ಸಿಂಹಸ್ವಪ್ನವಾಗಿತ್ತು. ಕರ್ನಾಟಕದಲ್ಲಷ್ಟೇ ಅಲ್ಲ ಪಕ್ಕದ ತಮಿಳುನಾಡಿನಲ್ಲೂ ಕೂಡಾ ಫೇಮಸ್ ಆಗಿತ್ತು. ಹುಲಿ ಕಾರ್ಯಾಚರಣೆಗೂ ಕೂಡಾ ಬಳಕೆಯಾಗ್ತಿತ್ತು. ಆದ್ರೆ ಇಷ್ಟೆಲ್ಲಾ ಪ್ರಸಿದ್ದಿ ಪಡೆದಿದ್ದ ಆ ಶ್ವಾನ ಇನ್ನು ನೆನಪು ಮಾತ್ರ.
ಬಂಡೀಪುರದ ಹಂಟಿಂಗ್ ಸ್ಪೆಷಲಿಷ್ಟ್ ರಾಣಾ ಇನ್ನು ನೆನಪು ಮಾತ್ರ. ಹೌದು, 13 ವರ್ಷ ವಯಸ್ಸಿನ ರಾಣಾ ಅನಾರೋಗ್ಯದಿಂದ ಇಂದು ಮೃತಪಟ್ಟಿದೆ. ಈ ʻರಾಣಾʼ ಬಂಡೀಪುರದ ಅರಣ್ಯ ಪ್ರದೇಶದಲ್ಲಿ ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿತ್ತು. ಕಾಡುಗಳ್ಳರ ಜಾಡನ್ನು ಹಿಡಿಯುವುದರಲ್ಲಿ ಎತ್ತಿದ ಕೈ. ಕಾಡುಗಳ್ಳರು ಎಷ್ಟೇ ಚಾಲಾಕಿಗಳಾಗಿದ್ದರೂ ಅವರ ಜಾಡನ್ನು ಹಿಡಿದು ಬಿಡುತ್ತಿದ್ದ. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ರಾಣಾ ಮೇಲೆ ವಿಶೇಷ ಅಕ್ಕರೆ. ಇಂತಹ ರಾಣಾ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರಿಂದ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆಯ ನಂತರ ಸ್ವಲ್ಪ ಚೇತರಿಕೆ ಕಂಡಿದ್ದ ರಾಣಾ ಮತ್ತೇ ನಿನ್ನೆ ಅನಾರೋಗ್ಯಕ್ಕೀಡಾಯಿತು. ನಿನ್ನೆ ಸಹಾ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಬೆಳಗ್ಗೆ ಮೃತಪಟ್ಟಿದೆ. ಇದನ್ನೂ ಓದಿ: ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಲ್ಲ – ವಿ.ಸೋಮಣ್ಣ
Advertisement
Advertisement
ರಾಣಾ ಅರಣ್ಯ ಕಳ್ಳರನ್ನು ಹಿಡಿಯುವುದು ಮಾತ್ರವಲ್ಲದೇ ಕೂಂಬಿಂಗ್ ಪರಿಣಿತ ಸಹ ಆಗಿತ್ತು. ಅನೇಕ ಹುಲಿ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ರಾಣಾನನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಬಳಿ ಹುಲಿ ದಾಳಿ ನಡೆಸಿ ಇಬ್ಬರನ್ನೂ ಬಲಿ ಪಡೆದಿತ್ತು. ಈ ವೇಳೆ ಹುಲಿ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ರಾಣಾ ಪಾತ್ರ ಮಹತ್ವದ್ದು. ಅಲ್ಲದೇ ಪಕ್ಕದ ತಮಿಳುನಾಡಿದ ಮಧುಮಲೈ ಅರಣ್ಯ ವಲಯದಲ್ಲಿ ಹುಲಿ ದಾಳಿ ನಡೆಸಿ ಮೂರು ಮಂದಿಯನ್ನು ಕೊಂದಿತ್ತು. ಇದನ್ನು ಹಿಡಿಯಲು ಸಹ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿ ʻರಾಣಾʼನ ನೆರವು ಪಡೆದಿದ್ದರು.
Advertisement
Advertisement
ಒಟ್ನಲ್ಲಿ ಬಂಡೀಪುರ ಅರಣ್ಯ ವಲಯದಲ್ಲಿ ಸರ್ಕಾರಿ ಗೌರವಗಳೊಂದಿಗೆ ರಾಣಾನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಭಾರವಾದ ಮನಸ್ಸಿನಿಂದ ರಾಣಾನ ಅಂತಿಮ ದರ್ಶನ ಪಡೆದು ಕಣ್ಣೀರು ತುಂಬಿಕೊಂಡರು. ಕಳ್ಳರಿಗೆ ಸಿಂಹ ಸ್ವಪ್ನವಾಗಿ ಕಾಡಿ ಅರಣ್ಯ ಇಲಾಖೆ ಮತ್ತು ಸಾರ್ವಜನಿಕರ ಪ್ರೀತಿ ಗಳಿಸಿದ್ದ ರಾಣಾನ ಆತ್ಮಕ್ಕೆ ಶಾಂತಿ ಸಿಗಲಿ. ಇದನ್ನೂ ಓದಿ: ಮುಜರಾಯಿ ದೇಗುಲಗಳಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಗಿಫ್ಟ್ – ಮಹಿಳೆಯರಿಗೆ ಬಳೆ, ಅರಿಶಿನ-ಕುಂಕುಮ