-ಟ್ರಾಪ್ ಆಗಿದ್ದು ಹೇಗೆ? ಇಲ್ಲಿದೇ ಮಾಹಿತಿ
ಕಾರವಾರ: ಕಳೆದ ಆರು ತಿಂಗಳ ಹಿಂದೆ ಕದ್ರಾ ಗ್ರಾಮದ ಸುತ್ತಮುತ್ತ ಹುಲಿ ಓಡಾಡುತ್ತಿದೆ ಎಂಬ ಸುದ್ದಿ ಹರಿದಾಡಿ ಜನರನ್ನು ಆತಂಕಕ್ಕೀಡುಮಾಡಿತ್ತು. ನಿಜವಾಗಿಯೂ ಹುಲಿ ನಾಡಿನ ಸುತ್ತಮುತ್ತ ಓಡಾಡುತ್ತಿವೆಯೇ ಎಂಬ ಜನರ ಭಯಕ್ಕೆ ಅರಣ್ಯ ಇಲಾಖೆ ಮೌನವಹಿಸಿತ್ತು. ಆದರೆ ಕಾರವಾರದ ಸುತ್ತಮುತ್ತ ಹುಲಿಗಳು ತನ್ನ ಬೇಟೆ ಅರಸಿ ರಾತ್ರಿ ವೇಳೆ ಸಂಚರಿಸುತ್ತಿವೆ ಎನ್ನುವುದಕ್ಕೆ ಸ್ವತಃ ಅರಣ್ಯ ಇಲಾಖೆ ನಡೆಸಿದ ಕ್ಯಾಮೆರಾ ಟ್ರಾಪ್ ನಲ್ಲಿ ಭಯಲಾಗಿದೆ.
ಕಾರವಾರ ತಾಲೂಕಿನ ಕದ್ರಾ ವಲಯ ವಿಭಾಗದ ದೇವಕಾರಿನಲ್ಲಿ ಹುಲಿ ಪ್ರತ್ಯಕ್ಷವಾಗಿದೆ. 4 ರಿಂದ 5 ವರ್ಷ ಪ್ರಾಯದ ಹುಲಿ ತನ್ನ ಬೇಟೆ ಅರಸಿ ಕೋಣವನ್ನು ಬೇಟೆಯಾಡಿದ್ದು, ಅರಣ್ಯ ಇಲಾಖೆ ಇರಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
Advertisement
ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ:
ಕಾಳಿ ಹುಲಿ ಸಂರಕ್ಷಣಾ ಪ್ರಾಧಿಕಾರ ಹುಲಿಗಳ ಅಧ್ಯಯನ ಹಾಗೂ ಮಾಹಿತಿ ಕ್ರೂಡೀಕರಿಸಲು ಹುಲಿ ಸಂರಕ್ಷಿತ ಪ್ರದೇಶವಾದ ಕಾರವಾರ, ಯಲ್ಲಾಪುರ, ಹಳಿಯಾಳ ಅರಣ್ಯ ವಿಭಾಗಕ್ಕಾಗಿ 30 ಟ್ರಾಪ್ ಕ್ಯಾಮೆರಾ ನೀಡಿತ್ತು. ನೀಡಿದ 30 ಕ್ಯಾಮೆರಾಗಳಲ್ಲಿ 15 ಕ್ಯಾಮೆರಾಗಳನ್ನು ಕಾಳಿ ಹುಲಿ ರಕ್ಷಿತ ಪ್ರದೇಶವಾದ ಹಳಿಯಾಳ, ಕಾರವಾರ ಹಾಗೂ ಯಲ್ಲಾಪುರ ವಲಯಗಳಿಗೆ ಅಳವಡಿಸಿ ಹುಲಿ ಬಗ್ಗೆ ಮಾಹಿತಿ ಪಡೆಯಲಾಯಿತು.
Advertisement
ಕಾರವಾರದ ಕದ್ರಾ ವಲಯ ಅರಣ್ಯದ ದೇವಕಾರ ಕಾಡಿನಲ್ಲಿ ನವೆಂಬರ್ 15 ರಂದು ಕೋಣ ಸತ್ತು ಬಿದ್ದಿದ್ದನ್ನು ವಲಯ ಸಂರಕ್ಷಣಾಧಿಕಾರಿ ಪ್ರಕಾಶ್ ದೊಡ್ಡಮನಿ ಗಸ್ತು ತಿರುಗುವಾಗ ಗಮನಿಸಿದ್ದಾರೆ. ಈ ವೇಳೆ ಸತ್ತ ಕೋಣದ ಬಳಿ ಹುಲಿ ಹೆಜ್ಜೆ ಪತ್ತೆಯಾಗಿತ್ತು. ಈ ಕಾರಣ ಅಂದೇ ಅಲ್ಲಿ 15 ಕ್ಯಾಮೆರಾವನ್ನು ಅಳವಡಿಸಿದ್ದಾರೆ. ಕ್ಯಾಮೆರಾ ಅಳವಡಿಸಿದ ಮರುದಿನವೇ ಸತ್ತ ಕೋಣದ ಬಳಿ ಹುಲಿ ಪತ್ತೆಯಾಗಿದೆ. ಈ ಭಾಗದಲ್ಲಿ ಹುಲಿ ಇರುವುದನ್ನು ಧೃಡಪಡಿಸಲಾಗಿದೆ ಎಂದು ಡಿಸಿಎಫ್ ಮಂಜುನಾಥ್ ನಾವಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
Advertisement
ಒಂದು ಹುಲಿಯು 20 ಕಿ.ಮೀ ವ್ಯಾಪ್ತಿಯಲ್ಲಿ ತನ್ನ ಪರದಿಯನ್ನು ನಿರ್ಮಿಸಿಕೊಂಡಿರುತ್ತದೆ. ಈ ಪರದಿಯಲ್ಲಿ ಆ ಹುಲಿಯನ್ನು ಹೊರತಾಗಿ ಬೇರೆ ಹುಲಿಗಳು ಈ ಪರದಿ ಪ್ರದೇಶಕ್ಕೆ ಬರುವುದಿಲ್ಲ. ಈಗಾಗಲೇ ಕಾಳಿ ಹುಲಿ ರಕ್ಷಿತ ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ಹುಲಿಗಳು ತನ್ನ ಪರದಿಯನ್ನು ಕೂಡ ಹೆಚ್ವಿಸಿಕೊಂಡಿದ್ದು, ಬೇಟೆಗಾಗಿ ಹಳ್ಳಿಯ ಕಡೆ ಬರತೊಡಗಿದೆ. ಹುಲಿಗಳು ಆಗಾಗ ರಾತ್ರಿ ವೇಳೆ ಹಳ್ಳಿಗಳ ಬಳಿ ಬರತೊಡಗಿದ್ದು, ತನ್ನ ಬೇಟೆ ಹಿಡಿದು ಮರಳಿ ಕಾಡಿಗೆ ತೆರಳುತ್ತಿವೆ.
ಈವರೆಗೂ ಜನರ ಮೇಲೆ ದಾಳಿ ಮಾಡದೇ ಕಾಡು ಪ್ರಾಣಿಗಳ ಮೇಲೆ ಮಾತ್ರ ದಾಳಿ ನಡೆಸಿ ಭಕ್ಷಿಸುತ್ತಿವೆ. ಕಾಡಿನಲ್ಲಿ ಅದಕ್ಕೆ ಬೇಕಾದ ಆಹಾರ ಹೇರಳವಾಗಿದ್ದು, ಹೀಗಾಗಿ ಊರಿಗೆ ಇವು ಲಗ್ಗೆಯಿಟ್ಟು ದಾಳಿ ಮಾಡುವುದಿಲ್ಲ. ಈವರೆಗೂ ಇಂತಹ ಪ್ರಕರಣ ದಾಖಲಾಗಿಲ್ಲ ಹಾಗೂ ನಡೆದಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv