ಯಾದಗಿರಿ: ಕ್ಷುಲ್ಲಕ ಕಾರಣಕ್ಕೆ ಅರಣ್ಯಾಧಿಕಾರಿಯನ್ನು ಅಟ್ಟಾಡಿಸಿ ಬರ್ಬರವಾಗಿ ಹತ್ಯೆಗೈಯಲಾಗಿದೆ. ಶಹಾಪೂರ ಅರಣ್ಯಾಧಿಕಾರಿಯಾಗಿದ್ದ ಮಹೇಶ್ ಕನಕಟ್ಟಿಯವರನ್ನು ಮೋಟಗಿ ಬಾರ್ ಆಂಡ್ ರೆಸ್ಟೋರೆಂಟ್‍ನಲ್ಲಿ ಐವರು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಜೂನ್ 5ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೂನ್ 5 ರಂದು ಎಂದಿನಂತೆ ಮೋಟಗಿ ರೆಸ್ಟೋರೆಂಟ್‍ಗೆ ಮಹೇಶ್ ಊಟಕ್ಕೆ ತೆರಳಿದ್ದರು. ಈ ವೇಳೆ ರೆಸ್ಟೋರೆಂಟ್‍ನಲ್ಲಿ ಐವರು ಕುಡಿದು ಚೀರಾಡ್ತಿದ್ದಾಗ ವಾಗ್ವಾದ ನಡೆದಿದೆ. ಬಳಿಕ ಐವರು ದುಷ್ಕರ್ಮಿಗಳು ಬಡಿಗೆಯಿಂದ ಹೊಡೆದು, ಕಾಲಿನಿಂದ ಒದ್ದು ಅಧಿಕಾರಿಯನ್ನು ಮರ್ಡರ್ ಮಾಡಿದ್ದಾರೆ.
ರೆಸ್ಟೋರೆಂಟ್ ಹೊರಗೆ ಶವ ಬಿದ್ದಿತ್ತು. ಸಹಜ ಸಾವು ಅಂತ ಪೊಸ್ಟ್ ಮಾರ್ಟಮ್‍ಗೆ ಪೊಲೀಸರು ಕಳುಹಿಸಿದರು. ಆದರೆ ಇದು ಕೊಲೆ ಅಂತ ಮೃತನ ಪತ್ನಿ ನಾಗವೇಣಿ ಆರೋಪಿಸಿದರು. ಬಳಿಕ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಕೊಲೆ ಎಂಬುದು ಬೆಳಕಿಗೆ ಬಂದಿದೆ. ಸದ್ಯ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತಲೆಕೆಡಿಸಿಕೊಳ್ಳಬೇಡಿ ಸರ್- ಜೈಲುಪಾಲಾದ ದರ್ಶನ್‌ಗೆ ಧೈರ್ಯ ಹೇಳಿದ ಅಭಿಮಾನಿ
ಈ ಪ್ರಕರಣದಲ್ಲಿ ಪ್ರಭಾವಿಗಳು ಶಾಮೀಲಾಗಿದ್ದಾರೆ ಅಂತ ಬಿಜೆಪಿ ಟ್ವೀಟ್ ಮೂಲಕ ಅನುಮಾನ ವ್ಯಕ್ತಪಡಿಸಿವೆ. ಸಿದ್ದರಾಮಯ್ಯನವರೇ ನಿಮ್ಮ ಎರಡನೇ ಅವಧಿಯಲ್ಲೂ ಮತ್ತೆ ಸರ್ಕಾರಿ ಅಧಿಕಾರಿಗಳ ಕೊಲೆ ಮುಂದುವರಿದಿದೆ. ಇದಕ್ಕೆ ಕಾರಣ ಯಾರು..? ಸರ್ಕಾರದ ಕೈವಾಡವಿಲ್ಲದೆ ಈ ಅಧಿಕಾರಿಯ ಹತ್ಯೆ ನಡೆಯಲು ಸಾಧ್ಯವೇ..? ಅಂತ ಸರ್ಕಾರಕ್ಕೆ ಕೇಸರಿ ಪಡೆ ಪ್ರಶ್ನಿಸಿದೆ.