Connect with us

Districts

ಅರಣ್ಯ ನಿವಾಸಿ ಮೇಲೆ ಅರಣ್ಯಾಧಿಕಾರಿ ದರ್ಪ

Published

on

ಶಿವಮೊಗ್ಗ: ಜಿಲ್ಲೆಯ ಚೋರಡಿ ಅರಣ್ಯ ವಲಯದ ಉದ್ದನೂರು ಗ್ರಾಮದಲ್ಲಿ ಅರಣ್ಯ ನಿವಾಸಿ ಮೇಲೆ ಅರಣ್ಯ ಅಧಿಕಾರಿಯೊಬ್ಬರು ದರ್ಪ ಮೆರೆದಿರುವ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅರಣ್ಯ ನಿವಾಸಿ ಬಸವರಾಜ್ ಮೇಲೆ ಡಿಆರ್‌ಎಫ್‌ಓ ಗಿರೀಶ್ ದರ್ಪ ಮೆರೆದಿದ್ದಾರೆ. ಮೂಲಗಳ ಪ್ರಕಾರ, ಬಸವರಾಜ್ ಅರಣ್ಯ ಭೂಮಿಯಲ್ಲಿ ನಾಲ್ಕು ಮರಗಳನ್ನ ಕಡಿದಿದ್ದು ಪ್ರಕರಣ ಕೂಡ ದಾಖಲಾಗಿತ್ತು. ಈ ಸಂಬಂಧ ತನಿಖೆಗೆ ಬಂದಿದ್ದ ಡಿಆರ್‌ಎಫ್‌ಓ ಗಿರೀಶ್ ಹಾಗೂ ಬಸವರಾಜ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಅಧಿಕಾರಿ ಮನೆಯ ಮುಂದಿನ ಅಂಗಳದಲ್ಲಿ ನಿಂತಿದ್ದ ಮಹಿಳೆಯನ್ನು ತಳ್ಳಿ ಮನೆಯ ಒಳಗೆ ನುಗ್ಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆ ನಂತರ ಮಲೆನಾಡಿಗರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಈ ದೌರ್ಜನ್ಯ ನಡೆಸಿದ ಅರಣ್ಯ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Click to comment

Leave a Reply

Your email address will not be published. Required fields are marked *