ಕ್ಷುಲ್ಲಕ ಕಾರಣಕ್ಕೆ ಜಗಳ ಅರಣ್ಯ ರಕ್ಷಕನ ಕೈ ತುಂಡು

Public TV
1 Min Read
Madikeri forest protector hand

ಮಡಿಕೇರಿ: ಕ್ಷುಲ್ಲಕ ಕಾರಣಕ್ಕೆ ಅರಣ್ಯ ಇಲಾಖೆಯ ರಕ್ಷಕನ ಕೈಯನ್ನು ಕತ್ತರಿಸಿದ ಘಟನೆ ಮಡಿಕೇರಿ ತಾಲೂಕಿನ ಕಾಲೂರು ಸಮೀಪದ ಕಾನೆಕಂಡಿ ಬಳಿ ನಡೆದಿದೆ.

ಗಾಳಿಬೀಡು ಅರಣ್ಯ ವಲಯದ ಗಾರ್ಡ್ ಆಗಿರುವ ಸಂಜೀವ(ಅಣ್ಣಪ್ಪ ರೈ-59) ಗಾಯಾಳು ಆಗಿದ್ದು, ಕೈ ಕತ್ತರಿಸಿದ ಆರೋಪಿ ತಿಮ್ಮಯ್ಯ(ಸಣ್ಣಕ್ಕ-52) ಕೃತ್ಯ ನಡೆಸಿ ಅರಣ್ಯದಲ್ಲಿ ತಲೆಮರೆಸಿ ಕೊಂಡಿದ್ದಾನೆ. ಗಾಯಾಳು ಸಂಜೀವ ಹಾಗೂ ಆರೋಪಿ ತಿಮ್ಮಯ್ಯ ಇಬ್ಬರು ಒಂದೇ ಊರಿನವರಾಗಿದ್ದಾರೆ. ಇದನ್ನೂ ಓದಿ:  ತನ್ನ ಪುಟ್ಟ ಮಗುವಿನೊಂದಿಗೆ ಪತ್ನಿಗಾಗಿ ಅಲೆದಾಡುತ್ತಿರುವ ಪತಿ 

CRIME 2

ತಿಮ್ಮಯ್ಯ ಮನೆ ಪಕ್ಕದಲ್ಲಿ ಕಸ ವಿಲೇವಾರಿ ಘಟಕ ಮಾಡಲು ಉದ್ದೇಶಿಸಲಾಗಿದೆ. ಇದೇ ವಿಚಾರ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕತ್ತಿಯಿಂದ ತಿಮ್ಮಯ್ಯ ಸಂಜೀವನ ಎಡಗೈಗೆ ಬೀಸಿದ್ದಾನೆ. ಪರಿಣಾಮ ಎಡಗೈನ ಹಸ್ತದ ಪೂರ್ಣ ಭಾಗ ತುಂಡಾಗಿ ನೆಲಕ್ಕೆ ಬಿದ್ದಿದೆ.

tumakuru police jeep

ತುಂಡಾಗಿರುವ ಹಸ್ತದ ಭಾಗವನ್ನು ಜೋಡಿಸಲು ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಈ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಸಂಜೀವನನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಯಾರು ದೀಪ ಬೆಳಗಿಸಲು ಕೆಲಸ ಮಾಡುತ್ತಿಲ್ಲ: ಟ್ವಿಟ್ಟರ್ ಸಿಇಒ

Share This Article
Leave a Comment

Leave a Reply

Your email address will not be published. Required fields are marked *