ಗದಗ: ಔಷಧಿಯ ಸಸ್ಯಕಾಶಿ, ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಹೆಸರಾದ ಕಪ್ಪತಗುಡ್ಡದಲ್ಲಿ (Kappatagudda Forest) ಬೆಂಕಿ (Fire) ಕಾಣಿಸಿಕೊಂಡಿದ್ದು, ಸತತ 2 ಗಂಟೆಗಳ ಕಾಲ ಅರಣ್ಯ ಹೊತ್ತಿ ಉರಿದಿದೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಬಳಿಯ ಗೆಜ್ಜಿ ಸಿದ್ಧೇಶ್ವರ ಮಠದ ಬಳಿ ಗುಡ್ಡಕ್ಕೆ ಬೆಂಕಿ (Forest Fire) ತಗುಲಿದೆ. ಇದರಿಂದ ಸುಮಾರು 30 ಹೆಕ್ಟರ್‌ಗೂ ಅಧಿಕ ಪ್ರದೇಶದ ಅರಣ್ಯ (Forest) ಬೆಂಕಿಗಾಹುತಿಯಾಗಿದೆ. ಇದನ್ನೂ ಓದಿ: ನಿಶ್ಚಿತಾರ್ಥದ ಸಂಭ್ರಮದಲ್ಲಿ `ಸತ್ಯ’ ಧಾರಾವಾಹಿ ಹೀರೋ ಸಾಗರ್-ಸಿರಿ
Advertisement
Advertisement
ಕಪ್ಪತ್ತಗುಡ್ಡಕ್ಕೆ ಬೆಂಕಿಯ ಕೆನ್ನಾಲೆಗೆಯಿಂದ ಪ್ರತಿ ವರ್ಷ ಅರಣ್ಯ ನಾಶವಾಗಿ ಅಲ್ಲಿಯ ಪ್ರಾಣಿ, ಪಕ್ಷಿಗಳು, ಆಯುರ್ವೇದ ಔಷಧೀಯ ಸಸ್ಯಗಳು ಹಾನಿಯಾಗ್ತಿವೆ. ಬೆಂಕಿಯನ್ನು ತಡೆಯಲು ಅರಣ್ಯ ಇಲಾಖೆ ವಿಫಲವಾದಂತಿದೆ. ಬೆಂಕಿ ಕಾಣಿಸಿಕೊಂಡು 2 ಗಂಟೆಯಾದ್ರೂ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿರಲಿಲ್ಲ. ಇದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ವೈಯಕ್ತಿಕ ಡೇಟಾ ಸಂರಕ್ಷಣೆ – ನಿಯಮ ಉಲ್ಲಂಘಿಸಿದ್ರೆ 500 ಕೋಟಿವರೆಗೂ ಬೀಳುತ್ತೆ ದಂಡ
Advertisement
Advertisement
ಕುರಿಗಾಯಿಗಳು ತಮ್ಮ ಕುರಿ ಮೇಕೆಗಳೆಗೆ ಮೆಲ್ಭಾಗಕ್ಕೆ ಹೋಗಲು ದಾರಿಗಾಗಿ ಹಾಗೂ ಹೊಸ ಚಿಗುರುಗಾಗಿ ಬೆಂಕಿ ಹಚ್ತಾರೆ, ಕೆಲವೊಮ್ಮೆ ವಿಂಡ್ ಪ್ಯಾನ್ ಗಳ ವಿದ್ಯುತ್ ಸ್ಪರ್ಶದಿಂದ ಬೆಂಕಿ ತಗಲುತ್ತೆ. ಇಲ್ಲದಿದ್ರೆ ಉರುವಲು ಕಟ್ಟಿಗಾಗಿ ಕೆಲವು ಕಿಡಗೇಡಿಗಳು ಸಹ ಬೆಂಕಿ ಹಚ್ಚಿ ಗಿಡಮರಗಳು ಸುಟ್ಟ ನಂತರ ಕಟ್ಟಿಗೆ ಪಡೆದುಕೊಳ್ತಾರೆ. ಈ ಕಾರಣಗಳಿಂದ ಬೆಂಕಿ ಕಾಣಿಸಿಕೊಂಡಿರಬಹುದು ಅನ್ನೋ ಅನುಮಾನ ಮೂಡಿದೆ.
ಸಾಕಷ್ಟು ಪ್ರಮಾಣದ ಆಯುರ್ವೇದ ಸಸ್ಯಗಳು ಅಗ್ನಿಯ ಜ್ವಾಲೆಗೆ ಹೊತ್ತಿ ಉರಿದಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆರೋಪಿಸಿದ್ದಾರೆ.