ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯ ಉದ್ದಕ್ಕೂ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ಇದರಿಂದಾಗಿ ನೆಲಬಾಂಬ್‌ಗಳು ಸ್ಫೋಟಗೊಂಡಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸೋಮವಾರ ಗಡಿ ನಿಯಂತ್ರಣ ರೇಖೆಯಲ್ಲಿ ಪ್ರಾರಂಭವಾದ ಕಾಡ್ಗಿಚ್ಚು, ಮೆಂಧರ್ ಸೆಕ್ಟರ್‌ನ ಎಲ್ಲೆಡೆ ವ್ಯಾಪಿಸಿದೆ. ಕಾಡ್ಗಿಚ್ಚು ಒಳನುಸುಳುವಿಕೆಯ ವಿರೋಧಿ ವ್ಯವಸ್ಥೆಯ ಭಾಗವಾಗಿದ್ದ 6ಕ್ಕೂ ಹೆಚ್ಚು ಲ್ಯಾಂಡ್‌ಮೈನ್‌ಗಳನ್ನು ಸ್ಫೋಟಿಸಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿ ಪ್ರವಾಹ – 4 ಲಕ್ಷಕ್ಕೂ ಅಧಿಕ ಮಂದಿಗೆ ಹಾನಿ, ಕೊಚ್ಚಿಹೋದ ರಸ್ತೆ, ರೈಲು ಹಳಿ
ಕಳೆದ 3 ದಿನಗಳಿಂದ ಕಾಡ್ಗಿಚ್ಚು ಉರಿಯುತ್ತಿದ್ದು, ನಾವು ಸೇನೆಯೊಂದಿಗೆ ಬೆಂಕಿಯನ್ನು ನಂದಿಸುತ್ತಿದ್ದೇವೆ. ಇಂದು ಬೆಳಗ್ಗೆ ದರಂಶಾಲ್ ಬ್ಲಾಕ್‌ನಲ್ಲಿ ಪ್ರಾರಂಭವಾದ ಬೆಂಕಿ ಪ್ರಬಲವಾದ ಗಾಳಿಯಿಂದಾಗಿ ವೇಗವಾಗಿ ಹರಡಿದೆ. ಸದ್ಯ ಬೆಂಕಿ ಹತೋಟಿಗೆ ಬಂದಿದೆ ಎಂದು ಫಾರೆಸ್ಟರ್ ಕನಾರ್ ಹುಸೇನ್ ಶಾ ತಿಳಿಸಿದ್ದಾರೆ.
ರಜೌರಿ ಜಿಲ್ಲೆಯ ಗಡಿ ಸಮೀಪದ ಸುಂದರಬಂಡಿ ಪ್ರದೇಶದಲ್ಲಿ ಮತ್ತೆ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಇದು ಗಂಭೀರ್, ನಿಕ್ಕಾ, ಪಂಜ್‌ಗ್ರೇ, ಬ್ರಾಹ್ಮಣ, ಮೊಘಲಾ ಸೇರಿದಂತೆ ಇತರ ಅರಣ್ಯ ಪ್ರದೇಶಗಳಿಗೆ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತವು ಶ್ರೀಲಂಕಾದಂತೆ ಕಾಣುತ್ತಿದೆ: ರಾಹುಲ್ ಗಾಂಧಿ
ಜಮ್ಮು ಜಿಲ್ಲೆಯ ಅಂತರಾಷ್ಟ್ರೀಯ ಗಡಿ(ಐಬಿ)ಯಲ್ಲಿಇರುವ ಕೃಷಿ ಕ್ಷೇತ್ರದಲ್ಲಿಯೂ ಹಲವಾರು ಕಿ.ಮೀ ವರೆಗೆ ಬೆಂಕಿ ವ್ಯಾಪಿಸಿದ್ದು, ಅದನ್ನು ನಿಯಂತ್ರಣಕ್ಕೆ ತರಲಾಗಿದೆ. ಸದ್ಯ ಕಾಡ್ಗಿಚ್ಚು ಹತೋಟಿಗೆ ಬಂದಿದ್ದು, ಯಾವುದೇ ಪ್ರಾಣಹಾನಿಯಾಗದಂತೆ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.