ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಕೃಷಿ ನಾಶ ಮಾಡುವ ಆನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹೊಸ ಉಪಾಯ ಮಾಡಿದೆ. ಆನೆಗಳ ನಿಯಂತ್ರಣಕ್ಕೆ ಹೊಸದಾದ ಆ್ಯಂಟಿ ಪೋಚಿಂಗ್ ಕ್ಯಾಂಪ್ ಈಗಾಗಲೇ ಪ್ರಾರಂಭವಾಗಿದೆ.
ನಿತ್ಯ ಆನೆಗಳು ಓಡಾಡುವ ಜಾಗದಲ್ಲಿ ಮರದ ಮೇಲೆ ದಿಮ್ಮಿ ಮತ್ತು ಹಲಗೆಗಳ ಮೇಲ್ಛಾವಣಿಯಲ್ಲಿ ಹುಲ್ಲು ಹಾಕಿ ಅಟ್ಟಣಿಗೆಯನ್ನು ಮಾಡಲಾಗಿದೆ. ರಾತ್ರಿ ವೇಳೆ ಅರಣ್ಯ ಸಿಬ್ಬಂದಿ ಅಟ್ಟಣಿಗೆಯ ಮೇಲೇರಿ ಬೆಳಗಿನವರೆಗೆ ಕಾವಲು ಕಾಯುತ್ತಿದ್ದಾರೆ.
Advertisement
ಆನೆಗಳು ಬರುವ ಜಾಗದಲ್ಲಿ ತಂತಿಯಲ್ಲಿ ಬಾಟಲ್‍ಗಳನ್ನು ನೇತಾಡಿಸಿದ್ದಾರೆ. ಅನೆಗಳು ಬರುವ ರಭಸಕ್ಕೆ ತಂತಿಗೆ ತಾಗಿದಾಗ ಬಾಟಲ್ ಸದ್ದು ಕೇಳುತ್ತದೆ. ಸದ್ದು ಕೇಳಿದ ಕೂಡಲೇ ಆನೆಗಳನ್ನು ಮಾರ್ಗ ಮಧ್ಯೆಯೇ ವಾಪಸ್ ಕಾಡಿಗೆ ಓಡಿಸಲು ಸಹಾಯವಾಗುತ್ತಿದೆ.