– 15 ರಿಂದ 20 ಮೀ. ದೂರದಲ್ಲಿರುವಾಗಲೇ ವಿಚಿತ್ರ ಶಬ್ದ, ಪಟಾಕಿಯಂತೆ ಬೆಳಕು ಚೆಲ್ಲುತ್ತೆ ಈ ಡಿವೈಸ್
ಚಿಕ್ಕಮಗಳೂರು: ಹಾಸನ, ಚಿಕ್ಕಮಗಳೂರು (Chikkamagaluru) ಸೇರಿದಂತೆ ಮಲೆನಾಡ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು (Forest Department) ಆಫೀಸ್‌ನಲ್ಲಿ ಕುಳಿತುಕೊಂಡು ಆನೆಗಳನ್ನು ಓಡಿಸಲು ಹೊಸ ಡಿವೈಸ್ ಅನ್ನು ಬಳಸಿ, ಈ ಮೂಲಕ ಚಿತ್ರ ವಿಚಿತ್ರ ಶಬ್ದದಿಂದ ಆನೆಗಳನ್ನು ಬೆದರಿಸಿ ಕಾಡಿಗಟ್ಟುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ.
ಈ ಮೊದಲು ಆನೆ ನಡೆದಿದ್ದೇ ದಾರಿ ಎನ್ನುವ ಕಾಲವಿತ್ತು. ಇದೀಗ ನಾವು ನಡೆದ ದಾರಿಯಲ್ಲಿಯೇ ಆನೆ ಕೂಡ ನಡೆಯಬೇಕು ಎನ್ನುವ ಕಾಲಬಂದಿದೆ. ಹೌದು ಕಳೆದೊಂದು ವರ್ಷದಿಂದ ಕಾಫಿನಾಡು ಮಲೆನಾಡು ಭಾಗದಲ್ಲಿ ಆನೆ ಹಾವಳಿಗೆ ಜನರು ಹೈರಾಣಾಗಿದ್ದಾರೆ. ಜೊತೆಗೆ ಅರಣ್ಯ ಅಧಿಕಾರಿಗಳು ಕೂಡ ಹಗಲಿರುಳು ನಿದ್ದೆಗೆಟ್ಟು ಕಂಗಾಲಾಗಿದ್ದಾರೆ. ಆದರೆ ಇದೀಗ ಆಫೀಸ್‌ನಲ್ಲಿಯೇ ಕುಳಿತುಕೊಂಡು 20 ಆನೆಗಳಿದ್ದರೂ ಸಲೀಸಾಗಿ ದಾರಿ ತಪ್ಪಿಸಿ, ಪಾಠ ಕಲಿಸಲು ಮುಂದಾಗಿದ್ದಾರೆ.ಇದನ್ನೂ ಓದಿ:ಹಾಲಿನ ದರ ಏರಿಕೆ – ಇಂದು ಸಿಎಂ ಸಭೆಯಲ್ಲಿ ನಿರ್ಧಾರ ಸಾಧ್ಯತೆ!
ಮನಸೋಯಿಚ್ಛೆ ದಾಳಿ ಮಾಡುವ ಪುಂಡಾನೆಗಳನ್ನು ಓಡಿಸಲು ಅಧಿಕಾರಿಗಳು ನೂತನ ಪ್ಲ್ಯಾನ್ ಮಾಡಿದ್ದಾರೆ. ಆನೆಗಳನ್ನು ಓಡಿಸುವ ಸಲುವಾಗಿಯೇ ಅಧಿಕಾರಿಗಳು ಹೊಸ ಡಿವೈಸ್ ಉಪಯೋಗಿಸಲಿದ್ದಾರೆ. ಡ್ರೋನ್ ಕ್ಯಾಮರಾದಲ್ಲಿ ಆನೆಗಳ ಚಲನ-ವಲನ ಗಮನಿಸುವ ಅಧಿಕಾರಿಗಳು, ಆನೆಗಳು ಊರು-ತೋಟಗಳಿಗೆ ಬರುವ ಮಾರ್ಗದಲ್ಲಿ ಮರದ ಮೇಲೆ 6-8 ಅಡಿ ಎತ್ತರದಲ್ಲಿ ಈ ಡಿವೈಸ್ ಕಟ್ಟಿರುತ್ತಾರೆ. ಆನೆಗಳು 15-20 ಮೀ. ದೂರದಲ್ಲಿ ಇರುವಾಗಲೇ ಡಿವೈಸ್ ನಿರಂತರವಾಗಿ ಚಿತ್ರ-ವಿಚಿತ್ರ ಶಬ್ಧ ಮಾಡುತ್ತದೆ. ಆ ಶಬ್ದಕ್ಕೆ ಹೆದರಿ ಆನೆಗಳ ಹಿಂಡು ಬಂದ ದಾರಿಯಲ್ಲಿ ವಾಪಸ್ ಹೋಗುತ್ತವೆ. ಈಗಾಗಲೇ ಮಲೆನಾಡಿನಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು, ಜನರು ಹಾಗೂ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಸದ್ಯಕ್ಕೆ ಅರಣ್ಯ ಅಧಿಕಾರಿಗಳು ಈ ಡಿವೈಸ್‌ನಿಂದ ಕಾಡಾನೆಗಳು ನಾಡಿನತ್ತ ಬರದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಪೂರ್ಣ ಪ್ರಮಾಣದಲ್ಲಿ ಸಕ್ಸಸ್ ಆದರೆ, ಕೃಷಿಕರು ಕಾಡಾನೆಗಳಿಂದ ಬೆಳೆ ಉಳಿಸಿಕೊಳ್ಳಬಹುದು ಹಾಗೂ ಅರಣ್ಯ ಅಧಿಕಾರಿಗಳು (Forest Department) ಸ್ವಲ್ಪ ನೆಮ್ಮದಿಯಿಂದ ಇರಬಹುದು. ಈ ಸೋಲಾರ್ ಡಿವೈಸ್ ಸೆನ್ಸಾರ್ ಮೂಲಕವೇ ಕೆಲಸ ಮಾಡುತ್ತದೆ. ಆನೆಗಳು ಈ ಡಿವೈಸ್ ಬಳಿ ಬರ್ತಿದ್ದಂತೆ ಶಬ್ಧ ಮಾಡಲು ಶುರುಮಾಡುತ್ತದೆ. ರಾತ್ರಿಯಾದರೂ ಕೂಡ ಇದರ ಲೈಟ್ ಬೆಳಕು ಪಟಾಕಿಯಲ್ಲಿ ಬರುವ ಬೆಳಕಿನಂತೆ ಕಾಣುವುದರಿಂದ ಆನೆಗಳು ಹಿಂದೆ ಹೋಗುತ್ತವೆ. ಈಗಾಗಲೇ ಇದರ ಪ್ರಯೋಗ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ರೈತರಿಗೂ ಈ ಡಿವೈಸ್ ಸಬ್ಸಿಡಿಯಲ್ಲಿ ಕೊಡುವುದಕ್ಕೆ ಅರಣ್ಯ ಇಲಾಖೆ ಚಿಂತಿಸಿದೆ.ಇದನ್ನೂ ಓದಿ:ತುಮಕೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಶೀತಲ ಸಮರ; ಡಾ.ರಂಗನಾಥ್-ರಾಜಣ್ಣ ಕುಟುಂಬ ನಡುವೆ ವಾರ್