ತುಮಕೂರು: ರೈತರು ಮತ್ತು ಅರಣ್ಯ ಇಲಾಖೆ (Forest Department) ನಡುವೆ ಜಟಾಪಟಿ ನಡೆದಿದೆ. ತುಮಕೂರು ಜಿಲ್ಲೆಯ ಮಾರನಾಯಕನ ಪಾಳ್ಯದಲ್ಲಿ ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ವಾಗ್ವಾದ ನಡೆದಿದೆ.
Advertisement
ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದ ಎಲೆಕೋಸಿನ ಗಿಡವನ್ನು ಜೆಸಿಬಿ (JCB) ಯಿಂದ ಕಿತ್ತು ಹಾಕಲಾಗಿದೆ. ಚೆಂಡುಹೂವು, ರಾಗಿ ಹಾಗೂ ಎಲೆ ಕೋಸು ಬೆಳೆಗಳು ಜೆಸಿಬಿಗೆ ಬಲಿಯಾಗಿವೆ. ನಳನಳಿಸುತ್ತಿದ್ದ 11 ಲಕ್ಷ ಮೌಲ್ಯದ ಎಲೆ ಕೋಸು ಮಣ್ಣುಪಾಲಾಗಿವೆ. ತಾವು ಪ್ರೀತಿಯಿಂದ ಬೆಳೆದ ಬೆಳೆ ನಾಶಪಡಿಸುತ್ತಿರುವುದನ್ನು ಕಣ್ಣಾರೆ ಕಂಡ ರೈತರು (Farmers) ಅಧಿಕಾರಿಗಳ ಕೈಕಾಲು ಹಿಡಿದು ಕಣ್ಣೀರಿಡುತ್ತಿದ್ದಾರೆ. ಇದನ್ನೂ ಓದಿ: 10 YouTube ಚಾನೆಲ್‌ನ ವೀಡಿಯೋಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ
Advertisement
Advertisement
ಪಂಡಿತನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಸುಮಾರು 6 ಎಕರೆಯನ್ನು ಮೂವರು ರೈತರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಬೆಳೆಗಳನ್ನು ನಾಶಪಡಿಸಲಾಗಿದೆ. ಸುಮಾರು 4 ಎಕರೆ ಪ್ರದೇಶದಲ್ಲಿ ಬೆಳೆದಿರುವ ಎಲೆಕೋಸು, ಒಂದು ಎಕರೆ ಪ್ರದೇಶದಲ್ಲಿ ಬೆಳೆದಿರುವ ಚಂಡುಹೂವು, ರಾಗಿ ಬೆಳೆಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಸುಮಾರು 11 ಲಕ್ಷದ ಎಲೆಕೋಸು, 1 ಲಕ್ಷ ಚೆಂಡು ಹೂವು ಹಾಗೂ ಲಕ್ಷಾಂತರ ರೂ. ಮೌಲ್ಯದ ನೀರಾವರಿ ಪೈಪ್ ಗಳನ್ನು ಜೆಸಿಬಿಯಿಂದ ಅಧಿಕಾರಿಗಳು ನಾಶಪಡಿಸಿದ್ದಾರೆ.
Advertisement
ರೈತ ಸಿದ್ದ ಬಸವಯ್ಯರಿಗೆ ಸೇರಿದ ಎಲೆಕೋಸು, ಶಿವಲಿಂಗಯ್ಯ ಹಾಗೂ ವೆಂಕಟಪ್ಪರ ಬೆಳೆಗಳಿಗೂ ಹಾನಿ ಮಾಡಲಾಗಿದೆ. ಬಿಗಿ ಪೊಲೀಸ್ ಭದ್ರತೆಯೊಂದಿಗೆ ಅರಣ್ಯ ಇಲಾಖೆ ತೆರವುಗೊಳಿಸಿದೆ.