ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ಕ್ಕೆ (Mysuru Dasara 2024) ಅರಣ್ಯ ಇಲಾಖೆಯ ಸಿದ್ಧತೆ ಭರದಿಂದ ಸಾಗುತ್ತಿದೆ. ದಸರಾ ಗಜಪಡೆ ಆಯ್ಕೆ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆ (Forest Department) ನಿರತವಾಗಿದ್ದು, ದಸರಾ ಮಹೋತ್ಸವದ ಕೇಂದ್ರ ಬಿಂದುವಾಗಿ 18 ಆನೆಗಳನ್ನ (Elephant) ಗುರುತಿಸಲಾಗಿದೆ ಅಂತ ಸಂಬಂಧಪಟ್ಟ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ದಸರಾ ಮಹೋತ್ಸವದ 2 ತಿಂಗಳ ಮುಂಚಿತವಾಗಿ ಗಜಪಡೆ (Gajapade) ಮೈಸೂರಿಗೆ ಆಗಮಿಸಲಿದೆ. ಆಗಸ್ಟ್ 9 ಅಥವಾ 11ಕ್ಕೆ ಗಜಪಯಣಕ್ಕೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ. ಸಾಕಾನೆಗಳ ಅಯ್ಕೆಯಾದ ಹಿನ್ನೆಲೆಯಲ್ಲಿ ದುಬಾರೆ ಶಿಬಿರದ ಮಾವುತರು ಹಾಗೂ ಕವಾಡಿಗಳು ಚಾಮುಂಡೇಶ್ವರಿ ತಾಯಿ ಸೇವೆ ಮಾಡಲು ಕಾತರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಮುಡಾ ಅಕ್ರಮ ಕೇಸ್: ಚರ್ಚೆಗೆ ಅವಕಾಶ ಇಲ್ಲವೆಂದು ಸ್ಪೀಕರ್ ರೂಲಿಂಗ್ – ವಿಧಾನಸಭೆಯಲ್ಲಿ ಗದ್ದಲ, ಮಾತಿನ ಚಕಮಕಿ
ನಾಡಹಬ್ಬ ದಸರೆಯ ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಅರಣ್ಯ ಇಲಾಖೆ ಪೂರ್ಣಗೊಳಿಸಿದ್ದು, ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದ 5 ಕಾಡಾನೆಗಳು ಆಯ್ಕೆಯಾಗಿವೆ. ಧನಂಜಯ, ಗೋಪಿ, ಕಂಜನ್, ಸುಗ್ರೀವ ಮತ್ತು ಪ್ರಶಾಂತ್ ಆನೆಗಳು ಆಯ್ಕೆಯಾಗಿವೆ. ಆನೆಗಳ ಆಯ್ಕೆಗೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಿಂದ ಇಲಾಖೆಯ ತಜ್ಞರ ತಂಡ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಆನೆಯ ಶಿಬಿರಗಳಿಗೆ ತೆರಳಿ ಅವುಗಳ ಆರೋಗ್ಯ ಮತ್ತು ಕಾರ್ಯಕ್ಷಮತೆಯನ್ನು ಗಮನಿಸಿ ಆಯ್ಕೆ ಪ್ರಕ್ರಿಯೆ ಮಾಡಿದೆ. ಆದರೆ ಈ ಪಟ್ಟಿಯನ್ನು ಮೇಲಾಧಿಕಾರಿಗಳ ಒಪ್ಪಿಗೆಯ ನಂತರ ಆನೆಗಳ ಅಂತಿಮ ಪಟ್ಟಿ ಆಯಾ ಶಿಬಿರ ವ್ಯಾಪ್ತಿಯ ಅರಣ್ಯಾಧಿಕಾರಿಗಳಿಗೆ ಕಳುಹಿಸಲು ಇಲಾಖೆ ನಿರ್ಧರಿಸಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಈ ಬಾರಿ ಆನೆಗಳಿಗೆ ಹೆಚ್ಚಿನ ತರಬೇತಿ ನೀಡಲು ಇಲಾಖೆ ನಿರ್ಧರಿಸಿದೆ. ಹೀಗಾಗಿ 60 ದಿನಗಳ ಮುಂಚಿತವಾಗಿ ಆನೆಗಳನ್ನು ಕರೆತರಲು ಗಜಪಯಣ ಆಗಸ್ಟ್ 2ನೇ ವಾರದಲ್ಲಿ ಮೈಸೂರಿನತ್ತ ಹೊರಡಲಿದೆ. ಇದನ್ನೂ ಓದಿ: ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ನೆರವಾಗುವ ಸ್ಕೈಡೆಕ್ ಪ್ಲಾಟ್ ಫಾರ್ಮ್ ಪರಿಚಯಿಸಿದ ಆಸ್ಟರಿಯಾ
ಜೊತೆಗೆ ಎರಡು ಹಂತದಲ್ಲಿ ಗಜಪಯಣ ಸಾಗಲಿದೆ. ಒಂದೆಡೆ ಈಗಾಗಲೇ ಆನೆಗಳ ಆಯ್ಕೆ ಪ್ರಕ್ರಿಯೆ ಮುಗಿದಿದ್ದರೆ ಮತ್ತೊಂದೆಡೆ ದಸರಾಕ್ಕೆ ತೆರಳುವ ಖುಷಿಯಲ್ಲಿ ಆನೆ ಆಯ್ಕೆಯಾಗುವ ಮಾವುತರು ಇದ್ದಾರೆ. ಹಲವು ಬಾರಿ ಪಟ್ಟದ ಆನೆಯಾಗಿ ಕಾರ್ಯ ನಿರ್ವಹಿಸಿರುವ ಧನಂಜಯ ಆನೆಯ ಮಾವುತ ಭಾಸ್ಕರ್ ತೀವ್ರ ಸಂತಸ ವ್ಯಕ್ತಪಡಿಸಿದ್ದು ದಸರಾಕ್ಕೆ ತೆರಳಿ ಅಲ್ಲಿ ತಾಯಿ ಚಾಮುಂಡೇಶ್ವರಿ ಸೇವೆ ಮಾಡುವುದೇ ದೊಡ್ಡ ಸೌಭಾಗ್ಯ. ಅದಕ್ಕಾಗಿ ಕಾತರರಾಗಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್ ಕ್ರೀಡಾಕೂಟ ವೀಕ್ಷಣೆಗೆ ಬಂದಿದ್ದ ಆಸ್ಟ್ರೇಲಿಯಾ ಮಹಿಳೆ ಮೇಲೆ ಗ್ಯಾಂಗ್ ರೇಪ್!