– ತೆರವಿಗೆ ಸುಪ್ರೀಂ ಆದೇಶವಿದ್ರೂ ನಿರ್ಲಕ್ಷ್ಯ
ಮೈಸೂರು: ಕಾಡು ಪ್ರಾಣಿಗಳ ಕಾಡಿನಿಂದ ಹೊರಬರದಂತೆ ತಡೆಯಲು ಅರಣ್ಯ ಇಲಾಖೆ ಅನುಸರಿಸಿರೋ ಕ್ರಮ ಕಾಡು ಪ್ರಾಣಿಗಳ ಪ್ರಾಣಕ್ಕೆ ಕುತ್ತು ತಂದಿದ್ದು, ಕಬ್ಬಿಣದ ಮೊಳೆಗಳನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದರೂ ನಿರ್ಲಕ್ಷ್ಯವನ್ನು ತೋರುತ್ತಿದೆ.
Advertisement
ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ದೊಡ್ಡ ದೊಡ್ಡ ಚೂಪಾದ ಕಬ್ಬಿಣದ ಮೊಳೆಗಳ ಗೋಡೆಯನ್ನು ಅರಣ್ಯ ಇಲಾಖೆ ನಿರ್ಮಿಸಿದೆ. ಈ ಚೂಪಾದ ಕಬ್ಬಿಣದ ಮೊಳೆಗಳ ಗೋಡೆ ಶುದ್ಧ ಅವೈಜ್ಞಾನಿಕ. ಇದು ಪ್ರಾಣಿಗಳ ಜೀವಕ್ಕೆ ಕುತ್ತು ತರುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಅರಣ್ಯ ಇಲಾಖೆಗೆ ಛೀಮಾರಿ ಹಾಕಿ ತಕ್ಷಣವೇ ಚೂಪಾದ ಮೊಳೆಗಳ ಗೋಡೆ ತೆರವು ಮಾಡುವಂತೆ ಆದೇಶಿಸಿದೆ. ಆದರೂ, ಅರಣ್ಯ ಇಲಾಖೆ ಮಾತ್ರ ಕಬ್ಬಿಣದ ಮೊಳೆಗಳ ಗೋಡೆ ತೆರವಿಗೆ ಮೀನಾಮೇಷ ಎಣಿಸುತ್ತಿದೆ.
Advertisement
Advertisement
ಈ ಚೂಪಾದ ಕಬ್ಬಿಣದ ಮೊಳೆ ಮೇಲೆ ಅಪ್ಪಿ-ತಪ್ಪಿ ಚಿರತೆ, ಹುಲಿ, ಚಿಂಕೆ ಹೀಗೆ ಯಾವುದಾದರೂ ಕಾಡು ಪ್ರಾಣಿಗಳು ಕಾಲಿಟ್ಟರೆ ಅವುಗಳ ಜೀವ ಹೋಗುವುದು ನಿಶ್ಚಿತ. ಇದನ್ನು ಗಮನಿಸಿಯೇ ಸುಪ್ರೀಂ ಕೋರ್ಟ್ ಗೋಡೆ ತೆರವಿಗೆ ಇಲಾಖೆಗೆ ನಿರ್ದೇಶಿಸಿದೆ. ಆದರೂ ಅರಣ್ಯ ಇಲಾಖೆ ಕಾಡು ಪ್ರಾಣಿಗಳ ಬಲಿಗಾಗಿ ಕಾದಿದೆ ಏನೋ ಎಂಬಂತೆ ವರ್ತಿಸುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv