ಹಾಸನ: ಚನ್ನರಾಯಪಟ್ಟಣದ (Channarayapatna) ದಿಂಡಗೂರು ಗ್ರಾಮದಲ್ಲಿ ಒಂದು ವಾರದ ಅಂತರದಲ್ಲಿ ಜಮೀನೊಂದರಲ್ಲಿ ಎರಡು ಚಿರತೆಗಳನ್ನು (Leopard) ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.
ದಿಂಡಗೂರು ಗ್ರಾಮದ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದ್ದು ಗ್ರಾಮದೊಳಗೆ ಬಂದು ನಾಯಿ, ಜಾನವಾರುಗಳನ್ನು ತಿಂದು ಹಾಕುತ್ತಿದ್ದವು. ಹಗಲು ವೇಳೆ ರೈತರ ಜಮೀನಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಮೇಯುತ್ತಿದ್ದ ಜಾನುವಾರಗಳ ಮೇಲೆ ದಾಳಿ ಮಾಡುತ್ತಿದ್ದವು. ಚಿರತೆ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದರು. ಅದರಂತೆ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿ ಎರಡು ಚಿರತೆಗಳನ್ನೂ ಸೆರೆಹಿಡಿದಿದ್ದಾರೆ. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದ ತಿರುವಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ
ಕಳೆದ ಫೆಬ್ರವರಿ 26 ರಂದು ರೈತ ಆನಂದ್ ಅವರಿಗೆ ಸೇರಿದ್ದ ಜಮೀನಿನಲ್ಲಿ ಚಿರತೆ ಬೋನಿಗೆ ಬಿದ್ದಿತ್ತು. ಇಂದು (ಮಾ.6) ಸಹ ಒಂದು ಚಿರತೆ ಸೆರೆಯಾಗಿದೆ. ಒಂದು ವಾರದ ಅಂತರದಲ್ಲಿ ಅದೇ ಜಾಗದಲ್ಲಿ ಎರಡನೇ ಚಿರತೆ ಸೆರೆಯಾಗಿದ್ದು ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನೂ ಸಹ ಗ್ರಾಮದ ಸುತ್ತಮುತ್ತಾ ಚಿರತೆಗಳಿದ್ದು ಅವುಗಳನ್ನು ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಗಳೂರು ನಗರಕ್ಕೆ ಚಿರತೆಗಳ ಎಂಟ್ರಿ; ಜನರಲ್ಲಿ ಹೆಚ್ಚಿದ ಆತಂಕ

