ಮೈಸೂರು: ಬರೋಬ್ಬರಿ 1.5 ಕೋಟಿ ಮೊತ್ತದ ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿಗಾಗಿ ಖ್ಯಾತ ವನ್ಯಜೀವಿ ತಜ್ಞೆ ಕೃತಿ ಕಾರಂತ್ ಸುಳ್ಳು ದಾಖಲೆ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ಆರೋಪಿಸಿದೆ.
ಖ್ಯಾತ ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ಪುತ್ರಿ ಕೃತಿ ಕಾರಂತ್ ವನ್ಯಜೀವಿ ತಜ್ಞೆ ಆಗಿದ್ದು, ಈ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ ಈಗ ಅವರು ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿಗಾಗಿ ಸುಳ್ಳು ದಾಖಲೆ ನೀಡಿದ್ದಾರೆ ಎಂದು ಆರೋಪಿಸಿ, ಪತ್ರಿಕಾ ಪ್ರಕಟಣೆ ಹಾಗೂ ಟ್ವಿಟ್ಟರ್, ಫೇಸ್‍ಬುಕ್ ಪೇಜ್‍ಗಳಲ್ಲಿ ಕೃತಿ ವಿರುದ್ಧ ಅರಣ್ಯ ಇಲಾಖೆ ವಾರ್ ಶುರು ಮಾಡಿದೆ.
Advertisement
Advertisement
2019ನೇ ಸಾಲಿನ ಅಂತರಾಷ್ಟ್ರೀಯ ರೋಲೆಕ್ಸ್ ಅವಾರ್ಡ್ ಅನ್ನು ಕೃತಿ ಕಾರಂತ್ ಪಡೆದುಕೊಂಡಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮಾಡಿದವರಿಗೆ ರೋಲೆಕ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಬರೋಬ್ಬರಿ 1.5 ಕೋಟಿ ಮೊತ್ತದ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ಈ ಪ್ರಶಸ್ತಿ ಪಡೆಯಲು ಕೃತಿ ಅವರು ಸುಳ್ಳು ದಾಖಲೆ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ಗರಂ ಆಗಿದೆ.
Advertisement
https://www.facebook.com/aranya.kfd/posts/2238629792893031
Advertisement
ಸಮುದಾಯ ಆಧಾರಿತ ಸಂರಕ್ಷಣಾ ಸೇವೆ ಮಾಡಿರುವ ಬಗ್ಗೆ ಕೃತಿ ಅರಣ್ಯ ಇಲಾಖೆಗೆ ದಾಖಲೆಗಳನ್ನು ನೀಡಿದ್ದಾರೆ. ವೈಲ್ಡ್ ಸೇವೆ, ವೈಲ್ಡ್ ಶಾಲೆ ಹೆಸರಿನಲ್ಲಿ ಬಂಡೀಪುರ, ನಾಗರಹೊಳೆ ಅರಣ್ಯದಂಚಿನ ಜನರಿಗೆ ಸಹಾಯ ಮಾಡಿರುವ ದಾಖಲೆ, ಕಾಡುಪ್ರಾಣಿ-ಮಾನವ ಸಂಘರ್ಷದಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ಕೊಡಿಸಿದ್ದೇವೆ ಎಂದು ಕೃತಿ ಹೇಳಿಕೊಂಡಿದ್ದಾರೆ. 6505 ಜನರ ಪರವಾಗಿ 13.702 ಅರ್ಜಿಗಳಿಗೆ ಸ್ಪಂದಿಸಿರುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಇದೇ ದಾಖಲೆಗಳನ್ನ ರೋಲೆಕ್ಸ್ ಸಂಸ್ಥೆಗೂ ಕೃತಿ ನೀಡಿದ್ದಾರೆ.
ಆದರೆ ಈ ದಾಖಲೆಗಳು ನಿಜವಲ್ಲ. ಕೃತಿ ಅವರು ಪ್ರಶಸ್ತಿಗೋಸ್ಕರ ಈ ರೀತಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಅರಣ್ಯ ಇಲಾಖೆ ಅವರ ವಿರುದ್ಧ ತಿರುಗಿ ಬಿದ್ದಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]