– ವಿಧಿವಿಜ್ಞಾನ ತಜ್ಞರು ಹೇಳಿದ್ದೇನು?
ಮೈಸೂರು: ನೈಟ್ರೋಜನ್ ಅನ್ನು ಬಲೂನ್‍ನಲ್ಲಿ ತುಂಬಿದ್ದೇ ಸುತ್ತೂರು ಜಾತ್ರಾ ಮಹೋತ್ಸವದ ನಿಮಿತ್ತ ಪಂದ್ಯಾವಳಿ ಉದ್ಘಾಟನೆ ವೇಳೆ ನಡೆದ ಅವಘಡಕ್ಕೆ ಕಾರಣವಾಗಿದೆ ಎಂದು ವಿಧಿವಿಜ್ಞಾನ ತಜ್ಞರು ದಿನೇಶ್ ರಾವ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಹೀಲಿಯಂನ ಬೆಲೆ ಹೈಡ್ರೋಜನ್/ನೈಟ್ರೋಜನ್ ಗ್ಯಾಸ್ ಗಿಂತ ದುಪ್ಪಟ್ಟು. ಹೀಗಾಗಿ ನೈಟ್ರೋಜನ್ ಗ್ಯಾಸ್ ಅನ್ನು ಬಲೂನ್‍ಗೆ ತುಂಬಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ. ಹೀಲಿಯಂ ಬೆಂಕಿ ನಿರೋಧಕವಾಗಿ ಕೆಲಸ ಮಾಡುತ್ತದೆ. ಹೀಗಾಗಿ ಹೀಲಿಯಂ ತುಂಬಿದ ಬಲೂನ್‍ಗಳಿಂದ ಬೆಂಕಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನು ಓದಿ: ಭಾರೀ ಅವಘಡದಿಂದ ಸುತ್ತೂರು ಶ್ರೀಗಳು ಪಾರು!
Advertisement
Advertisement
ನೈಟ್ರೋಜನ್ ಆಕ್ಸಿಜನ್‍ನೊಂದಿಗೆ ಬೆರೆತರೆ ಬೆಂಕಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಎಲ್ಲಾ ಬಲೂನ್‍ಗಳು ಸ್ಫೋಟಗೊಂಡು ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ ಉತ್ತಮ ಗುಣಮಟ್ಟದ ಬಲೂನ್ ಬಳಕೆ ಮಾಡದಿದ್ದರೂ ಇಂತಹ ಅನಾಹುತ ಸಂಭವಿಸುತ್ತದೆ ಎಂದ ಮಾಹಿತಿ ನೀಡಿದರು.
Advertisement
ಈ ಅವಘಡವು ಓಪನ್ ಸ್ಪೇಸ್‍ನಲ್ಲಿ ಸಂಭವಿಸಿದ್ದರಿಂದ ಅಷ್ಟೇನೂ ತೀವ್ರತೆ ಕಂಡಿಲ್ಲ. ಒಂದು ವೇಳೆ ಕೊಠಡಿಯಲ್ಲಿ ಸಂಭವಿಸಿದ್ದರೆ ಸ್ಫೋಟದ ತೀವ್ರತೆ ಹೆಚ್ಚಾಗಿರುತ್ತಿತ್ತು. ಸಿರಿಯಾ ಯುದ್ಧದಲ್ಲಿ ನೈಟ್ರೋಜನ್ ಬಲೂನ್‍ಗಳನ್ನು ಬಳಸಿ ವಿಮಾನಗಳನ್ನು ಸ್ಫೋಟ ಮಾಡಲಾಗುತ್ತಿತ್ತು. ಹೀಗಾಗಿ ಕೆಲವು ದೇಶಗಳಲ್ಲಿ ನೈಟ್ರೋಜನ್ ತುಂಬಿದ ಬಲೂನ್‍ಗಳನ್ನು ಬ್ಯಾನ್ ಮಾಡಲಾಗಿದೆ. ಇಂತಹದದ್ದೇ ಘಟನೆಯೊಂದು ಕಳೆದ ಬಾರಿ ಮಂಡ್ಯದಲ್ಲಿ ನಡೆದಿತ್ತು. ಆಗಲೇ ಸರ್ಕಾರ ನೈಟ್ರೋಜನ್ ಬಲೂನ್ ಮಾರಾಟದ ಮೇಲೆ ನಿರ್ಬಂಧ ಹೇರಬಹುದಿತ್ತು ಎಂದು ಹೇಳಿದರು.
Advertisement
ಹೀಲಿಯಂ ಗ್ಯಾಸ್ ತುಂಬಿದ ಬಲೂನ್‍ಗಳನ್ನೇ ಉಪಯೋಗಿಸಬೇಕು. ಬೇರೆ ಯಾವುದೇ ಗ್ಯಾಸ್ ತುಂಬಿದ ಬಲೂನ್‍ಗಳನ್ನು ಉಪಯೋಗಿಸಿದರೆ ಇಂತಹ ಅನಾಹುತಗಳು ಸಂಭವಿಸುತ್ತವೆ ಎಂದು ತಜ್ಞರು ಪಬ್ಲಿಕ್ ಟಿವಿ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv