ಮೈಸೂರು: ಇಂತಹ ಲಿಫ್ಟ್ (Lift) ಬಗ್ಗೆ ನೀವು ಎಲ್ಲೂ ನೋಡಿರಲ್ಲ ಅಥವಾ ಕೇಳಿರೋಕ್ಕೆ ಸಾಧ್ಯವೇ ಇಲ್ಲ. ಬಸ್ ಹತ್ತಲಿಲ್ಲ, ರೈಲು ಏರಲಿಲ್ಲ, ವಿಮಾನವಂತು ಸಿಕ್ಕಿಲ್ಲ. ಆದರೂ ಒಬ್ಬ ಭೂಪ ಬರೋಬ್ಬರಿ 20 ಸಾವಿರ ಕಿ.ಮೀ ಪ್ರಯಾಣ ಮಾಡಿದ್ದಾನೆ.
ಕೇವಲ ಲಿಫ್ಟ್ ಮೂಲಕವೇ ನಾನಾ ದೇಶವನ್ನು ವಿದೇಶಿ ಪ್ರಜೆಯೊಬ್ಬ ಸುತ್ತುತ್ತಿದ್ದಾನೆ. ಫ್ರಾನ್ಸ್ ಮೂಲದ 23 ವರ್ಷದ ಲುಕಾಸ್ ವೆನ್ನಾರ್‌ನ್ ಇಂತಹ ವಿಶೇಷ ಪ್ರಯಾಣ ಮಾಡುತ್ತಿದ್ದಾನೆ. ಫೆಬ್ರವರಿ 4 ರಂದು ಫ್ರಾನ್ಸ್‌ನಿಂದ ಪ್ರಯಾಣ ಆರಂಭಿಸಿರುವ ಲುಕಾಸ್, ಎಲ್ಲಿಯೂ ಟಿಕೆಟ್ ಖರೀದಿಸಿಲ್ಲ. ಕೇವಲ ಲಿಫ್ಟ್ ಮೂಲಕ ಪ್ರಯಾಣ ಮಾಡುತ್ತಿದ್ದಾನೆ.
ಹಡಗು ಸೇರಿ ಕಾರು, ಬೈಕ್, ಟ್ರಕ್‌ಗಳ ಮೂಲಕ ಇವರ ಪ್ರಯಾಣ ಸಾಗಿದೆ. ಫ್ರಾನ್ಸ್‌ನಿಂದ ಆರಂಭಿಸಿ ಆಫ್ರಿಕಾ, ಚೀನಾ, ಟಿಬೇಟ್, ಖಜಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶ ಸೇರಿ 14 ಕ್ಕೂ ಹೆಚ್ಚು ದೇಶಗಳಲ್ಲಿ ಸಂಚಾರ ಮಾಡಿದ್ದಾನೆ. ಇತ್ತೀಚೆಗೆ ಮೈಸೂರು ಅರಮನೆ ನೋಡಿ ಖುಷಿಪಟ್ಟ ಫ್ರಾನ್ಸ್ ಪ್ರಜೆ ಭಾರತದಲ್ಲಿ ಒಟ್ಟು 2 ತಿಂಗಳು ಲಿಫ್ಟ್ ಮೂಲಕವೇ ಸಂಚಾರ ಮಾಡಿದ್ದಾನೆ. ಇದನ್ನೂ ಓದಿ: ಅಸ್ಸಾಂನಲ್ಲಿ ಸ್ವಾತಂತ್ರ್ಯ ದಿನಾಚರಣೆ ಬಹಿಷ್ಕಾರಕ್ಕೆ ಉಗ್ರಸಂಘಟನೆಗಳ ಕರೆ- ಪೊಲೀಸರಿಂದ ಬಿಗಿ ಭದ್ರತೆ
ಇದೀಗ ಲುಕಾಸ್ ಮೈಸೂರು ಪ್ರವಾಸ ಮುಗಿಸಿ, ಶ್ರೀಲಂಕಾ ಕಡೆಗೆ ಪ್ರವಾಸ ಹೊರಟ್ಟಿದ್ದಾರೆ. ಸ್ವಿಟ್ಜರ್ಲೆಂಡ್ ವರೆಗೆ ಲಿಫ್ಟ್ ಮೂಲಕವೇ ಸಂಚಾರ ಮಾಡುವ ಗುರಿಯನ್ನು ಲುಕಾಸ್ ಹೊಂದಿದ್ದಾನೆ. ಇದನ್ನೂ ಓದಿ: ಬಿಜೆಪಿ ವಿರುದ್ಧ 50% ಕಮಿಷನ್ ಆರೋಪ – ಪ್ರಿಯಾಂಕಾ ಗಾಂಧಿ ವಿರುದ್ಧ ಪ್ರಕರಣ ದಾಖಲು
Web Stories