ಬೆಂಗಳೂರು: ಭಾರತದ ಪ್ರವಾಸಕ್ಕೆ (India Tour) ಬಂದಿರುವ ವಿದೇಶಿ ಪ್ರವಾಸಿಗರೊಬ್ಬರಿಗೆ ಬೆಂಗಳೂರಿನಲ್ಲಿ (Bengaluru) ಪುಂಡನೊಬ್ಬ ಕಿರುಕುಳ ನೀಡಿದ ಘಟನೆ ನಡೆದಿದೆ.
ನೆದರ್ಲ್ಯಾಂಡ್ ಮೂಲದ ಮ್ಯಾಡ್ಲಿ ರೋವರ್ (Madly Rover) ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವೀಡಿಯೋ ಮಾಡುತ್ತಾ ಸುತ್ತುತ್ತಿದ್ದರು. ಸಂಡೇ ಬಜಾರ್‌ನಲ್ಲಿ ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗ ಸ್ಥಳೀಯ ವ್ಯಕ್ತಿಯೊಬ್ಬ ವಿಡಿಯೋ ಮಾಡದಂತೆ ಹಲ್ಲೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ʼಶಕ್ತಿʼ ಯೋಜನೆ ಉದ್ಘಾಟನೆ ಜೋಶ್‌ನಲ್ಲಿ ಸರ್ಕಾರಿ ಬಸ್ ಚಲಾಯಿಸಿ ಸ್ವಾಮೀಜಿ ಅಚಾತುರ್ಯ
@BlrCityPolice Arrest this goon harassing foreigners.
Location : Chor Bazaar (Thieves Market)
Victim : "Madly Rover" Youtuber
YouTube Link : https://t.co/PrZnLG6qmM pic.twitter.com/aM6bGRVWAM
— Aditya (@adityay189) June 12, 2023
Advertisement
ಸಾಮಾಜಿಕ ಜಾಲತಾಣದಲ್ಲಿ (Social Meida) ವೀಡಿಯೋ ಹರಿದಾಡುತ್ತಿದ್ದಂತೆ ಬಹಳ ಟೀಕೆ ವ್ಯಕ್ತವಾಗಿದೆ. ನೆಟ್ಟಿಗರು ಖಂಡನೆ ವ್ಯಕ್ತಪಡಿಸಿ ಬೆಂಗಳೂರು ಪೊಲೀಸರಿಗೆ (Bengaluru Police) ಟ್ಯಾಗ್ ಮಾಡಿ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವೀಟ್ ಮಾಡಿದ್ದಾರೆ.
Advertisement
ಅತಿಥಿ ದೇವೋ ಭವ ಎಂಬ ಪರಿಕಲ್ಪನೆ ಇರುವ ದೇಶದಲ್ಲಿ ದೌರ್ಜನ್ಯ ನಡೆದಿದೆ. ಪೊಲೀಸರು ಕೂಡಲೇ ಎಚ್ಚೆತ್ತು ಈ ರೀತಿ ಕಿರುಕುಳ ನೀಡುವ ಪುಂಡರಿಗೆ ಬಿಸಿ ಮುಟ್ಟಿಸಬೇಕೆಂದು ಜನ ಕಮೆಂಟ್ ಮಾಡುತ್ತಿದ್ದಾರೆ.