ಚಂಡೀಗಢ: ರಸ್ತೆ ದಾಟುವಾಗ ಕಾರು ಡಿಕ್ಕಿಯಾಗಿ ಯುವತಿಯೋರ್ವಳು 14 ಅಡಿ ಎತ್ತರದಿಂದ ಹಾರಿ ಬಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಂಜಾಬ್‌ನ (Punjab) ಜಿರಾಕ್‌ಪುರದಲ್ಲಿ (Zirakpur) ನಡೆದಿದೆ.
ಮೃತಳನ್ನು ವಿದೇಶಿ ಪ್ರಜೆ ಮಾವ್ಲುಡಾ ಎಂದು ಗುರುತಿಸಲಾಗಿದ್ದು, ಸ್ನೇಹಿತ ಅಭಿಷೇಕಗೂ ಕೂಡ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರು ಸ್ಥಳೀಯ ಆಸ್ಪತ್ರೆಯಿಂದ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಡಿಸಿಎಂ ಡಿಕೆಶಿ ಔತಣಕೂಟದಲ್ಲಿ ಸಿಎಂ ಸಿದ್ದರಾಮಯ್ಯ ರಾಜಿ ಸಂಧಾನ!
ಸ್ನೇಹಿತ ಅಭಿಷೇಕ ಮಾಹಿತಿ ಪ್ರಕಾರ, ತಮ್ಮ ಪತ್ನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಬಂದಿದ್ದರು. ಈ ವೇಳೆ ಆಸ್ಪತ್ರೆಗೆ ದಾಖಲಿಸಿ, ಇಬ್ಬರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ಸಮಯಕ್ಕೆ ಕಪ್ಪು ಬಣ್ಣದ ಆಡಿ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮಾವ್ಲುಡಾ ಸುಮಾರು 14 ಅಡಿ ಎತ್ತರದಿಂದ ಹಾರಿ ರಸ್ತೆ ಬದಿಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಳು. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ಅಪಘಾತದ ಬಳಿಕ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಕೂಡ, ಒಂದು ಗಂಟೆ ನಂತರ ಸ್ಥಳಕ್ಕೆ ಬಂದಿದ್ದಾರೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಅಧಿಕಾರಿಗಳು ಹತ್ತಿರದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ.ಇದನ್ನೂ ಓದಿ: ಮಕ್ಕಳು ಬೇಡ, ಡಬಲ್ ಇನ್‌ಕಮ್ ಇರ್ಬೇಕು, ಲೈಫ್ ಎಂಜಾಯ್ ಮಾಡ್ಬೇಕು – ಭಾರತದಲ್ಲಿ ಹೆಚ್ಚಾಗ್ತಿದೆ ‘ಡಿಂಕ್ ಕಪಲ್ಸ್’ ಟ್ರೆಂಡ್

