ನವದೆಹಲಿ: ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರ ನೇತೃತ್ವದಲ್ಲಿ ಔಪಚಾರಿಕವಾಗಿ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಡಾ.ಜೈಶಂಕರ್ ಅವರು ರಾಜತಾಂತ್ರಿಕ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಎರಡನೇ ಅವಧಿಯಲ್ಲಿ ಅಚ್ಚರಿ ಎಂಬಂತೆ ಮೋದಿ ಅವರು ಜೈ ಶಂಕರ್ ಅವರಿಗೆ ಮಹತ್ವದ ವಿದೇಶಾಂಗ ಇಲಾಖೆಯನ್ನು ನೀಡಿದ್ದರು. ಮೇ 30ರಂದು ಕೇಂದ್ರ ಸಚಿವರೊಂದಿಗೆ ಜೈಶಂಕರ್ ಅವರೂ ಸಹ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
Advertisement
External Affairs Minister Shri @DrSJaishankar joined BJP in the presence of BJP National Working President Shri @JPNadda at BJP Parliamentary Office, New Delhi. pic.twitter.com/7BBgqnl51b
— BJP (@BJP4India) June 24, 2019
Advertisement
ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಆರು ತಿಂಗಳ ಒಳಗಡೆ ಜೈಶಂಕರ್ ಸಂಸತ್ ಸದಸ್ಯರಾಗಬೇಕಿದೆ. ಜೈಶಂಕರ್ ಅವರನ್ನು ಗುಜರಾತ್‍ನಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಔಪಚಾರಿಕವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.