ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ (Sandeshkhali) ಕೇಂದ್ರೀಯ ತನಿಖಾ ದಳ (CBI) ನಡೆಸಿದ ಮಹತ್ವದ ದಾಳಿಯಲ್ಲಿ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಹಾಗೂ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಅಮಾನತುಗೊಂಡ ಟಿಎಂಸಿ ನಾಯಕ ಶೇಖ್ ಷಹಜಹಾನ್ (Sheikh Shahjahan) ಮತ್ತವರ ಸಹಚರರ ವಿರುದ್ಧ ಸುಲಿಗೆ, ಭೂಹಗರಣ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳ ತನಿಖೆಯನ್ನು ಸಿಬಿಐಗೆ ವಹಿಸಿದ ನಂತರ ಈ ದಾಳಿ ನಡೆದಿದೆ. ಇದರೊಂದಿಗೆ ಕಳೆದ ಜನವರಿ 5 ರಂದು ಜಾರಿ ನಿರ್ದೇಶನಾಲಯದ (ED) ತಂಡದ ಮೇಲೆ ದಾಳಿ ನಡೆಸಿದವರಿಗೆ ಸಂಬಂಧಿಸಿದ ಅಡಗುತಾಣಗಳ ಮೇಲೂ ಸಿಬಿಐ ತಂಡ ದಾಳಿ ನಡೆಸಿದೆ.
Advertisement
Advertisement
ಸಿಬಿಐ ದಾಳಿ ವೇಳೆ ವಿದೇಶಿ ನಿರ್ಮಿತವಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು (Foreign Made Guns) ಹಾಗೂ ಅಪಾರ ಪ್ರಮಾಣದ ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನೀವು ಕಣ್ಣು ಮುಚ್ಚುವುದರಿಂದ ಜಗತ್ತು ಕತ್ತಲೆಯಾಗುವುದಿಲ್ಲ: ಮಮತಾ ಸರ್ಕಾರಕ್ಕೆ ಹೈಕೋರ್ಟ್ ಚಾಟಿ
Advertisement
ಸಂತ್ರಸ್ತರಿಗಾಗಿ ಸಹಾಯವಾಣಿ:
ಈಗಾಗಲೇ ಶೇಖ್ ಷಹಜಹಾನ್ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಸಂದೇಶ್‌ಖಾಲಿಯಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಹಾಗೂ ಭೂಮಿದಾರರಿಗಾಗಿ ಪ್ರತ್ಯೇಕ ಸಹಾಯವಾಣಿ ಮತ್ತು ಇಮೇಲ್ ವಿಳಾಸ ತೆರೆದಿದೆ. ಸಂತ್ರಸ್ತರು ತಮಗಾದ ಅನ್ಯಾಯ ಹೇಳಿಕೊಳ್ಳಬಹುದು, ಅವರ ಮಾಹಿತಿಗಳನ್ನು ಗೌಪ್ತವಾಗಿ ಇಡಲಾಗುತ್ತದೆ ಎಂದು ಸಿಬಿಐ ಹೇಳಿದೆ. ಈ ಬೆನ್ನಲ್ಲೇ ಒಂದೇ ದಿನ ಸುಮಾರು 50 ದೂರುಗಳು ಬಂದಿವೆ. ಶೇಖ್ ಷಹಜಹಾನ್ ಅವರಿಂದ ಭೂಕಬಳಿಕೆ ಸಂಬಂಧ ಹೆಚ್ಚಿನ ದೂರುಗಳು ಹೇಳಿಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನೋಟಾಗಿಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ನಿಷೇಧಿಸಿ, ಮರು ಚುನಾವಣೆಗೆ ನಿರ್ದೇಶನ ಕೋರಿ ಅರ್ಜಿ
Advertisement
ಷೇಕ್ ಷಹಜಹಾನ್ ಸಿಕ್ಕಿಬಿದ್ದದ್ದು ಹೇಗೆ?
ಜ.5 ರಂದು ಪಡಿತರ ಹಗರಣ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಂದೇಶ್‍ಖಾಲಿಯಲ್ಲಿರುವ ಶೇಖ್ ಷಹಜಹಾನ್‍ನ ಮನೆಗೆ ಇಡಿ ಅಧಿಕಾರಿಗಳು ತೆರಳಿದ್ದರು. ಈ ವೇಳೆ ಜನರ ಗುಂಪು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿತ್ತು. ಇದಾದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಬಳಿಕ ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದ ಮೇಲೆ, ತಲೆಮರೆಸಿಕೊಂಡ 55 ದಿನಗಳ ಬಳಿಕ ಫೆ.29 ರಂದು ಆತನನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: 2nd Phase Voting: ಹೇಮ ಮಾಲಿನಿಗಿಂತಲೂ ಸ್ಟಾರ್ ಚಂದ್ರು ಅತ್ಯಂತ ಶ್ರೀಮಂತ ಅಭ್ಯರ್ಥಿ!