ನವದೆಹಲಿ: ದೇಶದ ರಾಜಧಾನಿಯಲ್ಲಿ ಕೆಲವೇ ದಿನಗಳಲ್ಲಿ ಬ್ರ್ಯಾಂಡೆಡ್ ಮತ್ತು ವಿದೇಶಿ ಲಿಕ್ಕರ್ ಬೆಲೆಯಲ್ಲಿ ಇಳಿಕೆಯಾಗಲಿದೆ. ಅಂದಾಜು 1 ಸಾವಿರ ರೂ. ಬೆಲೆ ಇಳಿಕೆಯಾಗಲಿದೆ ಎಂದು ವರದಿಯಾಗಿದೆ.
ಈಗಾಗಲೇ Chivas Regal, Ballantine Finest ಮತ್ತು Absolut Vodka ತನ್ನ ಬೆಲೆ ಇಳಿಕೆಯನ್ನು ಖಚಿತಪಡಿಸಿವೆ. ಮುಂದಿನ ದಿನಗಳಲ್ಲಿ ಇನ್ನುಳಿದ ಕಂಪನಿಗಳು ಬೆಲೆಯನ್ನು ಇಳಿಸುವ ಸೂಚನೆಗಳಿವೆ. ಹೊಸ ಬೆಲೆಯ ಉತ್ಪನ್ನಗಳು 3-4 ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ದೆಹಲಿಯ ಹೊಸ ಅಬಕಾರಿ ನಿಯಮ ಹಿನ್ನೆಲೆಯಲ್ಲಿ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ಕಡಿತಗೊಳಿಸಲು ನಿರ್ಧರಿಸಿವೆ. ದೆಹಲಿ ಹೊಸ ಅಬಕಾರಿ ನಿಯಮ ಆಗಸ್ಟ್ 16ರಿಂದ ಜಾರಿಯಾಗಿದೆ. ಹೊಸ ನಿಯಮದ ಹಿನ್ನೆಲೆಯಲ್ಲಿ ಲಿಕ್ಕರ್ ಬೆಲೆಯಲ್ಲಿ ಇಳಿಕೆಯಾಗಿದೆ.
ಎಷ್ಟು ವ್ಯತ್ಯಾಸ?
ಬೇಸ್ ರೇಟ್ ಹೆಚ್ಚಳದಿಂದಾಗಿ ದೆಹಲಿಯಲ್ಲಿ ಮದ್ಯದ ಬೆಲೆ ಏರಿಕೆ ಕಂಡಿತ್ತು. 750 ಮಿಲೀ ಬ್ಲ್ಯಾಕ್ ಲೇಬಲ್ ಗುರುಗ್ರಾಮದಲ್ಲಿ 2,300 ರೂ.ಗೆ ದೊರೆತರೆ ದೆಹಲಿಯಲ್ಲಿ 3,900 ರೂ.ಗೆ ಸಿಗುತ್ತಿತ್ತು. ಇದೇ ರೀತಿ ಚಿವಾಸ್ ರೆಗಲ್ ದೆಹಲಿಯಲ್ಲಿ 1,400 ರೂ.ಗೆ ಏರಿಕೆ ಕಂಡಿತ್ತು.
ಚಿವಾಸ್ ರೆಗಲ್ (750 ಮಿಲಿ) 1,800 ರೂ. ನಿಂದ 1,400 ರೂ. ಆಗಲಿದೆ. ಬ್ಯಾಲೆಂನಟೈನ್ ಫೈನೆಸ್ಟ್ 1,800 ರೂ. ನಿಂದ 1,350 ರೂ ಮತ್ತು ಅಬಸ್ಲೂಟ್ ವೊಡ್ಕಾ 3,850 ರೂ. ನಿಂದ 2,800 ರೂ.ಗೆ ಇಳಿಕೆಯಾಗಲಿದೆ.
ಬೆಲೆ ಏರಿಕೆಯಾಗಿದ್ದೇಕೆ?
ಈ ಮೊದಲು ಸ್ವದೇಶಿ ಮತ್ತು ವಿದೇಶಿ ಬ್ರ್ಯಾಂಡೆಡ್ ಲಿಕ್ಕರ್ ಗಳ ಬೇಸ್ ರೇಟ್ ಹೆಚ್ಚಿರುತ್ತಿತ್ತು. ಬೇಸ್ ರೇಟ್ ನೊಂದಿಗೆ ಟ್ಯಾಕ್ಸ್ ಸೇರಿ ಬೆಲೆ ಏರಿಕೆ ಆಗಿತ್ತು. ಹೀಗಾಗಿ ಬ್ರ್ಯಾಂಡೆಡ್ ಲಿಕ್ಕರ್ ಗಳು ತಮ್ಮ ಬೇಸ್ ರೇಟ್ ಕಡಿತಗೊಳಿಸಿಕೊಂಡಿವೆ. ದೆಹಲಿಯಲ್ಲಿ ಮಾರಾಟ ಮಾಡುವ ಎಲ್ಲ ಮದ್ಯದ ಕಂಪನಿಗಳು ತಮ್ಮ ಹೆಸರನ್ನು ಅಬಕಾರಿ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಬೇಸ್ ರೇಟ್ ಇಳಿಕೆಯಾಗಿದ್ದರಿಂದ ಇತರೆ ರಾಜ್ಯಗಳಲ್ಲಿ ದೊರೆಯುವ ಬೆಲೆಯಲ್ಲಿಯೇ ದೆಹಲಿಯಲ್ಲಿ ದೊರೆಯಲಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.