– ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ಬಯಲು
ಬೆಂಗಳೂರು: ಲೋಕಲ್ ಅಂಗಡಿಯಲ್ಲಿ ಫಾರಿನ್ ಕಿಕ್. ನಿಮ್ಮನೆ ಹುಡ್ಗರನ್ನು ನಶೆಯ ಲೋಕದಲ್ಲಿ ಬೀಳಿಸೋಕೆ ರೆಡಿ ಇದ್ದಾರೆ ಕಿರಾತಕರು. ಬೆಂಗಳೂರಿನಲ್ಲಿ ಫಾರಿನ್ ಕಿಕ್ ಮಜಾ ತೋರಿಸಿ ಅಮಲಿನ ಲೋಕಕ್ಕೆ ಬೀಳಿಸಿ ಖೆಡ್ಡಾ ತೋಡುವ ದಿ ಮೋಸ್ಟ್ ಡೇಂಜರಸ್ ಗ್ಯಾಂಗ್ ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಿಮ್ಮನೆ ಮಕ್ಕಳಿಗೆ ಲೋಕಲ್ ಸಿಗರೇಟ್ ಮಾತ್ರವಲ್ಲ ಕಿಕ್ ಕೊಡುವ, ನಶೆಯ ಲೋಕದಲ್ಲಿ ತೇಲಿಸುವ ಒಂದು ಬಾರಿ ಧಮ್ ಹೊಡೆದ್ರೆ ರುಚಿ ಹತ್ತಿಸಿಕೊಳ್ಳುವ ಅಮಲಿನ ಫಾರಿನ್ ಬ್ರಾಂಡ್ ಸಿಗರೇಟ್ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಬಿಕರಿಯಾಗ್ತಿದೆ. ಅಚ್ಚರಿಯಂದ್ರೆ ಇವರ್ಯಾರು ಹೊರಗಡೆ ಮಾರಾಟ ಮಾಡಲ್ಲ. ಯಾಕೆಂದ್ರೆ ಇದು ನಿಷೇಧಿತ ಸಿಗರೇಟು ಆಗಿದ್ದು, ಹೀಗಾಗಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಹೊರಗಡೆ ವೀಳ್ಯದೆಲೆ, ಅಡಿಕೆ ಇಟ್ಕೊಂಡು ಕುಟ್ಟುವ ಪಾನ್ ಬೀಡಾ ಅಂಗಡಿಯವನು ಇಲ್ಲಿ ಕೋಟಿ ಗಟ್ಲೆ ಲೆಕ್ಕದಲ್ಲಿ ಇಂಟರ್ ನ್ಯಾಷನಲ್ ಬ್ರಾಂಡ್ ನ ಫಾರಿನ್ ಕಿಕ್ ಸಿಗರೇಟಿನ ಡೀಲ್‍ದಾರರಾಗಿದ್ದಾರೆ. ಮೆಜೆಸ್ಟಿಕ್ ಗಾಂಧಿನಗರದ ಗಲ್ಲಿಲಿ ಒಂದ್ ರೌಂಡ್ ಹೊಡ್ದಾಗ ಈ ಕಿಕ್ ಕಿರಾತಕರು ಪಬ್ಲಿಕ್ ಟಿವಿಯ ಕ್ಯಾಮೆರಾಕ್ಕೆ ಸೆರೆ ಸಿಕ್ಕಿದ್ದಾರೆ.
Advertisement
Advertisement
ಪ್ರತಿನಿಧಿ: ಮಾಂಡ್ ಸಿಗರೇಟ್ ಇದ್ಯಾ
ಪಾನ್ ಶಾಪ್‍ನವನು: ಎಷ್ಟ್ ಬೇಕು
ಪ್ರತಿನಿಧಿ: ಒಂದು ಪ್ಯಾಕ್
ಪಾನ್ ಶಾಪ್‍ನವನು: ಫುಲ್ ಬಾಕ್ಸ್ ಆದ್ರೇ ತಂದುಕೊಡ್ತೀನಿ
ಪ್ರತಿನಿಧಿ: ಯಾವುದೆಲ್ಲ ಸಿಗುತ್ತೆ?
ಪಾನ್ ಶಾಪ್‍ನವನು: ನಿಮ್ಗೆ ಯಾವುದು ಬೇಕು..?
ಪ್ರತಿನಿಧಿ: ಮಾಂಡ್ ಸಿಗುತ್ತಾ?
ಪಾನ್ ಶಾಪ್‍ನವನು: ಅದು ಬಿಟ್ಟು ಬೆಂಝನ್, ಎಸ್ಸೆ ಇದೆಲ್ಲ ಸಿಗುತ್ತೆ.
ಪ್ರತಿನಿಧಿ: ತಗೊಂಡು ಹೋಗಬಹುದಾ
ಪಾನ್ ಶಾಪ್‍ನವನು: ಹಾ
ಪ್ರತಿನಿಧಿ: ಕಾಲೇಜ್ ಹತ್ರ ಮಾರಾಬಹುದಾ
Advertisement
Advertisement
ಪಾನ್ ಶಾಪ್‍ನವನು: ಅದು ನಿಮ್ಗೆ ಬಿಟ್ಟಿದ್ದು ಎಲ್ಲಿ ಮಾರಬೇಕು ಅಂತ. ನಾನು ಹೇಗೆ ಹೇಳಲಿ, ಎಲ್ಲಿ ಮಾರ್ತೀರಾ..?
ಪ್ರತಿನಿಧಿ: ನಾಗರಬಾವಿಯಲ್ಲಿ ಅಂಗಡಿ ಇಡೋಣ ಅಂತ
ಪಾನ್ ಶಾಪ್‍ನವನು: ಹಾ ಮಾರಬಹುದು
ಪ್ರತಿನಿಧಿ: ಇಂಪೋರ್ಟ್ ಮಾಡೋ ಸಿಗರೇಟ್ ಎಲ್ಲಾ ಮಾರೋದು ಅಂತ ವಿದ್ಯಾರ್ಥಿಗಳು ಹೆಚ್ಚು ಅದನ್ನು ಕೇಳ್ತಾರಲ್ಲ, ಎಷ್ಟು ಟೈಂ ಬೇಕು? ನೀವೇ ಕೊಡ್ತೀರಾ?
ಪಾನ್ ಶಾಪ್‍ನವನು: ಕೊಡೋಣ
ಪ್ರತಿನಿಧಿ: ನಿಮ್ದೇನಾ ಗೋಡೌನ್? ಹೋಲ್ ಸೇಲ್ ಕೊಡ್ತೀರಾ
ಪಾನ್ ಶಾಪ್‍ನವನು: ಹೋಲ್ ಸೇಲ್
ಪ್ರತಿನಿಧಿ: ಯಾವುದ್ದೆಲ್ಲ ಕೊಡ್ತಿಲ್ಲ
ಪಾನ್ ಶಾಪ್‍ನವನು: ಬೆಂಝನ್, ಡೆವಿಲ್ ಡಾನ್
ಪ್ರತಿನಿಧಿ: ಕಿಕ್ ಬರೋದು ಯಾವುದಿದೆ?
ಪಾನ್ ಶಾಪ್‍ನವನು: ಕಿಂಗ್ ಎಡ್ವರ್ಡ್ ಇದೆ
ಪ್ರತಿನಿಧಿ: ನಿಮ್ಮ ನಂಬರ್ ಕೊಡಿ, ಅದು ಕಿಕ್ ಬರುತ್ತೆ.. ಅಲ್ವಾ
ಪಾನ್ ಶಾಪ್ ನವನು: ಹಾ ಬರುತ್ತೆ.
ಪ್ರತಿನಿಧಿ: ವಿದ್ಯಾರ್ಥಿಗಳು ಕೇಳ್ತಾರಲ್ಲ ಕಿಕ್ ಬರೊದು ಅಂದ್ರೆ ಖುಷಿಯಾಗ್ತಾರೆ, ಮಿಕ್ಸ್ ಮಾಡಿದ್ರೆ ಕಿಕ್ ಬರೋ ಸಿಗರೇಟ್ ಇರುತ್ತಲ್ಲ.
ಪಾನ್ ಶಾಪ್‍ನವನು: ಕಿಕ್ ಬರೋಕೆ ಮಿಕ್ಸ್ ಮಾಡಿ ಮಾರಬೇಕಾಗಿಲ್ಲ.. ಕೆಲವು ಸಿಗರೇಟ್‍ನ್ನೇ ಮಾರಿದ್ರೆ ಸಾಕು, ಮಿಕ್ಸ್ ಬೇಕಾಗಿಲ್ಲ.
ಗಾಂಜಾದ ಕಿಕ್‍ಗಿಂತ ಡಬಲ್ ಕಿಕ್ ಇರುವ ಈ ಸಿಗರೇಟುಗಳನ್ನು ಕಾಸಿನ ಆಸೆಗೆ ಬಿದ್ದು ಸೇಲ್ ಮಾಡುತ್ತಾರೆ. ಇನ್ನೊಂದು ಟ್ರಿಕ್ಸ್ ಇದೆ. ಕೆಲವು ವ್ಯಾಪಾರಿಗಳು ಸುಖಾಸುಮ್ಮನೆ ಬಂದವರಿಗೆಲ್ಲ ಫಾರಿನ್ ಬ್ಯಾನ್ಡ್ ಸಿಗರೇಟ್ ಮಾರಲ್ಲ. ರೆಗ್ಯೂಲರ್ ಕಸ್ಟಮರ್ ಬಂದಾಗ ಥಟ್ ಅಂತ ಎತ್ತಿಕೊಡ್ತಾರೆ. ಅದನ್ನೇ ಒಬ್ಬ ಬೀಡಂಗಡಿಯವನು ಬಾಯಿ ಬಿಟ್ಟಿದ್ದಾನೆ.
ಪ್ರತಿನಿಧಿ: ಫಾರಿನ್ ಸಿಗರೇಟ್ ಇದ್ಯಯಣ್ಣ
ಬೀಡ ಅಂಗಡಿಯವನು: ಇಲ್ಲಣ್ಣ ಈಗ ಮಾರಲ್ಲ
ಪ್ರತಿನಿಧಿ: ಹಾ ಹೌದಾ
ಬೀಡ ಅಂಗಡಿಯವನು: ಅಯ್ಯೋ ರೇಡ್ ಮಾಡಿದ್ದಾರೆ. ನಾವು ರೆಗ್ಯೂಲರ್ ಕಸ್ಟಮರ್‍ಗೆ ಕೊಡ್ತೀವಿ ಅಷ್ಟೇ.
ಪ್ರತಿನಿಧಿ: ಈಗ ಕೊಡಲ್ವಾ
ಬೀಡ ಅಂಗಡಿಯವನು: ಪರಿಚಯದ ರೆಗ್ಯೂಲರ್ ಕಸ್ಟಮರ್‍ಗೆ ಸೇಲ್ ಮಾಡ್ತೀವಿ ಅಷ್ಟೇ. ನಿಮ್ಗೆ ಕೊಡಲ್ಲ
ಕಿಕ್‍ನ ರುಚಿ ತೋರಿಸಿ ಅವರನ್ನು ಧಮ್ ಲೋಕದೊಳಗೆ ಕರೆದುಕೊಂಡು ಹೋಗಿ ಮತ್ತೆ ಅವರಿಗಷ್ಟೇ ಸಪ್ಲೈ ಮಾಡ್ತಾರಂತೆ. ಇದೇ ವೇಳೆ ಮೇನ್ ಡೀಲರ್ ಅವ್ನ ಕುಟುಂಬಸ್ಥನೊಬ್ಬ ಎಂಟ್ರಿ ಕೊಟ್ಟ. ಆಗ ಆತ ಸತ್ಯ ಬಾಯಿಬಿಟ್ಟಿದ್ದಾನೆ.
ಪಾನ್ ಶಾಪ್‍ನವನು: ನಿಮ್ಗೆ ಸಿಗರೇಟ್ ಬೇಕಾ..?
ಪ್ರತಿನಿಧಿ: ಗೂಗಲ್‍ನಲ್ಲಿ ಹುಡ್ಕಿ ನಾನು ಹೇಳ್ತೀನಿ
ಪಾನ್ ಶಾಪ್‍ನವನು: ಎಸ್ಸೆಲೇಟ್, ಮರ್ಲ್‍ಬೋರ್, ವೈಟ್ ಟೈಗರ್, ಮಾಂಡ್
ಪ್ರತಿನಿಧಿ: ಅದಲ್ಲಣ್ಣ ಕಾಲೇಜ್ ಹುಡುಗ್ರು ಕೇಳೋದು
ಪಾನ್ ಶಾಪ್‍ನವನು: ಏಳೆಂಟು ಐಟಂ ರೆಗ್ಯೂಲರ್ ಕೇಳ್ತಾರೆ. ಎಸ್ಸೆ ಗೋಲ್ಡ್, ಎಸ್ಸೆಲೈಟ್, ಬೆನ್ಶನ್ ರೆಗ್ಯೂಲರ್, ಡೆವಿಡ್, ಸಿಗಾರ್
ಪ್ರತಿನಿಧಿ: ಸಿಗಾರ್ ಸಿಗುತ್ತಾ
ಪಾನ್ ಶಾಪ್‍ನವನು: ಸಿಗಾರ್ ಸಿಗುತ್ತೆ, ತಗೊಂಡು ಹೋಗಿ ಎಲ್ಲಾ ಹೊರಗಡೆ ಅಷ್ಟೇ. 150 ಸಿಂಗಲ್, ಎಂಟುಸಾವಿರ ಫುಲ್. ಸ್ವಲ್ಪ ಕಡಿಮೆ ಮಾಡೋಣ
ಪ್ರತಿನಿಧಿ: ಸಿಗರೇಟ್ ಡಿಸ್ ಪ್ಲೇ ಇಲ್ವಾ
ಪಾನ್ ಶಾಪ್‍ನವನು: ಹೇ ಅದೆಲ್ಲ ಇಡೋಕೆ ಆಗಲ್ಲ, ಇಡೋ ಹಾಗಿಲ್ಲ.
ಪ್ರತಿನಿಧಿ: ತೋರಿಸಬಹುದಾ..
ಪಾನ್ ಶಾಪ್‍ನವನು: ಅದನ್ನು ತೋರಿಸೋಕೆ ಆಗಲ್ಲ ಗೋಡೌನ್ ಇರುತ್ತೆ, ದುಡ್ಡು ಕೊಟ್ಟರಷ್ಟೇ ನಿಮ್ಗೆ ಮಾಲ್
ಪ್ರತಿನಿಧಿ: ಎಲ್ಲಿರುತ್ತೆ
ಪಾನ್ ಶಾಪ್‍ನವನು: ಚಿಕ್ಕಪೇಟೆನಲ್ಲಿ. ಅವರೆದೆಲ್ಲ ದೊಡ್ಡ ದೊಡ್ಡ ಬ್ಯುಸಿನೆಸ್ ನೀವು ಹೋದ್ರೆ ಕೊಡಲ್ಲ, ನಾನೇ ತಂದು ಕೊಡ್ತೇನೆ
ಪ್ರತಿನಿಧಿ: ಈಗ ಇಷ್ಟು ಐಟಂ ಹೇಳಿದ್ವಲ್ಲ ಅದಕ್ಕೆ ಎಷ್ಟಾಗುತ್ತೆ?
ಪಾನ್ ಶಾಪ್ ನವನು: ಬಿಲ್ ಟೈಂನಲ್ಲಿ ಹೇಳ್ತೀವಿ. ಬಂಡಲ್‍ಗೆ ಒಂದೊಂದು ರೇಟ್ ಇರುತ್ತೆ. ಎಂಟು ಸಾವಿರ ಇರುತ್ತೆ. ಹತ್ತು ಆಗುತ್ತೆ.
ಪ್ರತಿನಿಧಿ: ಕಿಕ್ ಬರುತ್ತಾ..?
ಪಾನ್ ಶಾಪ್ ನವನು: ಹಂಡ್ರೆಡ್ ಪರ್ಸೆಂಟ್ ಕಿಕ್ ಬರುತ್ತೆ. ಒಂದ್ಸಲ ಕಸ್ಟಮರ್ ಇದನ್ನು ಶುರುಮಾಡಿದ್ರೆ ಮತ್ತೆ ಬಿಡಲ್ಲ.
ನಿಜ ಒಂದ್ಸಲ ಸೇದಿದ್ರೇ ಮತ್ತೆ ಮತ್ತೆ ಸೇದುವ ಚಟ ಹತ್ತಿಸೋ ಡೆಡ್ಲಿ ಸಿಗರೇಟು ಇದು. ನಶೆಯ ಅಫೀಮು ಇದ್ದಂತೆ. ಅದೇ ಕಾರಣಕ್ಕೆ ಕೆಲ ಫಾರಿನ್ ಸಿಗರೇಟ್‍ನ್ನು ಬ್ಯಾನ್ ಮಾಡಿದ್ದಾರೆ. ಜೊತೆಗೆ ಮಲೆಶಿಯಾ ಬಾಂಗ್ಲಾ ಸೌದಿ ಸೇರಿದಂತೆ ನಾನಾ ದೇಶದಿಂದ ಕಿಕ್ ಹತ್ತಿಸೋ ಸಿಗರೇಟು ಟ್ಯಾಕ್ಸ್ ಕಟ್ಟದೇ ಭಾರತಕ್ಕೆ ನುಸುಳುತ್ತೆ. ಅದರಲ್ಲೂ ಮಹಾನಗರಿ ಬೆಂಗಳೂರು ಇವರ ಟಾರ್ಗೆಟ್. ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ಬ್ಯುಸಿನೆಸ್‍ಮ್ಯಾನ್‍ಗಳು ಎಲ್ಲರಿಗೂ ಈ ಖಯಾಲಿ ಹುಟ್ಟಿಸಿಬಿಡ್ತಾರೆ.
ಒಟ್ಟಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು, ಆಹಾರ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಂಡು ಕಿಕ್ ಕಿರಾತಕರಿಗೆ ಪಾಠ ಕಲಿಸಬೇಕಾಗಿದೆ.