ನವದೆಹಲಿ: ಈ ವರ್ಷ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಯಾವುದೇ ವಿದೇಶಿ ರಾಷ್ಟ್ರ ಅಥವಾ ಸರ್ಕಾರದ ಮುಖ್ಯಸ್ಥರು ಭಾಗವಹಿಸುವುದಿಲ್ಲ ಎಂದು ವರದಿಗಳು ತಿಳಿಸಿವೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ವಿದೇಶಿ ನಾಯಕರನ್ನು ಗಣರಾಜ್ಯೋತ್ಸವಕ್ಕೆ ಕರೆಸಿಕೊಳ್ಳುತ್ತಿಲ್ಲ. ಕಳೆದ ವರ್ಷವೂ ಕೋವಿಡ್ ಭೀತಿಗೆ ಯಾವುದೇ ವಿದೇಶಿ ಅತಿಥಿಗಳಿಗೆ ಆಹ್ವಾನ ನೀಡಿರಲಿಲ್ಲ. ಇದೀಗ ಸತತ ಎರಡನೇ ಬಾರಿ ವಿದೇಶಿ ಅತಿಥಿಗಳ ಆಹ್ವಾನಕ್ಕೆ ತಡೆಯಾಗಿದೆ. ಇದನ್ನೂ ಓದಿ: ಈ ಬಾರಿ ಗಣರಾಜ್ಯೋತ್ಸವ ಹೇಗಿರುತ್ತೆ – ಇಲ್ಲಿದೆ ವಿವರ
Advertisement
ಗಣರಾಜ್ಯೋತ್ಸವದ ಒಂದು ದಿನದ ಬಳಿಕ ಜನವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಭಾರತ ಹಾಗೂ ಮಧ್ಯ ಏಷ್ಯಾದ ಶೃಂಗಸಭೆಯನ್ನು ಏರ್ಪಡಿಸಲಿದ್ದಾರೆ. ಆನ್‌ಲೈನ್ ಮುಖಾಂತರ ನಡೆಯಲಿರುವ ಶೃಂಗಸಭೆಯಲ್ಲಿ ಕಜಕಿಸ್ತಾನ್, ಕಿರ್ಗಿಜ್ ರಿಪಬ್ಲಿಕ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಹಾಗೂ ಉಜ್ಬೇಕಿಸ್ತಾನ್ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಉಗ್ರರ ಸಂಚು- ಮೋದಿ, ವಿದೇಶಿ ಅತಿಥಿಗಳ ಜೀವಕ್ಕೆ ಅಪಾಯ