– ಭಗವಂತ ಕಾಂಗ್ರೆಸ್‌ನವರಿಗೆ ಸದ್ಬುದ್ಧಿ ಕೊಡಲಿ
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ಬಗ್ಗೆ ನಡೆಯುತ್ತಿರುವ ಅಪಪ್ರಚಾರಕ್ಕೆ ಇತಿಶ್ರೀ ಹಾಡುವುದಕ್ಕೆ ನಾವು ಯಾತ್ರೆ ಮಾಡುತ್ತಿದ್ದೇವೆ. ಕ್ಷೇತ್ರದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್ ಆಗುತ್ತಿದೆ. ಇದೆಲ್ಲ ಹೊರಗೆ ಬರಬೇಕಾದ್ರೆ ಪ್ರಕರಣವನ್ನ ರಾಜ್ಯ ಸರ್ಕಾರ ಎನ್‍ಐಎ (NIA) ಅಥವಾ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ಆಗ್ರಹಿಸಿದರು.
ಧರ್ಮಸ್ಥಳದ ಚಲೋ ಯಾತ್ರೆಗೆ ತೆರಳಿರುವ ಬಿಜೆಪಿ ನಾಯಕರು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿವೈವಿ, ದರ್ಮಸ್ಥಳ ಪ್ರಕರಣದ ಹಿಂದೆ ಇರುವ ದುಷ್ಟ ಶಕ್ತಿಗಳು ಬಹಿರಂಗ ಆಗಬೇಕು. ಹಿಂದೂ ಸಮಾಜವನ್ನ ರಕ್ಷಣೆ ಮಾಡುವಂತಹ ಕೆಲಸ ಆಗಬೇಕು. ಈಗ ಎಸ್‍ಐಟಿಯವರು (SIT) ಬಂಧಿಸಿರುವುದು ಸಣ್ಣ ಪುಟ್ಟವರು. ಇದರ ಹಿಂದೆ ಬಲಾಢ್ಯರು ಇದ್ದಾರೆ. ಅವರನ್ನ ಹೊರೆಗೆ ತೆಗೆಯುವಂತಹ ಕೆಲಸ ಆಗಬೇಕು ಇದಕ್ಕೆ ಎನ್‌ಐಎ ತನಿಖೆ ಅಗತ್ಯ ಎಂದರು. ಇದನ್ನೂ ಓದಿ: ಮಂಜುನಾಥ-ಅಣ್ಣಪ್ಪ ಸ್ವಾಮಿಯಿಂದ ದುಷ್ಟರ ಸಂಹಾರ ಗ್ಯಾರಂಟಿ: ಗುಡುಗಿದ ನಿಖಿಲ್ ಕುಮಾರಸ್ವಾಮಿ
ಕಾಂಗ್ರೆಸ್‌ನಿಂದ ಧರ್ಮಸ್ಥಳ ಚಲೋ ವಿಚಾರಕ್ಕೆ, ಆಡಳಿತ ಪಕ್ಷದವರು ಕೂಡ ಯಾತ್ರೆ, ಸಮಾವೇಶ ಮಾಡಿ ಮಂಜುನಾಥನ ದರ್ಶನ ಪಡೆಯಲಿ. ಆ ಸದ್ಬುದ್ಧಿಯನ್ನು ಭಗವಂತ ಅವರಿಗೆ ಕೊಡಲಿ ಎಂದಿದ್ದಾರೆ.
ಈ ವೇಳೆ ಸಂಸದ ಬ್ರಿಜೇಶ್ ಚೌಟ, ಶಾಸಕ ಸುನೀಲ್ ಕುಮಾರ್, ಹರೀಶ್ ಪೂಂಜಾ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಅಧಿಕಾರಿ ಹೆಸರಲ್ಲಿ ಸುಳ್ಳು ಮಾಹಿತಿ ಆರೋಪ – ಮಟ್ಟಣ್ಣನವರ್, ತಿಮರೋಡಿ ಸೇರಿ ಮೂವರ ವಿರುದ್ಧ FIR