Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿದೇಶಿ ವಧುಗಳನ್ನ ಕದ್ದು ಅವಿವಾಹಿತರಿಗೆ ದುಬಾರಿ ಬೆಲೆ ಮಾರಾಟ – ಚೀನಾದ ರಹಸ್ಯ ಸ್ಫೋಟ, ಏನಿದು ಹಗರಣ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ವಿದೇಶಿ ವಧುಗಳನ್ನ ಕದ್ದು ಅವಿವಾಹಿತರಿಗೆ ದುಬಾರಿ ಬೆಲೆ ಮಾರಾಟ – ಚೀನಾದ ರಹಸ್ಯ ಸ್ಫೋಟ, ಏನಿದು ಹಗರಣ?

Latest

ವಿದೇಶಿ ವಧುಗಳನ್ನ ಕದ್ದು ಅವಿವಾಹಿತರಿಗೆ ದುಬಾರಿ ಬೆಲೆ ಮಾರಾಟ – ಚೀನಾದ ರಹಸ್ಯ ಸ್ಫೋಟ, ಏನಿದು ಹಗರಣ?

Public TV
Last updated: June 3, 2025 1:31 am
Public TV
Share
4 Min Read
China 01
SHARE

ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ಚೀನಾದ ಒಂದು ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಮದುವೆಗಾಗಿ ಯುವತಿಯೊಬ್ಬಳನ್ನ ಕಳ್ಳಸಾಗಣೆ ಮಾಡುವ ಚಿತ್ರವದು. ಲಿಟಲ್‌ ಪ್ಲಮ್‌ ಫ್ಲವರ್‌ ಹೆಸರಿನ ಹುಡುಗಿಯೊಬ್ಬಳನ್ನ ಅಪಹರಿಸುತ್ತಾರೆ. ಬಳಿಕ ಆಕೆಯನ್ನ ತೆರೆದ ಕೋಣೆಯೊಂದರಲ್ಲಿ ವಸ್ತುವಿನಂತೆ ಪ್ರದರ್ಶನಕ್ಕಿಡಲಾಗುತ್ತದೆ. ಆಕೆಯನ್ನು ನೋಡಿ ಇಷ್ಟಪಟ್ಟವರು ಮದುವೆಗಾಗಿ ಖರೀದಿಸಬಹುದುದಾಗಿತ್ತು. ಈ ಸಿನಿಮಾ ಕಥೆ ಈಗ ಚೀನಾದಲ್ಲಿ ನೈಜವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಹೌದು. ಭಾರತದ ನಂತರ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಚೀನಾದಲ್ಲಿ ಮದುವೆಯ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬರುತ್ತಿದೆ. ಇದು ಜನನ ದರ ಕುಸಿತಕ್ಕೆ ಕಾರಣವಾಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಚೀನಾದಲ್ಲಿ 3 ಕೋಟಿಗೂ ಅಧಿಕ ಯುವಕರು ಅವಿವಾಹಿತರಾಗಿದ್ದಾರೆ, ಹೀಗೆ ಮುಂದುವರಿದ್ರೆ ಇದರ ಜನಸಂಖ್ಯೆ 2026ರ ವೇಳೆಗೆ 5 ಕೋಟಿಗೆ ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ಮದುವೆ ಬಗ್ಗೆ ಆಸಕ್ತಿ ಹೆಚ್ಚಿಸಲು ಮತ್ತು ಜನಸಂಖ್ಯೆ ವೃದ್ಧಿಸಲು ಚೀನಾ ವಿಶೇಷ ಯೋಜನೆಗಳನ್ನು ತಂದಿದೆ. ಕಾಲೇಜುಗಳಲ್ಲೇ ಪ್ರೀತಿ, ಪ್ರೇಮದ ಬಗ್ಗೆ ಆಸಕ್ತಿ ಹೆಚ್ಚಿಸಲು ಹಾಗೂ ಮದುವೆ ಬಗ್ಗೆ ವಿಶೇಷ ಕೋರ್ಟ್‌ಗಳನ್ನೂ ಪರಿಚಯಿಸಿದೆ. ಇದರ ಹೊರತಾಗಿಯೂ ಹುಡುಗಿ ಸಿಗದವರು ಕಳ್ಳಸಾಗಣೆ ಮಾರ್ಗವಾಗಿ ತಂದ ಹೆಣ್ಣುಮಕ್ಕಳನ್ನು ಖರೀದಿಸಲು ಮುಂದಾಗಿದ್ದಾರೆ. ಇದರ ಬಗ್ಗೆ ಇನ್ನಷ್ಟು ರೋಚಕ ಸಂಗತಿಗಳನ್ನು ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ…

CHINA MARRIAGE

ಯುವತಿಯರ ಕಳ್ಳಸಾಗಣೆ ಬೆಳಕಿಗೆ ಬಂದಿದ್ದು ಹೇಗೆ?
ʻಲಿಟಲ್‌ ಪ್ಲಮ್‌ ಫ್ಲವರ್‌ʼನ ನೈಜ ಕಥೆ ಬೆಳಕಿಗೆ ಬಂದಿದ್ದು, 90ರ ದಶಕದಲ್ಲಿ. ಯಾಂಗ್‌ ಹೆಸರಿನ ಯುವತಿ ಚೀನಾದ ಯುನ್ನಾನ್‌ ಪ್ರಾಂತ್ಯದವಳು. ಆಕೆಯನ್ನ 2 ಬಾರಿ ಮದುವೆಗಾಗಿ ಖರೀಸಿ ಬೇರೆಬೇರೆಯವರಿಗೆ ಮಾರಾಟ ಮಾಡಲಾಗಿತ್ತು. ಮೂರನೇ ಬಾರಿಗೆ ಬೇರೊಬ್ಬರಿಗೆ ಮಾರಾಟ ಮಾಡಲು ಆಕೆಯನ್ನ ತೆರೆದ ಕೋಣೆಯಲ್ಲಿ ಪ್ರದರ್ಶನಕ್ಕಿಟಾಗ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಿತು. ಇದು ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಚೀನಾ ಸರ್ಕಾರ ಕಳ್ಳಸಾಗಣೆ ಮಾಡುವುದನ್ನ ಮುಚ್ಚಿಡಲು ಪ್ರಯತ್ನಿಸುತ್ತಿದೆ ಅಂತ ಅಮೇರಿಕನ್ ಮಾನವ ಹಕ್ಕುಗಳ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್ ಸಹ ಆರೋಪ ಮಾಡಿತ್ತು. ಇದಾದ ಸ್ವಲ್ಪ ದಿನಗಳಲ್ಲೇ ಶಾಂಕ್ಸಿ ಪ್ರಾಂತ್ಯದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿತು. ನಿರಾಶ್ರಿತ ಮಹಿಳೆಯೊಬ್ಬಳನ್ನ ಅಪಹರಿಸಿ ಆಕೆಯನ್ನ ಬಲವಂತವಾಗಿ ಬೇರೊಬ್ಬನೊಂದಿಗೆ ಮದುವೆ ಮಾಡಿಕೊಳ್ಳಲು ಮಾರಾಟ ಮಾಡಲಾಗಿತ್ತು. ಅಲ್ಲದೇ ಆಕೆಗೆ ಮೂರ್ನಾಲ್ಕು ಮಕ್ಕಳಾಗುವವರೆಗೂ ಆಕೆಯನ್ನ ಗೃಹಬಂಧನದಲ್ಲಿಡಲಾಗಿತ್ತು. ಇದರ ವಿಡಿಯೋ ಸಹ ಸೋಷಿಯಲ್‌ ಮೀಡಿಯಾಗಳಲ್ಲಿ ಬೆಳಕಿಗೆ ಬಂದು ವಿವಿಧ ದೇಶಗಳು ಚೀನಾದ ವಿರುದ್ಧ ಅಸಮಾಧಾನ ಹೊರಹಾಕಿದ್ದವು.

CHINA MARRIAGE 1

ಯುವತಿಯರ ಕಳ್ಳಸಾಗಣೆ ಆಗ್ತಿರೋದು ಏಕೆ?
ಚೀನಾದಲ್ಲಿ ವಧುಗಳ ಕಳ್ಳಸಾಗಣೆ ಮೊದಲಿನಿಂದಲೂ ಗಂಭೀರ ಸಮಸ್ಯೆಯಾಗಿದೆ. 2019ರಲ್ಲಿ ಚೀನಿ ಪೊಲೀಸರು ನಡೆಸಿದ್ದ ಅತಿದೊಡ್ಡ ಕಾರ್ಯಾಚರಣೆಯಲ್ಲಿ 1,100 ಮಹಿಳೆಯರನ್ನು ರಕ್ಷಿಸಿದ್ದರು. ವಿಯೆಟ್ನಾಂ, ಲಾವೋಸ್‌, ಕಾಂಬೋಡಿಯಾ ಮತ್ತು ಮ್ಯಾನ್ಮಾರ್‌ನ ಹುಡುಗಿಯರನ್ನು ಮದುವೆಗಾಗಿ ಕರೆತರಲಾಗಿತ್ತು. ಏಕೆಂದರೆ ಚೀನಾದಲ್ಲಿ 3 ಕೋಟಿಗೂ ಅಧಿಕ ಪುರುಷರು ಅವಿವಾಹಿತರಾಗಿದ್ದಾರೆ. ಅಲ್ಲಿನ ಪದವೀಧರ ಮಹಿಳೆಯರು ಆರ್ಥಿಕ ದೃಷ್ಟಿಕೋನದಿಂದ ವಿವಾಹಕ್ಕೆ ನಿರಾಸಕ್ತಿ ತೋರುತ್ತಿದ್ದಾರೆ. ಆದ್ದರಿಂದ ಪುರುಷರ ನಡುವೆ ಅಂತರ ಸರಿದೂಗಿಸಲು ವಿದೇಶಿ ವಧುಗಳನ್ನ ಕಳ್ಳಸಾಗಣೆ ಮಾಡಲಾಗುತ್ತಿದೆ.

CHINA MARRIAGE 2

ಚೀನಾದಲ್ಲಿ ಏಕೆ ಈ ಪರಿಸ್ಥಿತಿ?
ಚೀನಾ ದಶಕಗಳಿಂದ ಒಂದು ಮಗು ನೀತಿಯನ್ನು ಹೊಂದಿತ್ತು. ಜನಸಂಖ್ಯೆಯನ್ನು ನಿಯಂತ್ರಿಸಲು ಸರ್ಕಾರ ಒತ್ತಡ ಹೇರುತ್ತಲೇ ಇತ್ತು. ಆದ್ರೆ ಈ ಸಂದರ್ಭದಲ್ಲಿ ಗಂಡು ಮಕ್ಕಳನ್ನೇ ಬಯಸುತ್ತಿದ್ದ ಕುಟುಂಬಗಳು ಹೆಣ್ಣು ಮಗುವಾಗುವ ಸುಳಿವು ಸಿಕ್ಕ ತಕ್ಷಣ ಗರ್ಭಪಾತಕ್ಕೆ ಮುಂದಾಗುತ್ತಿದ್ದವು. ಇದು ಸುಮಾರು 35 ವರ್ಷಗಳ ಕಾಲ ಮುಂದುವರಿಯಿತು. ಜನಸಂಖ್ಯೆ ಗೀಳನ್ನು ಚೀನಾ ಅರಿತುಕೊಳ್ಳುವ ಹೊತ್ತಿಗೆ ಹುಡುಗ-ಹುಡುಗಿಯರ ಅನುಪಾತದಲ್ಲಿ ಅಂತರ ಏರುತ್ತಿತ್ತು. 2000ನೇ ಇಸವಿಗೆ 100 ಹುಡುಗಿಯರಿಗೆ 121 ಹುಡುಗರು ಇರುತ್ತಿದ್ದರು. ಆದರೀಗ ಚೀನಾ ಒಂದು ಮಕ್ಕಳ ನೀತಿಯನ್ನು ರದ್ದು ಮಾಡಿ ಮೂರ್ನಾಲ್ಕು ಮಕ್ಕಳು ಮಾಡಿಕೊಳ್ಳುವವರಿಗೆ ಉತ್ತೇಜನ ನೀಡುತ್ತಿದೆ. ಆದ್ರೆ ಮದುವೆ ಆಸಕ್ತಿಯಿಂದ ದೂರ ಉಳಿಯುತ್ತಿರುವ ಯುವತಿಯರು ಮದುವೆ, ಮಕ್ಕಳಿಗಿಂತ ವೃತ್ತಿ ಜೀವನವನ್ನ ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಚೀನಾದಲ್ಲಿ ಅವಿವಾಹಿತ ಪುರುಷ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2026ರ ಅಂತ್ಯದ ವೇಳೆ ಅವಿವಾಹಿತ ಪುರುಷ ಸಂಖ್ಯೆ 5 ಕೋಟಿಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಮಧ್ಯವರ್ತಿ ಏಜೆನ್ಸಿಗಳಿಂದ ಖರೀದಿಸಿ ಮಾರಾಟ
ತಮ್ಮ ದೇಶದಲ್ಲಿ ಹುಡುಗಿಯರು ಸಿಗದ ಯುವಕರು ವಿದೇಶಿ ವಧುಗಳ ಕಡೆಗೆ ಮುಖ ಮಾಡ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಮಧ್ಯವರ್ತಿ ಏಜೆನ್ಸಿಗಳು ಏಷ್ಯಾದ ಬಡ ರಾಷ್ಟ್ರಗಳನ್ನ ಗುರಿಯಾಗಿಸಿ ಅಲ್ಲಿನ ಯುವತಿಯರನ್ನ ಕಳ್ಳಸಾಗಣೆ ಮಾಡುತ್ತಿದ್ದಾರೆ. ಹೆಚ್ಚಿನ ಹಣದ ಕೆಲಸ ಕೊಡಿಸುವುದಾಗಿ ಹಣದ ಆಮಿಷ ಒಡ್ಡಿ ಚೀನಾಕ್ಕೆ ಕರೆತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಖರೀದಿ ಮಾಡಿದ ಕೆಲ ಏಜೆನ್ಸಿಗಳು ಪ್ರದರ್ಶನಕ್ಕಿಟ್ಟು ವಸ್ತುಗಳಂತೆ ಹೆಚ್ಚಿನ ಬೆಲೆಗೆ ಮಾರಾಡ ಮಾಡಿ ದುಡ್ಡು ಮಾಡಿಕೊಳ್ಳುತ್ತಿವೆ. ಜೊತೆಗೆ ಖರೀದಿ ಮದ್ವೆಯಾದವರೂ ಕೂಡ ಮತ್ತೆ ಓಡಿಹೋಗಬಹುದು ಎಂಬ ಕಾರಣಕ್ಕೆ ಮೂರ್ನಾಲ್ಕು ಮಕ್ಕಳಾಗುವವರೆಗೆ ಮಹಿಳೆಯರನ್ನ ಗೃಹಬಂಧನದಲ್ಲಿ ಇರಸುತ್ತಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.

ಯಾವ ಯಾವ ದೇಶಗಳಿಂದ ಹೆಣ್ಣುಮಕ್ಕಳು ಪೂರೈಕೆ?
ಸದ್ಯ ಚೀನಾ ಏಷ್ಯಾದ ಬಹುತೇಕ ಎಲ್ಲಾ ಬಡ ರಾಷ್ಟ್ರಗಳನ್ನ ಗುರಿಯಾಗಿಸಿ ಅಲ್ಲಿನ ಹೆಣ್ಣುಮಕ್ಕಳನ್ನ ಕಳ್ಳಸಾಗಣೆ ಮಾಡಿ ಮಾರಾಟ ಮಾಡುತ್ತಿವೆ. ವಿಶ್ವಸಂಸ್ಥೆಯು ಕಳೆದ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿದ ವರದಿ ಪ್ರಕಾರ, ವಿಯೆಟ್ನಾಂನಲ್ಲಿ ಕಾಣೆಯಾದ ಹುಡುಗಿಯರ ಪೈಕಿ 75% ರಷ್ಟು ಹುಡುಗಿಯರನ್ನ ಮದುವೆಗಾಗಿ ಚೀನಾಕ್ಕೆ ಕರೆತರಲಾಗಿದೆ. ಮ್ಯಾನ್ಮಾರ್‌, ಕಾಂಬೋಡಿಯಾ, ಲಾವೋಸ್‌ ಗಳಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಚೀನಾ ಈಗ ಪಾಕಿಸ್ತಾನ, ಬಾಂಗ್ಲಾ ದೇಶಗಳಿಂದಲೂ ಕಳ್ಳಸಾಗಣೆ ಶುರು ಮಾಡಿದೆ.

ಒಟ್ಟಿನಲ್ಲಿ ಕುಸಿಯುತ್ತಿರುವ ಜನಸಂಖ್ಯೆಯನ್ನ ಸರಿದೂಗಿಸಲು ಚೀನಾ ಸರ್ಕಾರ ನಾನಾ ಪ್ರಯತ್ನ ನಡೆಸುತ್ತಿದೆ. ಈ ನಡುವೆ ಚೀನಾದಿಂದ ವಿದೇಶಿ ಯುವತಿಯರಿಗೆ ಬರುವ ಯಾವುದೇ ಆಫರ್‌ಗಳನ್ನು ಸ್ವೀಕರಿಸುವ ಮುನ್ನ ಎಚ್ಚರ ವಹಿಸುವಂತೆ ಅಂತಾರಾಷ್ಟ್ರೀಯ ತಜ್ಞರು ಸೂಚನೆ ನೀಡಿದ್ದಾರೆ.

TAGGED:bangladeshchinachina populationindiamarriagepakistanಚೀನಾಚೀನಾ ಜನಸಂಖ್ಯೆಪಾಕಿಸ್ತಾನಬಾಂಗ್ಲಾದೇಶಭಾರತಮದುವೆ
Share This Article
Facebook Whatsapp Whatsapp Telegram

Cinema news

Jailer
ತಲೈವಾ ನಟನೆಯ ಜೈಲರ್-2 ಸಿನಿಮಾಗೆ ವಿದ್ಯಾ ಬಾಲನ್ ಎಂಟ್ರಿ!
Bollywood Cinema Latest South cinema Top Stories
Samantha Ruth Prabhu Raj Nidimoru
ಮದ್ವೆ ಬಳಿಕ ಕಾಣಿಸಿಕೊಂಡ ಸಮಂತಾ-ರಾಜ್ ನಿಡಿಮೋರು..!
Cinema Latest Top Stories
Miraj
ʻದೇವರು ರುಜು ಮಾಡಿದನುʼ ಚಿತ್ರದ ಸಾಂಗ್ ರಿಲೀಸ್ – ವಿರಾಜ್ ಬಿಂದಾಸ್ ಕುಣಿತ
Cinema Latest Sandalwood
gilli rajat
ರಜತ್‌ ಆಚೆ ಕಳಿಸಿಯೇ ನಾನು ಆಚೆ ಹೋಗೋದು: ಸುದೀಪ್‌ ಎದುರೇ ಗಿಲ್ಲಿ ಸವಾಲ್‌
Cinema Latest Top Stories TV Shows

You Might Also Like

Shamanuru
Bengaluru City

ಶಾಮನೂರು ಅಂತ್ಯಕ್ರಿಯೆಗೆ ಸ್ಥಳ ನಿಗದಿ – ಸೋಮವಾರ 12 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

Public TV
By Public TV
2 hours ago
Shamanur Shivashankarappa
Bengaluru City

ಕಾಂಗ್ರೆಸ್‌ನ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ವಿಧಿವಶ

Public TV
By Public TV
2 hours ago
Team India 3
Cricket

ಧರ್ಮಶಾಲಾದಲ್ಲಿ ಟೀಂ ಇಂಡಿಯಾ ದರ್ಬಾರ್‌ – ಆಫ್ರಿಕಾ ವಿರುದ್ಧ 7 ವಿಕೆಟ್‌ಗಳ ಜಯ, ಸರಣಿ 2-1 ಮುನ್ನಡೆ

Public TV
By Public TV
3 hours ago
Nitin Nabin
Latest

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರ ಸಚಿವ ನಿತಿನ್ ನಬಿನ್ ನೇಮಕ

Public TV
By Public TV
3 hours ago
Davangere DC office
Davanagere

ಶಾಮನೂರು ನಿಧನ – ಸೋಮವಾರ ದಾವಣಗೆರೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

Public TV
By Public TV
3 hours ago
Shamanur Shivashankarappa 2
Bengaluru City

ದಾವಣಗೆರೆ ಧಣಿ ಶಾಮನೂರು ಶಿವಶಂಕರಪ್ಪ ನಿಧನ – ಸಿದ್ರಾಮಯ್ಯ, ದೇವೇಗೌಡ, ರಾಹುಲ್‌ ಗಾಂಧಿ ಸೇರಿ ಗಣ್ಯರಿಂದ ಸಂತಾಪ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?