– 2021ರಲ್ಲಿ ಉತ್ಪಾದನೆ ನಿಲ್ಲಿಸಿದ್ದ ಫೋರ್ಡ್
– ತಮಿಳುನಾಡು ಘಟಕ ಪುನಾರಂಭಕ್ಕೆ ನಿರ್ಧಾರ ಎಂದ ಫೋರ್ಡ್ ಕಂಪನಿ
ಚೆನ್ನೈ: ಫೋರ್ಡ್ ಮೋಟಾರ್ (Ford) ಕಂಪೆನಿಯು ತಮಿಳುನಾಡಿನಲ್ಲಿ (Tamilnadu) ರಫ್ತು ಮಾಡಲು ಉತ್ಪಾದನಾ ಘಟಕವನ್ನು ಮರುಪ್ರಾರಂಭಿಸಲು ಯೋಜಿಸಿದೆ ಎಂದು ಶುಕ್ರವಾರ ತಿಳಿಸಿದೆ. ಮುಂಬರುವ ಎರಡು ವರ್ಷದಲ್ಲಿ ಘಟಕ ಪ್ರಾರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಮೂರು ವರ್ಷಗಳ ಹಿಂದೆ ನಿರ್ಗಮಿಸಿದ ಮಾರುಕಟ್ಟೆಯನ್ನು ಮರುಪ್ರವೇಶಿಸುವ ಸಾಧ್ಯತೆಯಿದೆ.ಇದನ್ನೂ ಓದಿ: ಪ್ರಜ್ವಲ್ ವಿರುದ್ಧ 3ನೇ ಕೇಸ್- ಎಸ್‌ಐಟಿಯಿಂದ 1,691 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ಫೋರ್ಡ್ 2021ರಲ್ಲಿ ದೇಶೀಯ ಮಾರಾಟಕ್ಕಾಗಿ ಭಾರತದಲ್ಲಿ ಕಾರುಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಿತ್ತು. ಇದೀಗ ಮತ್ತೆ ಭಾರತಕ್ಕೆ ಮರಳಿದೆ. ರಾಜ್ಯದಲ್ಲಿ ರಫ್ತಿಗಾಗಿ ಉತ್ಪಾದನೆಯನ್ನು ಪುನರಾರಂಭಿಸಲು ಕಂಪನಿ ಹಾಗೂ ತಮಿಳುನಾಡು ಸರ್ಕಾರ ಈ ಕುರಿತು ನಿರ್ಧರಿಸಿದೆ. ಇದಾದ ಬಳಿಕ ಕಂಪನಿಯು ರಾಜ್ಯ ಸರ್ಕಾರಕ್ಕೆ ಉದ್ದೇಶ ಪತ್ರವನ್ನು ಸಲ್ಲಿಸಿರುವುದಾಗಿ ತಿಳಿಸಿದೆ.
ಈ ಕ್ರಮವು ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡಲು ಉತ್ಪಾದನೆಯ ಮೇಲೆ ಕೇಂದ್ರೀಕರಿಸಲು ಸೌಲಭ್ಯವನ್ನು ಮರು ನಿಯೋಜಿಸಲಾಗುತ್ತದೆ ಎಂದಿದೆ. ಇದಾದ ಬಳಿಕ ಕಾರುಗಳು ಮತ್ತು ಇತರ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಕಂಪನಿ ತಿಳಿಸಿದೆ.ಇದನ್ನೂ ಓದಿ: ರೈತರಿಗೆ ಅನುಕೂಲ ಮಾಡದೇ ಮಣ್ಣಿನ ಮಕ್ಕಳು ಅಂತಾರೆ: ಹೆಚ್‌ಡಿಕೆ ವಿರುದ್ಧ ಸಿಎಂ ವಾಗ್ದಾಳಿ