ಬಲವಂತದ ಮತಾಂತರ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರಬಹುದು : ಸುಪ್ರೀಂ ಕೋರ್ಟ್

Advertisements

ನವದೆಹಲಿ: ಬಲವಂತದ ಧಾರ್ಮಿಕ ಮತಾಂತರವು (Conversion) ರಾಷ್ಟ್ರೀಯ ಸುರಕ್ಷತೆ (National Security) ಹಾಗೂ ಧರ್ಮದ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಗಂಭೀರ ಸಮಸ್ಯೆ ಎಂದು ಸುಪ್ರೀಂ ಕೋರ್ಟ್ (Supreme Court) ಸೋಮವಾರ ಹೇಳಿದೆ.

Advertisements

ನ್ಯಾಯಾಧೀಶರಾದ ಎಂ.ಆರ್ ಶಾ ಮತ್ತು ಹಿಮಾ ಕೊಹ್ಲಿ ಅವರ ದ್ವಿಸದಸ್ಯ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆ ನಡೆಸಿತ್ತು. ಈ ವೇಳೆ ಬೆದರಿಕೆ ಹಾಕುವ ಮೂಲಕ ಅಥವಾ ಹಣ ಹಾಗೂ ಉಡುಗೊರೆಯ ಆಮಿಷವೊಡ್ಡಿ ಜನರನ್ನು ಮತಾಂತರಗೊಳಿಸುವುದರಿಂದ ರಾಷ್ಟ್ರದ ಭದ್ರತೆಗೆ ತೊಂದರೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಬಲವಂತದ ಮತಾಂತರಗಳನ್ನು ತಡೆಯಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಕುರಿತು ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ (Central Government) ತಿಳಿಸಿದೆ.

Advertisements

ಬಲವಂತದ ಧಾರ್ಮಿಕ ಮತಾಂತರವು ಅತ್ಯಂತ ಗಂಭೀರ ವಿಷಯವಾಗಿದ್ದು, ಪರಿಸ್ಥಿತಿ ಕಷ್ಟಕರವಾಗುವ ಮುನ್ನವೇ ಅವುಗಳನ್ನು ತಡೆಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಬೇಕು. ಬಲವಂತದ ಧಾರ್ಮಿಕ ಮತಾಂತರಗಳನ್ನು ನಿಲ್ಲಿಸದಿದ್ದರೆ ಅತ್ಯಂತ ಕಠಿಣ ಪರಿಸ್ಥಿತಿ ಉದ್ಭವಿಸುತ್ತದೆ. ಅಷ್ಟೇ ಅಲ್ಲದೇ ಅದು ರಾಷ್ಟ್ರದ ಭದ್ರತೆಯ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ಬಲವಂತದ ಮತಾಂತರವನ್ನು ನಿಲ್ಲಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದರ ಬಗ್ಗೆ ಕೇಂದ್ರವು ತನ್ನ ನಿಲುವನ್ನು ಸ್ಪಷ್ಟಪಡಿಸಿದರೆ ಉತ್ತಮ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಬೆದರಿಕೆ, ಉಡುಗೊರೆಗಳು ಮತ್ತು ಹಣದ ಆಮಿಷವೊಡ್ಡಿ ಮೋಸಗೊಳಿಸುವ ಮೂಲಕ ಧಾರ್ಮಿಕ ಮತಾಂತರವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಅಶ್ವನಿ ಕುಮಾರ್ ಉಪಾಧ್ಯಾಯ ಅವರು ಪಿಐಎಲ್ ಸಲ್ಲಿಸಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನು ಕೋಲಾರದಲ್ಲಿ ಬಲಿ ಕೊಡೋಕೆ ಅವರ ಪಕ್ಷದವರೇ ಪ್ರಯತ್ನ ಮಾಡ್ತಿದ್ದಾರೆ: ಸಿಎಂ ಇಬ್ರಾಹಿಂ

Advertisements

ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಸೋಲಿಸೋಕೆ ನಮಗೆ ಬಿಜೆಪಿ ಜೊತೆ ಒಪ್ಪಂದ ಅವಶ್ಯಕತೆ ಇಲ್ಲ: ಕುಮಾರಸ್ವಾಮಿ

Live Tv

Advertisements
Exit mobile version