ರಾಜಕಾರಣಿಗಳೊಂದಿಗೆ ಮಲಗಲು ಒಪ್ಪದಿದ್ದಕ್ಕೆ 6 ಬಾರಿ ತಲಾಖ್ – ಸೈಕೋ ಪತಿ ವರ್ತನೆಗೆ ಬೇಸತ್ತು ಪತ್ನಿ ದೂರು

Public TV
1 Min Read
Banshankari Police Station

– ಸೊಸೆಗೆ ಮಸಾಜ್ ಮಾಡುವಂತೆ ಕೇಳುತ್ತಿದ್ದ ಮಾವ

ಬೆಂಗಳೂರು: ರಾಜಕಾರಣಿಗಳೊಂದಿಗೆ ಮಲಗುವಂತೆ ಪತಿಯ ಒತ್ತಾಯ ಹಾಗೂ ಅತ್ತೆ ಮಾವ ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ಸಹಿಸಲಾಗದೇ ಓರ್ವ ಮಹಿಳೆ ಪತಿ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ (Banshankari Police Station) ದೂರು ದಾಖಲಿಸಿದ್ದಾರೆ.

ತನ್ನ ಸೈಕೋ ಪತಿ ಯೂನಿಸ್ ಪಾಷಾ ವರ್ತನೆಯಿಂದ ಬೇಸತ್ತು ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ರಾಜಕಾರಣಿಗಳು, ಸಹಚರರ ಜೊತೆ ಮಲಗುವಂತೆ ಒತ್ತಾಯಿಸುತ್ತಾರೆ. ಒಪ್ಪದಿದ್ದಕ್ಕೆ ಈಗಾಗಲೇ 6 ಬಾರಿ ತಲಾಖ್ ನೀಡಿದ್ದಾನೆ. ಜೊತೆಗೆ ಗರ್ಭಪಾತ ಮಾಡಿಸಿದ್ದಾನೆ. ಅಷ್ಟೇ ಅಲ್ಲದೇ ತಲೆಗೆ ಗನ್ ಇಟ್ಟು ಬೆದರಿಕೆ ಹಾಕುತ್ತಾನೆ. ಪತ್ನಿ ಮನೆಯವರಿಗೆಲ್ಲ ಮಚ್ಚು, ಲಾಂಗ್ ತೋರಿಸಿ ಬೆದರಿಸುತ್ತಾನೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಗುಡ್‌ ನ್ಯೂಸ್‌; ವಾಣಿಜ್ಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ ಭಾರಿ ಇಳಿಕೆ

ಪತಿ ಮಾತ್ರವಲ್ಲ, ಅತ್ತೆ, ಮಾವ ಕೂಡ ವರದಕ್ಷಿಣೆಗಾಗಿ ನಿರಂತರ ಟಾರ್ಚರ್ ನೀಡುತ್ತಾರೆ. ಮಾವ ಮಸಾಜ್ ಮಾಡುವಂತೆ ಕೇಳುತ್ತಾರೆ ಎಂದು ಪತಿ, ಅತ್ತೆ ಹಾಗೂ ಮಾವನ ಮೇಲೆ ಸಾಲು ಸಾಲು ಆರೋಪಗಳನ್ನು ಹೊರಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನ್ಯಾಯ ಕೊಡಿಸಿ ಎಂದು ಮಹಿಳೆ ಕೇಳಿಕೊಂಡಿದ್ದಾರೆ.

ಸದ್ಯ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಯೂನಿಸ್ ಮತ್ತು ಆತನ ತಂದೆ-ತಾಯಿ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.ಇದನ್ನೂ ಓದಿ: ಅಬ್ದುಲ್ ರಹಿಮಾನ್ ಹತ್ಯೆ ಕೇಸ್ – ಇನ್ನೋರ್ವ ಆರೋಪಿ ಅರೆಸ್ಟ್

Share This Article