ಮಾನಂತವಾಡಿ: ವಯನಾಡಿನ ತಿರುನೆಲ್ಲಿಯಲ್ಲಿ ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆ (Foreign woman molested in Kerala) ಮೇಲೆ ರೆಸಾರ್ಟ್ ಉದ್ಯೋಗಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಾಗಿದೆ.
ನೆದರ್‌ಲ್ಯಾಂಡ್‌ನ ಮಹಿಳೆಗೆ ಕಿರುಕುಳ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಯನಾಡ್‌ಗೆ ಭೇಟಿ ನೀಡಲು ಬಂದಿದ್ದ 25 ವರ್ಷದ ಯುವತಿ ಮೇಲೆ ಈ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಆಯುರ್ವೇದ ಮಸಾಜ್ (Ayurveda Massage) ವೇಳೆ ಬಲವಂತವಾಗಿ ಸೆಕ್ಸ್‌ಗೆ ಒತ್ತಾಯಿಸಿದ್ದಾರೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ.
Advertisement
ಕಳೆದ ಡಿಸೆಂಬರ್‌ನಲ್ಲಿ ಆನ್‌ಲೈನ್ ಬುಕಿಂಗ್ ಮಾಡಿದ ಬಳಿಕ ಮಹಿಳೆ ತಿರುನೆಲ್ಲಿಯ ರೆಸಾರ್ಟ್‌ಗೆ ತಲುಪಿದ್ದರು. ಬಳಿಕ ಆಯುರ್ವೇದ ಮಸಾಜ್‌ಗೆ ಮುಂದಾದರು. ಈ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಭಾರತ ಪ್ರವಾಸ ಮುಗಿಸಿ ನೆದರ್‌ಲ್ಯಾಂಡ್‌ಗೆ ಮರಳಿದ ಬಳಿಕ ಆಕೆ ದೂರು ನೀಡಿದ್ದಾಳೆ. ಕೇರಳ ಎಡಿಜಿಪಿಗೆ ಜೂನ್ 14ರಂದು ಇ-ಮೇಲ್ ಮೂಲಕ ದೂರು ಲಭಿಸಿತ್ತು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ `ಡಿ’ ಬ್ಯಾರಕ್‌ನಲ್ಲಿ ದಿನ ಕಳೆದ ಪವಿತ್ರಾಗೌಡ!
Advertisement
ಭಾರತದಲ್ಲಿ ದೂರು ದಾಖಲಿಸುವ ವಿಧಾನ ತಿಳಿಯದ ಕಾರಣ ದೂರು ದಾಖಲಿಸಲು ವಿಳಂಬವಾಗಿರೋದಾಗಿ ಮಹಿಳೆ ಹೇಳಿದ್ದಾರೆ. ಆದರೆ, ದೂರು ಸ್ವೀಕರಿಸಿ ವಾರ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿವಿಧ ಸಂಘಟನೆಗಳು ಆರೋಪಿಸಿವೆ. ಇದನ್ನೂ ಓದಿ: ಆದಿಯೋಗಿ ಸನ್ನಿಧಿಯಲ್ಲಿ KGF ನಟಿ ಶ್ರೀನಿಧಿ ಶೆಟ್ಟಿ ಯೋಗ ಪ್ರದರ್ಶನ – ಸೈನಿಕರೂ ಭಾಗಿ
Advertisement
Advertisement
ಆದರೆ ವಿಚಾರಣೆಯಲ್ಲಿ ವಿಳಂಬ ಮಾಡಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದರೂ ಯುವತಿ ಸಲ್ಲಿಸಿರುವ ದೂರಿನಲ್ಲಿ ಸಂಪೂರ್ಣ ಮಾಹಿತಿ ಇಲ್ಲದ ಕಾರಣ ಇತರೆ ಕಾನೂನು ಪ್ರಕ್ರಿಯೆ ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.