ನವದೆಹಲಿ: 2019ರ ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು ಇದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿಗೆ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದ 2018 ರಲ್ಲಿ ಫೋರ್ಬ್ಸ್ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರು 83 ನೇ ಸ್ಥಾನ ಪಡೆದುಕೊಂಡಿದ್ದರು. ಆದರೆ ಈ ವರ್ಷ ಕೊಹ್ಲಿ ಅವರು 17 ಸ್ಥಾನ ಇಳಿದು 100ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಭಾರತೀಯ ಆಟಗಾರ ಆಗಿದ್ದಾರೆ.
Advertisement
ಈ ವರ್ಷ ಕೊಹ್ಲಿ ಸಂಭಾವನೆ ರೂಪದಲ್ಲಿ 25 ಮಿಲಿಯನ್ ಡಾಲರ್ (174.27 ಕೋಟಿ) ಪಡೆದಿದ್ದಾರೆ. ಇದರಲ್ಲಿ 21 ಮಿಲಿಯನ್ ಡಾಲರ್ (146.39 ಕೋಟಿ) ಜಾಹೀರಾತಿನಿಂದ ಪಡೆದಿದ್ದಾರೆ. ಇನ್ನುಳಿದ 4 ಮಿಲಿಯನ್ ಡಾಲರ್ (27.88 ಕೋಟಿ) ಹಣವನ್ನು ಕ್ರಿಕೆಟ್ ಸಂಭಾವನೆಯಿಂದ ಪಡೆದುಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೊಹ್ಲಿ ಈ ವರ್ಷ ಆದಾಯ 6.97 ಕೋಟಿ ಜಾಸ್ತಿಯಾಗಿದೆ.
Advertisement
Announcing: The World's Highest-Paid Athletes 2019 https://t.co/zwRDnDisU1 pic.twitter.com/UoEEv7CeNV
— Forbes (@Forbes) June 11, 2019
Advertisement
ಇನ್ನೂ ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಬಾರ್ಸಿಲೋನಾದ ಫುಟ್‍ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಇದ್ದಾರೆ. ಪೋರ್ಚುಗಲ್‍ನ ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
ಫೋರ್ಬ್ಸ್ ನ ಟಾಪ್ 5 ಶ್ರೀಮಂತ ಆಟಗಾರರ ಪಟ್ಟಿ
1. ಲಿಯೋನಲ್ ಮೆಸ್ಸಿ 127 ಮಿಲಿಯನ್ ಡಾಲರ್ (880.44 ಕೋಟಿ)
2. ಕ್ರಿಸ್ಟಿಯಾನೋ ರೊನಾಲ್ಡೋ 109 ಮಿಲಿಯನ್ ಡಾಲರ್ ( 755.64 ಕೋಟಿ)
3. ನೇಮ್ಮಾರ್ 105 ಮಿಲಿಯನ್ ಡಾಲರ್ (727.91 ಕೋಟಿ)
4. ಅಲ್ವೆರೆಜ್ 94 ಮಿಲಿಯನ್ ಡಾಲರ್ (651.65 ಕೋಟಿ)
5. ರೋಜರ್ ಫೆಡರರ್ 93.4 ಮಿಲಿಯನ್ ಡಾಲರ್ (647.77 ಕೋಟಿ)